ಭಾರತೀಯ ವಾಯುಪಡೆಗೆ ಅಗ್ನಿವೀರ್ ಸಂಗೀತಗಾರ ಹುದ್ದೆ: ಸಂಗೀತ ಪ್ರೀತಿ ಇದ್ದರೆ ಈ ಅವಕಾಶ ಮಿಸ್ಸಾಗ್ಬೇಡಿ!

ದೇಶದ ಸೇವೆ ಮಾಡುವ ಕನಸು + ಸಂಗೀತಕ್ಕೆ ಪ್ರೀತಿ ಇದ್ರೆ, ಈ ಸುದ್ದಿ ನಿಂಗಾಗಿ! ಭಾರತೀಯ ವಾಯುಪಡೆ ಅಗ್ನಿವೀರ್ (ವಾಯು - ಸಂಗೀತಗಾರ) ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪುರುಷರು ಮಾತ್ರವಲ್ಲ, ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ಇದೆ.
ಅರ್ಜಿ ಸಲ್ಲಿಕೆ ಆರಂಭ: ಜುಲೈ 5
ಕೊನೆಯ ದಿನಾಂಕ: ಜುಲೈ 13
ಅಧಿಕೃತ ವೆಬ್ಸೈಟ್: agnipathvayu.cdac.in
ಅರ್ಹತೆ ಮತ್ತು ಅಗತ್ಯಗಳು:
ವಿದ್ಯಾರ್ಹತೆ: 10ನೇ ತರಗತಿ ಪಾಸ್ (ಮಾನ್ಯತೆ ಪಡೆದ ಮಂಡಳಿಯಿಂದ)
ವಯೋಮಿತಿ: ಕನಿಷ್ಠ 17.5 ವರ್ಷ – ಗರಿಷ್ಠ 21 ವರ್ಷ
ಸಂಗೀತ ಜ್ಞಾನ: ಕೀಬೋರ್ಡ್, ತಬಲಾ, ಡ್ರಮ್ಸ್, ಗಿಟಾರ್, ಕೊಳಲು, ಗಾಯನ – ಯಾವುದೇ ವಾದ್ಯದಲ್ಲಿ ಹಿಡಿತ ಇರಬೇಕು
ನೀವು ಹಾಡು (ರಾಗ/ಲಯ) ಗುರುತಿಸಿ ಹಾಡಲು ತಯಾರಾಗಿರಬೇಕು
ದೈಹಿಕ ಸಾಮರ್ಥ್ಯ ಪರೀಕ್ಷೆ:
ಪುರುಷ ಅಭ್ಯರ್ಥಿಗಳು:
1.6 ಕಿಮೀ ಓಟ – 6 ನಿಮಿಷ 30 ಸೆಕೆಂಡುಗಳಲ್ಲಿ
20 ಪುಷ್ಅಪ್, 20 ಸಿಟ್ಅಪ್
ಮಹಿಳಾ ಅಭ್ಯರ್ಥಿಗಳು:
1.6 ಕಿಮೀ ಓಟ – 8 ನಿಮಿಷಗಳಲ್ಲಿ
10 ಪುಷ್ಅಪ್, 15 ಸಿಟ್ಅಪ್
ಸಂಬಳ ಮತ್ತು ಭತ್ಯೆ:
ವರ್ಷ ತಿಂಗಳ ಸಂಬಳ
Year 1 ₹30,000
Year 2 ₹33,000
Year 3 ₹36,500
Year 4 ₹40,000
ಇನ್ನು ಮಿಲಿಟರಿ ಭತ್ಯೆ, ಬಟ್ಟೆ, ಆಹಾರ ಸೇರಿದಂತೆ ಹಲವಾರು ಸೌಲಭ್ಯಗಳು ಇರುತ್ತವೆ.
ಸೇವಾವಧಿ: 4 ವರ್ಷ (ಈ ಅವಧಿಯಲ್ಲಿ ಮದುವೆಗೆ ಅವಕಾಶವಿಲ್ಲ)
ಆಯ್ಕೆ ಪ್ರಕ್ರಿಯೆ:
1. 10ನೇ ತರಗತಿ ಅಂಕಗಳ ಆಧಾರದ ಮೇಲೆ ಶಾರ್ಟ್ಲಿಸ್ಟ್
2. ದೈಹಿಕ ಪರೀಕ್ಷೆ (PFT)
3. ಸಂಗೀತ ಪ್ರತಿಭೆ ಪರೀಕ್ಷೆ
4. ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ:
1. ವೆಬ್ಸೈಟ್ಗೆ ಹೋಗಿ – agnipathvayu.cdac.in
2. “Agniveervayu Musician 2025” ಲಿಂಕ್ ಕ್ಲಿಕ್ ಮಾಡಿ
3. ಅರ್ಜಿ ಭರ್ತಿ ಮಾಡಿ
4. ದಾಖಲೆ ಅಪ್ಲೋಡ್ ಮಾಡಿ
5. ಶುಲ್ಕ ಪಾವತಿಸಿ
6. ಫಾರ್ಮ್ ಸಬ್ಮಿಟ್ ಮಾಡಿ ಮತ್ತು ಕಾಪಿ ಉಳಿಸಿಕೊಳ್ಳಿ
ನಿಮ್ಮ ಪ್ರತಿಕ್ರಿಯೆ ಏನು?






