ಮೊಣಕಾಲಿನಲ್ಲೇ ತಿರುಪತಿ ಮೆಟ್ಟಿಲು ಹತ್ತಿದ ಶತಕವೀರ: ನಿತೀಶ್ ಕುಮಾರ್ ರೆಡ್ಡಿ ಭಕ್ತಿಗೆ ಫ್ಯಾನ್ಸ್ ಫಿದಾ!

ಟೀಮ್ ಇಂಡಿಯಾ ಆಟಗಾರ ನಿತೀಶ್ ಕುಮಾರ್ ಮೊಣಕಾಲಿನಲ್ಲೇ ತಿರುಪತಿ ತಿರುಮಲ ದೇವಸ್ಥಾನದ ಮೆಟ್ಟಿಲು ಹತ್ತಿದ್ದು, ಈ ದೃಶ್ಯ ಅಭಿಮಾನಿಗಳನ್ನು ಸೆಳೆದಿದೆ.
ನಿತೀಶ್ ಕುಮಾರ್ ರೆಡ್ಡಿ ಕುಟುಂಬ ಸದಸ್ಯರೊಂದಿಗೆ ತಿರುಮಲ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ತೆರಳಿದ್ದರು. ಈ ವೇಳೆ ನಿತೀಶ್ ಕುಮಾರ್ ರೆಡ್ಡಿ ಮೊಣಕಾಲೂರಿ ಮೆಟ್ಟಿಲು ಹತ್ತಿದರು. ಇದೀಗ ಟೀಮ್ ಇಂಡಿಯಾ ಆಟಗಾರನ ಭಕ್ತಿ ಪ್ರಧಾನ ವಿಡಿಯೋ ಭಾರೀ ವೈರಲ್ ಆಗಿದೆ.
ಸಾಮಾನ್ಯವಾಗಿ ತಿರುಮಲ ಶ್ರೀವಾರಿ ದರ್ಶನಕ್ಕೆ ಬರುವವರು ಭಕ್ತರು ಪರ್ವತವನ್ನು ಸಮೀಪಿಸುತ್ತಿದ್ದಂತೆ ಮೊಣಕಾಲುಗಳ ಮೇಲೆ ಮೆಟ್ಟಿಲುಗಳನ್ನು ಏರುತ್ತಾರೆ. ಇದೀಗ ನಿತೀಶ್ ಕುಮಾರ್ ರೆಡ್ಡಿ ಕೂಡ ಮೊಣಕಾಲೂರಿ ಮೆಟ್ಟಿಲು ಹತ್ತಿ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ.
ಶ್ರೀ ವೆಂಕಟೇಶ್ವರನ ಸನ್ನಿಧಿಗೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರನಿಗೆ ಟಿಟಿಡಿ ಆಡಳಿತ ಮಂಡಳಿ ಶ್ರೀಗಳ ನಾಮಸ್ಮರಣೆಯೊಂದಿಗೆ ಅದ್ಧೂರಿ ಸ್ವಾಗತ ಕೋರಿದೆ. ಅಲ್ಲದೆ ನಿತೀಶ್ ಕುಟುಂಬಕ್ಕೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.
ಅದರಂತೆ ಮಂಗಳವಾರ ಇಂದು ಬೆಳಗ್ಗೆ ನಿತೀಶ್ ಕುಮಾರ್ ರೆಡ್ಡಿ ಕುಟುಂಬಸ್ಥರು ಸನ್ನಿಧಿಗೆ ತೆರಳಿ ತಿರುಮಲ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






