ಮುಖ ತೋರಿಸೋಕೆ ಯೋಗ್ಯತೆ ಇಲ್ಲ: D BOSS ಅಭಿಮಾನಿಗಳನ್ನು ಕೆರಳಿಸಿದ ಪ್ರಥಮ್ ಹೇಳಿಕೆ!

ಫೆಬ್ರವರಿ 17, 2025 - 18:03
 0  29
ಮುಖ ತೋರಿಸೋಕೆ ಯೋಗ್ಯತೆ ಇಲ್ಲ: D BOSS ಅಭಿಮಾನಿಗಳನ್ನು ಕೆರಳಿಸಿದ ಪ್ರಥಮ್ ಹೇಳಿಕೆ!

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿಮಾನಿಗಳು ಹಾಗೂ ಬಿಗ್ ಬಾಸ್ ​ಪ್ರಥಮ್ ನಡುವಿನ ವಾರ್​ ಆಗಾಗ ಸುದ್ದಿ ಆಗ್ತಾನೆ ಇರುತ್ತೆ. ಅದು ನಿಮಗೂ ಗೊತ್ತು. ದರ್ಶನ್ ಜೈಲು ಸೇರಿದ ವೇಳೆ ನಟ ಪ್ರಥಮ್​ ಹೇಳಿಕೆಗೆ ದಚ್ಚು ಅಭಿಮಾನಿಗಳು ಕೆಂಡಾಮಂಡಲರಾಗಿದ್ರು. ಪ್ರಥಮ್​ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾ ವಿವಾದ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಇದೀಗ ಪ್ರಥಮ್ ಡಿಬಾಸ್ ಎಂದು ಘೋಷಣೆ ಕೂಗಿದವರಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ.

ಡಾಲಿ ಧನಂಜಯ್ ಮದುವೆ, ಆರತಕ್ಷತೆಗೆ ಸಾಕಷ್ಟು ನಟ, ನಟಿಯರು ಆಗಮಿಸಿ ಮದುವೆ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದರು. ಅಭಿಮಾನಿಗಳು ಡಾಲಿ ಧನಂಜಯ್ ಅದ್ಧೂರಿ ಮದುವೆಯಲ್ಲಿ ಭಾಗಿಯಾಗಿ ಖುಷಿ ಪಟ್ಟಿದ್ದಾರೆ.

ಡಾಲಿ ಧನಂಜಯ್ ಆರತಕ್ಷತೆಯಲ್ಲಿ ಬಿಗ್‌ಬಾಸ್‌ ಖ್ಯಾತಿಯ ನಟ ಪ್ರಥಮ್ ಭಾಗಿಯಾಗಿದ್ದು ನವವಧುವರರಿಗೆ ಪ್ರೀತಿಯಿಂದ ಹಾರೈಸಿದ್ದಾರೆ. ಆರತಕ್ಷತೆಗೆ ಆಗಮಿಸಿದ್ದ ಪ್ರಥಮ್‌ ಅವರು ಡಾಲಿ ಧನಂಜಯ್ ಪತ್ನಿಯ ಹೆಸರು ಧನ್ಯತಾ. ಅವರು 500 ಹೆರಿಗೆ ಮಾಡಿಸಿದ್ದಾರೆ. 501ನೇ ಹೆರಿಗೆ ಅವರಿಗೆ ಆಗಲಿ ಎಂದು ಹಾರೈಸುತ್ತೇನೆ. ಡಾಲಿ ಧನಂಜಯ್ ನೂರು ಕಾಲ ಚೆನ್ನಾಗಿರಲಿ ಎಂದು ಶುಭ ಕೋರುತ್ತೇನೆ ಎಂದರು.

ಧನು-ಧನ್ಯತಾಗೆ ಶುಭಾಶಯ ಕೋರುತ್ತಿದ್ದ ಪ್ರಥಮ್ ಮಾತಿನ ಮಧ್ಯೆ ಜನರ ಗುಂಪಿನಲ್ಲಿ ಒಬ್ಬ ವ್ಯಕ್ತಿ ಜೈ ಡಿಬಾಸ್, ಜೈ ಡಿಬಾಸ್ ಎಂದು ಕೂಗಿದ. ಬಾಸ್ ಅನ್ನೋ ಶಬ್ಧ ಕೇಳುತ್ತಿದ್ದಂತೆ ಪ್ರಥಮ್‌ ಅಣ್ಣಾ ಒಂದು ನಿಮಿಷ ಕೇಳಿಸಿಕೋ ನೀನು. ಮುಖ ತೋರಿಸೋಕೆ ಯೋಗ್ಯತೆ ಇಲ್ಲ ಅವನಿಗೆ ಎಂದು ಫುಲ್ ತರಾಟೆ ತೆಗೆದುಕೊಂಡರು.

ನನಗೆ ಅವನೇ ಬಾಸ್.. ಅವರಪ್ಪ ಅಮ್ಮ ಅವನಿಗೆ ಅವನು ಬಾಸ್ ಆಗಬೇಕು. ಯಾವನೋ ಪೆದ್ದ ಬಂದು ಬಿಟ್ಟಿದ್ದಾನೆ. ಒಂದು ಕ್ವಾಟ್ರು ಎಣ್ಣೆ ಕುಡಿದಿರಬೇಕು. ಬಾಸ್ ಎಂದು ಹೇಳಿದವನನ್ನು ಮರೆತು ಬಿಡಿ.

ಕರ್ನಾಟಕದಲ್ಲಿ ಕನ್ನಡಿಗರು ಬಾಸ್‌.. ನನಗೆ ನೀವೆಲ್ಲಾ ಬಾಸ್. ನಾನು ಒಬ್ಬ ನಟನಷ್ಟೇ. ನೀವೆಲ್ಲಾ ನನ್ನ ಸಿನಿಮಾ ನೋಡಿದ್ರೆ ಮಾತ್ರ ನಾನು ನಟ. ನಿಮಗೆಲ್ಲಾ ನಿಮ್ಮ ಅಪ್ಪ, ಅಮ್ಮ ಬಾಸ್ ಆಗಬೇಕು. ಯಾವ ಮಗನಿಗೆ ನಿಮ್ಮ ಅಪ್ಪ, ಅಮ್ಮ ಬಾಸ್ ಅಲ್ಲವೋ ಮುಂದೆ ಬನ್ನಿ. ನಿಮ್ಮ ಅಪ್ಪ, ಅಮ್ಮ ಬಾಸ್ ಅಲ್ಲ ಅನ್ನೋರು ಯಾರಿದ್ದೀರಾ.

ಕರ್ನಾಟಕದಲ್ಲಿ ಕನ್ನಡ ಬಾಸ್. ಯಾವ ಕಲಾವಿದರನ್ನು ಬಾಸ್ ಮಾಡಬೇಡಿ. ನೀವು ಬೇರೆ ಯಾರನ್ನೋ ಬಾಸ್ ಅಂದ್ರೆ ಸಂಸ್ಕಾರ ಎಲ್ಲಿಗೆ ಹೋಗುತ್ತೆ. ಇನ್ನೊಂದು ಸಲ ನಿಮ್ಮ ಅಪ್ಪ-ಅಮ್ಮನ ಬಿಟ್ಟು ಬೇರೆ ಯಾರಿಗೂ ಬಾಸ್ ಅನ್ನಬೇಡಿ ಎಂದು ಪ್ರಥಮ್‌ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow