ಬೆಂಗಳೂರಿನಲ್ಲಿ ವೈರಲ್ ಸೋಂಕು ಏರಿಕೆ: ವೈದ್ಯರ ಸಲಹೆ ಏನು!?

ನವೆಂಬರ್ 8, 2024 - 22:01
 0  9
ಬೆಂಗಳೂರಿನಲ್ಲಿ ವೈರಲ್ ಸೋಂಕು ಏರಿಕೆ: ವೈದ್ಯರ ಸಲಹೆ ಏನು!?

ಬೆಂಗಳೂರು:- ಚಳಿಗಾಲ ಹಾಗೂ ದೀಪಾವಳಿಯ ಪಟಾಕಿ ಎಫೆಕ್ಟ್​ನಿಂದಾಗಿ ಬೆಂಗಳೂರಿನಲ್ಲಿ ವೈರಲ್ ಇನ್ಫೆಕ್ಷನ್​ಗಳು ಹೆಚ್ಚಾಗುತ್ತಿವೆ. ಸೀವಿಯರ್ ಲಂಗ್ಸ್ ಇನ್ಫೆಕ್ಷನ್, ಶ್ವಾಸನಾಳದ ಅಸ್ತಮಾ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಶೇ 20% ರಿಂದ 25 % ವೈರಲ್ ಸೋಂಕು ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪ್ರತಿ ವರ್ಷ ಚಳಿಗಾಲದ ಜೊತೆಗೆ ಬೆಳಕಿನ ಹಬ್ಬ ದೀಪಾವಳಿ ಬರುತ್ತದೆ ಆದರೆ ಈ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಅತಿಯಾದ ಪಟಾಕಿ ಸಿಡಿತದಿಂದ ಅತಿಯಾದ ಮಾಲೀನ್ಯದಿಂದ ರಾಜಧಾನಿಯ ಜನರಲ್ಲಿ ವೈರಲ್ ಸೋಂಕು ಪ್ರಮಾಣ ಏರಿಕೆ ಕಂಡಿದೆ.

ಬೆಂಗಳೂರಿಗರಿಗೆ ಚಳಿಗಾಲದ ಜೊತೆಗೆ ಲಂಗ್ಸ್ ಇನ್ಫೆಕ್ಷನ್, ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ ಮಕ್ಕಳಲ್ಲಿ ಹಾಗೂ ವಯೋವೃದ್ಧರಲ್ಲಿ ಕ್ರಾನಿಕ್ ಕಾಫ್ ಬ್ರಾಂಕೈಟಿಸ್ ಕಂಡು ಬರ್ತಿದೆ. ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ವಯೋವೃದ್ಧರಲ್ಲಿ ಸಿಓಪಿಡಿ, ಐಎಲ್​ಡಿ, ಸಾರ್ಕೊಯಿಡೋಸಿಸ್ ಮತ್ತು ಇತರ ಶ್ವಾಸಕೋಶದ ಸಮಸ್ಯೆಗಳ ಮೇಲೆ ಪರಿಣಾಮ ಬೀರತ್ತಿದೆ. 

ಅತಿಯಾದ ಶೀತ ಉಸಿರಾಟದ ಸಮಸ್ಯೆಗೂ ಕಾರಣವಾಗುತ್ತಿದೆ. ಹೀಗಾಗಿ ಜನರು ವಿಂಟರ್ ಸೀಸನ್ ಮುಗಿಯುವರೆಗೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ವಿಷಕಾರಿಯಾದ ಗಾಳಿಯಿಂದ ರಕ್ಷಣೆ ಪಡೆಯಬೇಕಿದ್ದು ಚಳಿಗಾಲ ಮುಗಿಯುವರೆಗೂ ಎಚ್ಚರವಹಿಸಬೇಕಿದೆ ಎಂದು ರಾಜೀವಗಾಂಧಿ ಎದೆರೋಗ ತಜ್ಞ ಡಾ. ನಾಗರಾಜ್ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow