BSF Recruitment: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ: ಆಯ್ಕೆಯಾದರೆ 69 ಸಾವಿರ ರೂ. ಸಂಬಳ

ಅಕ್ಟೋಬರ್ 24, 2025 - 08:02
 0  8
BSF Recruitment: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ: ಆಯ್ಕೆಯಾದರೆ 69 ಸಾವಿರ ರೂ. ಸಂಬಳ

ಡಿ ಭದ್ರತಾ ಪಡೆ (BSF) ಕ್ರೀಡಾ ಕೋಟಾದಡಿಯಲ್ಲಿ ಗ್ರೂಪ್ ‘C’ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಅಧಿಸೂಚನೆಯಡಿ ಒಟ್ಟು 391 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇವುಗಳಲ್ಲಿ ಪುರುಷ ಅಭ್ಯರ್ಥಿಗಳಿಗೆ 197 ಹುದ್ದೆಗಳು, ಮತ್ತು ಮಹಿಳಾ ಅಭ್ಯರ್ಥಿಗಳಿಗೆ 194 ಹುದ್ದೆಗಳು ಮೀಸಲಾಗಿವೆ. ಆಸಕ್ತ ಮತ್ತು ಅರ್ಹ ಕ್ರೀಡಾಪಟುಗಳು ಅಕ್ಟೋಬರ್ 16ರಿಂದ ನವೆಂಬರ್ 4ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಕ್ರೀಡಾ ವಿಭಾಗಗಳು

ಅಥ್ಲೆಟಿಕ್ಸ್, ಬಾಕ್ಸಿಂಗ್, ಬಾಸ್ಕೆಟ್‌ಬಾಲ್, ಹಾಕಿ, ಫುಟ್‌ಬಾಲ್, ಈಜು, ಶೂಟಿಂಗ್, ಜೂಡೋ, ಕರಾಟೆ, ಕುಸ್ತಿ, ವೇಟ್‌ಲಿಫ್ಟಿಂಗ್, ವಾಲಿಬಾಲ್, ಹ್ಯಾಂಡ್‌ಬಾಲ್, ಟೇಬಲ್ ಟೆನಿಸ್, ಬಿಲ್ಲುಗಾರಿಕೆ, ಬ್ಯಾಡ್ಮಿಂಟನ್ ಮತ್ತು ಸೈಕ್ಲಿಂಗ್ ವಿಭಾಗಗಳಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆಗಳು

  • ಅಭ್ಯರ್ಥಿಗಳು ಕನಿಷ್ಠ ಹತ್ತನೇ ತರಗತಿ (ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು.

  • ನವೆಂಬರ್ 4, 2023 ರಿಂದ ನವೆಂಬರ್ 4, 2025ರ ನಡುವೆ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದವರು ಅಥವಾ ಭಾಗವಹಿಸಿದವರು ಅರ್ಹರಾಗಿರುತ್ತಾರೆ.

ವಯೋಮಿತಿ

  • ಕನಿಷ್ಠ: 18 ವರ್ಷ

  • ಗರಿಷ್ಠ: 23 ವರ್ಷ (ಆಗಸ್ಟ್ 1, 2025ರಂತೆ)

  • ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ

  • ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ

ಅರ್ಜಿ ಶುಲ್ಕ

  • ಯುಆರ್, ಒಬಿಸಿ ಅಭ್ಯರ್ಥಿಗಳು: ₹159

  • ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ

ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರಲಿಲ್ಲ.
ಅಭ್ಯರ್ಥಿಗಳ ಆಯ್ಕೆ ದೈಹಿಕ ಪರೀಕ್ಷೆ (PST), ಕ್ರೀಡಾ ಮೆರಿಟ್ ಪಟ್ಟಿ ಹಾಗೂ ವೈದ್ಯಕೀಯ ಪರೀಕ್ಷೆ ಆಧಾರದ ಮೇಲೆ ನಡೆಯಲಿದೆ.

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹21,700 ರಿಂದ ₹69,100ರವರೆಗೆ ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್‌ಲೈನ್ ಅರ್ಜಿಗಾಗಿ ಅಭ್ಯರ್ಥಿಗಳು BSF ಅಧಿಕೃತ ವೆಬ್‌ಸೈಟ್ www.bsf.gov.in ಗೆ ಭೇಟಿ ನೀಡಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow