ಮೊಬೈಲ್ ಗಳು ಬ್ಲಾಸ್ಟ್ ಆಗಲು ಕಾರಣ ಏನು!? ಈ ಟಿಪ್ಸ್ ಫಾಲೋ ಮಾಡಿ ಫೋನ್ ಜೊತೆ ನೀವು ಸೇಫ್​!

ಫೆಬ್ರವರಿ 15, 2025 - 08:20
 0  17
ಮೊಬೈಲ್ ಗಳು ಬ್ಲಾಸ್ಟ್ ಆಗಲು ಕಾರಣ ಏನು!? ಈ ಟಿಪ್ಸ್ ಫಾಲೋ ಮಾಡಿ ಫೋನ್ ಜೊತೆ ನೀವು ಸೇಫ್​!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್‌ಗಳು ಪ್ರತಿಯೊಬ್ಬರ ಬದುಕಿನ ಪ್ರಮುಖ ಅಂಶ ಎಂದರೂ ತಪ್ಪಾಗಲಾರದು. ಆದರೆ, ಆಗಾಗ್ಗೆ ಫೋನ್ ಸ್ಫೋಟದ ವರದಿಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಫೋನ್‌ಗಳು ಸ್ಫೋಟಗೊಳ್ಳಲು ಹಲವು ಕಾರಣಗಳಿವೆ. ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದಾಗಿ ಇಂತಹ ಅವಘಡ ಸಂಭವಿಸಿದರೆ, ಇನ್ನೂ ಕೆಲವು ಸಂದರ್ಭದಲ್ಲಿ ನಮ್ಮ ತಪ್ಪುಗಳು ಕೂಡ ಇದಕ್ಕೆ ಕಾರಣವಾಗಿರುತ್ತದೆ. 

ಸ್ಮಾರ್ಟ್​ಫೋನ್​ನಲ್ಲಿರುವ ಲಿಥಿಯಂ-ಐಯಾನ್ ಬ್ಯಾಟರಿಗೆ ಹಾನಿಯಾಗುವುದರಿಂದ ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಸ್ಫೋಟಗೊಳ್ಳುತ್ತವೆ. ಫೋನ್ ಸ್ಫೋಬ್ಲಾಸ್ಟ್​ ಆಗಲು ಮತ್ತೊಂದು ಪ್ರಮುಖ ಕಾರಣವೆಂದರೆ ಅತಿಯಾದ ಹೀಟ್​. ಫೋನ್ ಅತಿಯಾಗಿ ಹೀಟ್​ ಆದಾಗ ಬ್ಯಾಟರಿಯನ್ನು ಹಾನಿಗೊಳಿಸುತ್ತದೆ. ಇದು ಬ್ಯಾಟರಿಯೊಳಗೆ ಹೀಟ್​ ಆಗಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಬ್ಯಾಟರಿ ಬ್ಲಾಸ್ಟ್​ ಆಗುತ್ತದೆ.

ಅಲ್ಲದೆ, ಬಳಕೆದಾರರು ತಮ್ಮ ಫೋನ್‌ಗಳನ್ನು ಯಾವತ್ತಿಗೂ ಕೆಳಗೆ ಬೀಳಿಸಬಾರದು. ಈ ರೀತಿಯಾದಾಗ ಮೊಬೈಲ್ ಬ್ಲಾಸ್ಟ್​ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ದೀರ್ಘಕಾಲ ಫೋನ್ ಬಳಸುವುದರಿಂದ ಬ್ಯಾಟರಿಯೂ ಹಾಳಾಗುತ್ತದೆ. ಇದು ಬ್ಯಾಟರಿಯ ಊತ ಮತ್ತು ಅಧಿಕ ಹೀಟ್ ಆಗಲು ಕಾರಣವಾಗುತ್ತದೆ. ನಿಮ್ಮ ಸ್ಮಾರ್ಟ್​​ಫೋನ್ ಬ್ಲಾಸ್ಟ್​ ಆಗ್ಬೇಕಾದ್ರೆ ಈ ಟಿಪ್ಸ್ ಅನ್ನು ಫಾಲೋ ಮಾಡಿ.

ಫೋನ್‌ನಿಂದ ಯಾವುದೇ ಶಬ್ದಗಳು, ಸುಡುವ ವಾಸನೆ ಅಥವಾ ಅತಿಯಾದ ಹೀಟ್​ ಆಗುವುದನ್ನು ನೀವು ಗಮನಿಸಿದರೆ, ತಕ್ಷಣವೇ ಫೋನ್ ಅನ್ನು ಬದಿಗಿಡಬೇಕು. ಇನ್ನು ಅಂತಹ ಸಂದರ್ಭಗಳಲ್ಲಿ ಫೋನ್ ಅನ್ನು ಸ್ವಿಚ್ ಆಫ್ ಮಾಡಬೇಕು ಮತ್ತು ಸರ್ವೀಸ್​ ಸೆಂಟರ್​ಗೆ ತೆಗೆದುಕೊಂಡು ಹೋಗಬೇಕು.

ಫೋನ್ ಅನ್ನು ಯಾವತ್ತೂ ಬೀಳಿಸಬೇಡಿ. ಗೀರುಗಳು ಮತ್ತು ಫೋನ್ ಮೇಲಾಗುವ ಹಾನಿಗಳನ್ನು ತಪ್ಪಿಸಲು ಈ ರೀತಿಯ ಕ್ರಮಗಳನ್ನು ಪಾಲಿಸಿ.

ಸ್ಮಾರ್ಟ್​ಫೋನ್​ ಅನ್ನು ಯಾವತ್ತೂ ಅಧಿಕವಾಗಿ ಬಳಸಬೇಡಿ. ಇದರಿಂದ ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿ ಹೀಟ್​ ಆಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಜಾಸ್ತಿ ಹೀಟ್​ ಆಗದಂತೆ ನೋಡಿಕೊಳ್ಳುವುದು ಉತ್ತಮ.

ಬ್ಯಾಟರಿ: ಯಾವತ್ತೇ ಆಗಲಿ ಫೋನ್ ಅನ್ನು ಹೆಚ್ಚು ಚಾರ್ಜ್ ಮಾಡಬೇಡಿ. ಬ್ಯಾಟರಿ ಚಾರ್ಜ್​ ಯಾವತ್ತೂ 0 ಶೇಕಡಾವನ್ನು ತಲುಪುವವರೆಗೆ ಫೋನ್ ಅನ್ನು ಬಳಸಬೇಡಿ. ಇನ್ನು ಬ್ಯಾಟರಿಯನ್ನು ಸಾಮಾನ್ಯವಾಗಿ 20-80% ಶೇಕಡಾದಷ್ಟು ಚಾರ್ಜ್​ನಲ್ಲಿಡಿ

ಕಂಪೆನಿಯ ಚಾರ್ಜರ್‌ಗಳು ಮತ್ತು ಕೇಬಲ್‌ಗಳನ್ನೇ ಬಳಸಿ: ಸ್ಮಾರ್ಟ್​​ಫೋನ್​ ಕಂಪೆನಿ ನೀಡುವ ಚಾರ್ಜರ್‌ಗಳು ಮತ್ತು ಕೇಬಲ್‌ಗಳನ್ನು ಮಾತ್ರ ಬಳಸಬೇಕು. ಒಂದು ವೇಳೆ ಬೇರೆ ಚಾರ್ಜರ್​ಗಳನ್ನು ಬಳಸಿದ್ರೆ ನಿಮ್ಮ ಮೊಬೈಲ್ ಬ್ಯಾಟರಿ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow