ವಿವಾದದ ಸುಳಿಗೆ ಸಿಲುಕಿದ "ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರತಂಡ: ಸಿನಿಮಾ ವಿರುದ್ಧ ಠಾಣೆ ಮೆಟ್ಟಿಲೇರಿದ್ದೇಕೆ BMTC?

ಜನವರಿ 9, 2025 - 18:01
 0  9
ವಿವಾದದ ಸುಳಿಗೆ ಸಿಲುಕಿದ "ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರತಂಡ: ಸಿನಿಮಾ ವಿರುದ್ಧ ಠಾಣೆ ಮೆಟ್ಟಿಲೇರಿದ್ದೇಕೆ BMTC?

ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರು’ ಸಿನಿಮಾ ತಂಡದ ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಬಿಎಂಟಿಸಿ ಪ್ರಕರಣ ದಾಖಲಿಸಿದೆ. 

ಸಿನಿಮಾ ಶೂಟಿಂಗ್ ಎಂದು ಬಿಎಂಟಿಸಿ ಬಸ್ ಬಾಡಿಗೆ ಪಡೆದು ಬಿಎಂಟಿಸಿ ಸಂಸ್ಥೆಯ ವಿರುದ್ಧವೇ ಚಿತ್ರತಂಡ  ವಿಡಿಯೋ ಚಿತ್ರಣ ಮಾಡಿರುವ ಹಾಗೂ ಬಿಎಂಟಿಸಿ ಬಸ್ ಇಂದ ಆಕ್ಸಿಡೆಂಟ್ ಆಗ್ತಿದೆ ಎಂದು ಅಪಪ್ರಚಾರ ಮಾಡಿರುವ ಆರೋಪದ ಮೇಲೆ  ದೂರು ದಾಖಲಾಗಿದೆ.

ಎಸ್, ಬಿಎಂಟಿಸಿ ಬಸ್ ಹಿಂಭಾಗದಲ್ಲಿ ತಮ್ಮ ಸಿನಿಮಾದ ಪೋಸ್ಟರ್ ಅಂಟಿಸಿ, ಆ ಪೋಸ್ಟರ್ ಮೂಲಕ ಸಿನಿಮಾದ ಪ್ರಚಾರ  ಮಾಡಲು ಹೊರಟಿದ್ರು, ಆ ಪೋಸ್ಟರ್ ನೋಡಿಕೊಂಡು ಬಂದು ವಾಹನಸವರರು ಡಿಕ್ಕಿ ಹೊಡೆಯುತ್ತಿದ್ದಾರೆ ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿತ್ತು ಇದರಿಂದ ಬಿಎಂಟಿಸಿ ಬಸ್ಗೆ ಅಪಪ್ರಚಾರವಾಗಿದೆಯಂತೆ. 

ಪೋಸ್ಟರ್ ನೋಡಿಕೊಂಡು ಬಂದು ಪ್ರತಿದಿನ ವಾಹನ ಸವಾರರು ಡಿಕ್ಕಿ ಹೊಡೆಯುತ್ತಿದ್ದಾರೆ ಅಂತಾ ಜನರಿಗೆ ತಪ್ಪು ಮಾಹಿತಿ ನೀಡಿದೆ. ಬಸ್ ಹಿಂಭಾಗದಲ್ಲಿ ಕಾರು ಚಾಲಕ ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೀತಿಯಲ್ಲಿ ನಂತರ ಬಿಎಂಟಿಸಿ ಡ್ರೈವರ್​ಗೆ ಕಾರು ಚಾಲಕ ಕೊರಳಪಟ್ಟಿ ಹಿಡಿದು ಎಳೆದಾಡುತ್ತಿರುವ ರೀತಿಯಲ್ಲಿ ವಿಡಿಯೋ ಮಾಡಲಾಗಿದೆ. ಬಿಎಂಟಿಸಿ ಬೆಂಗಳೂರು ನಾಗರಿಕರಿಗೆ ಉತ್ತಮ ಸೇವೆ ನೀಡುತ್ತಿದೆ.

ಜಾಹೀರಾತುಗಳಿಂದ ಯಾವುದೇ ಆ್ಯಕ್ಸಿಡೆಂಟ್ ಆಗಿರುವ ಪ್ರಕರಣಗಳು ದಾಖಲಾಗಿಲ್ಲ. ಹೀಗಿರುವ ಈ ಚಿತ್ರವು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಈ ವಿಡಿಯೋದಿಂದ ಸಾರ್ವಜನಿಕರಲ್ಲಿ ಬಿಎಂಟಿಸಿ ಮೇಲೆ ಕೆಟ್ಟು ಅಭಿಪ್ರಾಯ ಮೂಡುವಂತೆ ಮಾಡಿದೆ. ವಿಡಿಯೋ ತುಣಕನ್ನು ತಕ್ಷಣವೇ ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಬೇಕು ಎಂದು ಬಿಎಂಟಿಸಿ ಆಗ್ರಹಿಸಿದೆ. ಶ್ರೀ ಗುರುಪ್ರಸಾದ್ ಜಿಎನ್ ಪಿಚ್ಚರ್ ಶಾಪ್ ಹಾಗೂ ಚಿತ್ರದಲ್ಲಿ ಭಾಗಿಯಾಗಿರುವ ಕಲಾವಿದರ ವಿರುದ್ಧ ದೂರು ನೀಡಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow