ಮಾಜಿ ಪತಿಯ ಮದುವೆಗೆ ಸಮಂತಾ ಕಾಮೆಂಟ್: ಸ್ಯಾಮ್ ಬಗ್ಗೆ ನೆಟ್ಟಿಗರ ತರಾವರಿ ಕಾಮೆಂಟ್!

ಡಿಸೆಂಬರ್ 5, 2024 - 18:06
 0  18
ಮಾಜಿ ಪತಿಯ ಮದುವೆಗೆ ಸಮಂತಾ ಕಾಮೆಂಟ್: ಸ್ಯಾಮ್ ಬಗ್ಗೆ ನೆಟ್ಟಿಗರ  ತರಾವರಿ ಕಾಮೆಂಟ್!

ಟಾಲಿವುಡ್ ಹೀರೋ ಅಕ್ಕಿನೇನಿ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಲ ಅವರ ವಿವಾಹ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಬುಧವಾರ ಅದ್ಧೂರಿಯಾಗಿ ನೆರವೇರಿತು. ಈ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಮದುವೆಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನವಜೋಡಿಗೆ ನೆಟ್ಟಿಗರು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.

ಈ ಮಧ್ಯೆ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಅವರ ವಿವಾಹ ನೆರವೇರಿದೆ. ಮಾಜಿ ಪತಿಯ ಮದುವೆ ಸಂದರ್ಭದಲ್ಲೇ ನಾಗ ಚೈತನ್ಯರ ಮಾಜಿ ಪತ್ನಿ ಹಾಗೂ ನಟಿ ಸಮಂತಾ ರುತ್ ಪ್ರಭು ಪೋಸ್ಟ್ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಹಾಲಿವುಡ್ ತಾರೆ ವಯೋಲಾ ಡೇವಿಸ್ ಕಥೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಪುಟ್ಟ ಬಾಲಕ ಹಾಗೂ ಬಾಲಕಿಯ ನಡುವೆ ಫೈಟ್ ನಡೆಯುತ್ತಿದೆ. ಆತ್ಮವಿಶ್ವಾಸದ ಮನೋಭಾವದಿಂದ ಹುಡುಗ ಜಗಳ ಆರಂಭಿಸಿ ನಂತರ ಹುಡುಗಿಯ ಎದುರು ಸೋತು ಅಳಲು ಆರಂಭಿಸುತ್ತಾನೆ. ಈ ವೀಡಿಯೊ ಹಂಚಿಕೊಂಡಿರುವ ಸಮಂತಾ, ‘ಹುಡುಗಿಯಂತೆ ಹೋರಾಡಿ..’ ಎಂದು ಬರೆದಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಸಮಂತಾ ಮತ್ತು ನಾಗ ಚೈತನ್ಯ 2017 ಲ್ಲಿ ವಿವಾಹವಾದರು. ಇಬ್ಬರ ಮದುವೆಯೂ ಸಾಕಷ್ಟು ಸುದ್ದಿಯಾಗಿತ್ತು. 2021ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿದೆ. ಅವರು ಪರಸ್ಪರ ದೂರ ಆಗಿರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಇದೀಗ ನಾಗ ಚೈತನ್ಯ ಶೋಭಿತಾ ಜೊತೆ ಸಪ್ತಪದಿ ತುಳಿದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow