ಮತ್ತೆ ದರ್ಶನ್ʼಗೆ ಜೈಲು ಫಿಕ್ಸ್! ಕಾನೂನಿನಲ್ಲಿ 'ದಾಸ'ನಿಗಿರುವ ಅವಕಾಶಗಳೇನು..?
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಇದರ ಪರಿಣಾಮವಾಗಿ ಏಳು ಆರೋಪಿಗಳು ಮತ್ತೆ ಜೈಲಿಗೆ ಹೋಗಿದ್ದಾರೆ.
ಹೈಕೋರ್ಟ್ ಮೊದಲು ಎಲ್ಲ ಆರೋಪಿಗಳಿಗೆ ಜಾಮೀನು ನೀಡಿದ್ದರೂ, ದರ್ಶನ್ ಅವರಿಗೆ ಸ್ವಲ್ಪ ಮುಂಚಿತವಾಗಿ ಮಧ್ಯಂತರ ಜಾಮೀನು ನೀಡಲಾಗಿತ್ತು. ಈಗ ಸುಪ್ರೀಂಕೋರ್ಟ್ ಜಾಮೀನು ರದ್ದುಪಡಿಸುವುದರೊಂದಿಗೆ, ಜೈಲಿನಲ್ಲಿದ್ದ ವೇಳೆ ದರ್ಶನ್ಗೆ ನೀಡಿದ್ದ ವಿಶೇಷ ಸೌಲಭ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮತ್ತೆ ಅಂತಹ ಘಟನೆ ನಡೆಯದಂತೆ ಎಚ್ಚರಿಕೆ ನೀಡಿದೆ.
ಸದ್ಯ, ಸುಪ್ರೀಂಕೋರ್ಟ್ ಆದೇಶದ ವಿರುದ್ಧ ದರ್ಶನ್ ಮೇಲ್ಮನವಿ ಸಲ್ಲಿಸುವ ಅವಕಾಶವಿಲ್ಲ. ಹೀಗಾಗಿ ಕನಿಷ್ಠ ಆರು ತಿಂಗಳು ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ. ಆರು ತಿಂಗಳ ಬಳಿಕ ಮಾತ್ರ ಅವರು ಮತ್ತೆ ಜಾಮೀನು ಅರ್ಜಿ ಸಲ್ಲಿಸಬಹುದು, ಅದು ಕೂಡ ಸುಪ್ರೀಂಕೋರ್ಟ್ನಲ್ಲಿಯೇ.
ಆರೋಗ್ಯದ ಗಂಭೀರ ಕಾರಣಗಳಿದ್ದಲ್ಲಿ ಮಾತ್ರ ಮಧ್ಯಂತರ ಜಾಮೀನು ಪಡೆಯುವ ಅವಕಾಶವಿದೆ. ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ತಪ್ಪಿಲ್ಲ ಎಂಬ ತೀರ್ಪು ಬಂದರೆ ಅಥವಾ ಶಿಕ್ಷೆಯ ಅವಧಿ ಪೂರ್ಣಗೊಂಡರೆ ಮಾತ್ರ ದರ್ಶನ್ ಬಿಡುಗಡೆ ಹೊಂದಲು ಸಾಧ್ಯ.
ನಿಮ್ಮ ಪ್ರತಿಕ್ರಿಯೆ ಏನು?