ಬ್ಯಾಂಕ್ ನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಹಾಗಿದ್ರೆ ಇಲ್ಲಿ ಮ್ಯಾನೇಜರ್ ಹುದ್ದೆ ಖಾಲಿ ಇದೆ!

ನಿಮಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ ಹಾಗಿದ್ರೆ ನಿಮಗಿಲ್ಲಿದೆ ಗುಡ್ ನ್ಯೂಸ್. ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇಂಡಸ್ಟ್ರೀಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತವಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ.
ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಈಗಾಗಲೇ ನೋಟಿಫಿಕೆಶನ್ ರಿಲೀಸ್ ಮಾಡಲಾಗಿದೆ. ಬಂಗಾರದಂತ ಅವಕಾಶವನ್ನು ಅಭ್ಯರ್ಥಿಗಳು ಬಳಕೆ ಮಾಡಿಕೊಳ್ಳಬೇಕು.
ಉದ್ಯೋಗದ ಹೆಸರು; ವಿವಿಧ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು (Specialist Officer)
ಡೆಪ್ಯೂಟಿ ಜನರಲ್ ಮ್ಯಾನೇಜರ್- 8
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 42
ಮ್ಯಾನೇಜರ್ ಹುದ್ದೆಗಳು- 69
ಒಟ್ಟು ಉದ್ಯೋಗಗಳು; 119 ಇವೆ
ವಿದ್ಯಾರ್ಹತೆ;
ಬಿಇ, ಬಿಟೆಕ್, ಎಂಎಸ್ಸಿ, ಎಂಸಿಎ, ಎಂಟೆಕ್, ಎಂಇ, ಸಿಎ, ಎಂಬಿಎ, ಬಿಸಿಎ, ಬಿಎಸ್ಸಿ, ಸಿವಿಲ್ ಇಂಜಿನಿಯರ್, (ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆ ಕೇಳಲಾಗಿದೆ)
ಅರ್ಜಿ ಶುಲ್ಕ ಎಷ್ಟು ಪಾವತಿ ಮಾಡಬೇಕು?
ಜನರಲ್/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳು- 1,050 ರೂಪಾಯಿ
ಎಸ್ಸಿ ಎಸ್ಟಿ- 250 ರೂಪಾಯಿ
ವಯೋಮಿತಿ- 25 ರಿಂದ 40 ವರ್ಷದ ಒಳಗಿನವರು
ಹುದ್ದೆಗೆ ಆಯ್ಕೆ ಪ್ರಕ್ರಿಯೆ
ಪೂರ್ವಭಾವಿ ತಪಾಸಣೆ
ದಾಖಲೆ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ; 20 ಏಪ್ರಿಲ್ 2025
ನಿಮ್ಮ ಪ್ರತಿಕ್ರಿಯೆ ಏನು?






