"ಮರ್ಯಾದೆ ಪ್ರಶ್ನೆಗೆ" ಶರಣ್ ಸಿಂಗಿಂಗ್! ಮಧ್ಯಮ ವರ್ಗದ ಜೀವನ ವಿವರಿಸಿದ ಹಾಡು!

ಸಖತ್ ಸ್ಟುಡಿಯೋ ಮೂಲಕ ಕನ್ನಡ ಚಿತ್ರರಂಗಕ್ಕೊಂದು ಹೊಸ ಸಿನಿಮಾ ಬರಲಿದೆ ಎಂಬ ಸುದ್ದಿಯನ್ನು ಕೇಳಿಯೇ ಇರುತ್ತೀರಿ.. ಆ ಸಮಯ ಬಹಳಷ್ಟು ಹತ್ತಿರ ಬರುತ್ತಿದೆ.
ಸಖತ್ ಸ್ಟುಡಿಯೋ ಬ್ಯಾನರ್, ಆರ್‌ಜೆ ಪ್ರದೀಪ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಮರ್ಯಾದೆ ಪ್ರಶ್ನೆ' ಸಿನಿಮಾ ಈಗ ಪ್ರಮೋಶನ್ ಹಂತಕ್ಕೆ ಬಂದಿದೆ.
ಇನ್ನೂ ಮರ್ಯಾದೆ ಪ್ರಶ್ನೆ’ ಸಿನಿಮಾಕ್ಕಾಗಿ ನಟ ಶರಣ್ ಅವರು ಹಾಡಿದ್ದಾರೆ. ಮರ್ಯಾದೆ ಪ್ರಶ್ನೆ ಸಿನಿಮಾದ ಸಂಗೀತ ನಿರ್ದೇಶಕ ಅರ್ಜುನ್ ರಾಮು ಈ ಹಾಡನ್ನು ಜಾನಪದ ಶೈಲಿಯಲ್ಲಿ ಕಂಪೋಸ್ ಮಾಡಿದ್ದಾರೆ.
ಹಾಡಿನಲ್ಲಿ ನಟರ ಪಾತ್ರದ ಪರಿಚಯದ ಜೊತೆ ಅವರು ಬದುಕುತ್ತಿರುವ ಮಧ್ಯಮ ವರ್ಗದ ಸಮಾಜವನ್ನು ಪರಿಚಯಿಸುವ ಸಲುವಾಗಿ ಸಾಂದರ್ಭಿಕವಾಗಿ ಈ ಹಾಡನ್ನು ಬಳಸಲಾಗಿದೆ ಎಂದು ಚಿತ್ರದ ನಿರ್ದೇಶಕ ನಾಗರಾಜ ಸೋಮಯಾಜಿ ತಿಳಿಸಿದ್ದಾರೆ.
ಈಗಾಗಲೇ ಬಿಡುಗಡೆ ಮಾಡಿರುವ ಕ್ಯಾರೆಕ್ಟರ್ ಪೋಸ್ಟರ್ ನಲ್ಲಿ ರಾಕೇಶ್ ಅಡಿಗ ಅವರು ಒಬ್ಬ ಕಾರ್ಯಕರ್ತನಾಗಿ ಸುನಿಲ್ ರಾವ್ ಅವರು ಒಬ್ಬ ಡೆಲಿವರಿಬಾಯಾಗಿ,ಪೂರ್ಣಚಂದ್ರ ಮೈಸೂರು ಕ್ಯಾಬ್ ಡ್ರೈವರ್ ಆಗಿ, ತೇಜು ಬೆಳ್ವಾಡಿ ಅವರು ಸೇಲ್ಸ್ ಗರ್ಲ್ ಆಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿದ್ದಾರೆ.
ಮಧ್ಯಮ ವರ್ಗದ ಬಗ್ಗೆ ಇರುವ ಈ ಕತೆಯಲ್ಲಿ ಈ ಹಾಡು ತುಂಬಾ ಸೊಗಸಾದ ಸಾಹಿತ್ಯವನ್ನು ಒಳಗೊಂಡಿದೆ.ಈ ಹಾಡಿನ ಸಾಹಿತ್ಯದಲ್ಲಿ ಬರುವ ಪ್ರತಿ ಸಾಲುಗಳು ಧನಾತ್ಮಕ ಚಿಂತನೆಗೆ ಕರೆದೊಯ್ಯುತ್ತದೆ. ದಿನ ಬೆಳಗಾದರೆ ಕೇಳುವ ಹಾಡಾಗಿರಬೇಕು ಎಂಬುದು ಈ ಹಾಡಿನ ಮುಖ್ಯ ಉದ್ದೇಶವಾಗಿ ಕಾಣುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






