ಮತ್ತೆರಡು ಹುಲಿ ಮರಿಗಳ ಸಾವು! ಹುಟ್ಟಿದ 15 ದಿನಕ್ಕೆ ಕಣ್ಮುಚ್ಚಿದ ಕಂದಮ್ಮಗಳು 

ಆಗಸ್ಟ್ 13, 2025 - 12:12
 0  8
ಮತ್ತೆರಡು ಹುಲಿ ಮರಿಗಳ ಸಾವು! ಹುಟ್ಟಿದ 15 ದಿನಕ್ಕೆ ಕಣ್ಮುಚ್ಚಿದ ಕಂದಮ್ಮಗಳು 

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ ಸಾವು ಪ್ರಕರಣ ಇನ್ನೂ ಮಾಸುವ ಮುನ್ನವೇ, ಮತ್ತೆ ಹುಲಿ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಕಾವೇರಿ ವನ್ಯಧಾಮದ ಹೊಳೆಮೂರ್ದಟ್ಟಿ ಗಸ್ತಿನ ಕಿರುಬನಕಲ್ಲುಗುಡ್ಡ ಬಳಿ 2 ಹುಲಿ ಮರಿಗಳು ಮೃತಪಟ್ಟಿವೆ.

ಸುಮಾರು 10 ದಿನಗಳ ಹಿಂದೆ 1 ಹೆಣ್ಣು ಮತ್ತು 1 ಗಂಡು ಹುಲಿ ಮರಿ ಮೃತಪಟ್ಟಿದ್ದು, ತಾಯಿಯಿಂದ ಬೇರ್ಪಟ್ಟ ಮರಿಗಳು ಹಸಿವಿನಿಂದ ನಿತ್ರಾಣಗೊಂಡು ಸಾವನ್ನಪ್ಪಿರುವ ಸಾಧ್ಯತೆಯನ್ನು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಎರಡು-ಮೂರು ದಿನಗಳ ಅಂತರದಲ್ಲಿ ಎರಡೂ ಮರಿಗಳು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಅಂದಹಾಗೆ ಈ ಹುಲಿಮರಿಗಳು ಕೇವಲ 15 ದಿನಗಳ ಹಿಂದೆ ಜನಸಿದ್ದವಾಗಿವೆ. ಸದ್ಯ, ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ಹೊರಬಂದಿದ್ದು, ತಾಯಿಯಿಂದ ಬೇರ್ಪಟ್ಟ ಹಿನ್ನೆಲೆ ಹಾಲಿಲ್ಲದ ಹಸಿನಿಂದ ಬಳಲಿ ಸಾವು ಸಂಭವಿಸಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರಕರಣ, ಇತ್ತೀಚೆಗೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಸಂಭವಿಸಿದ 5 ಹುಲಿಗಳ ಸಾವು ಪ್ರಕರಣದ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow