ಚಾಂಪಿಯನ್ಸ್ ಟ್ರೋಫಿಗೆ ಪತ್ನಿಯರನ್ನು ಕರೆತರುವಂತಿಲ್ಲ: ಸ್ಟಾರ್ ಕ್ರಿಕೆಟಿಗನಿಗೆ ಬಿಸಿಸಿಐ ಎಚ್ಚರಿಕೆ!

ಚಾಂಪಿಯನ್ಸ್ ಟ್ರೋಫಿಗೆ ಪತ್ನಿಯರನ್ನು ಕರೆತರುವಂತಿಲ್ಲ ಎಂದು ಕ್ರಿಕೆಟಿಗರಿಗೆ ಬಿಸಿಸಿಐ ಎಚ್ಚರಿಕೆ ಕೊಟ್ಟಿದೆ.
ಈ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆಲ್ಲಲೇಬೇಕು ಎನ್ನುವ ಹಂಬಲದಲ್ಲಿ ಇದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ಒಬ್ಬರು ತಮ್ಮ ಜೊತೆ ಪತ್ನಿಗೂ ಬರಲು ಅವಕಾಶ ಕೋರಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಬಿಸಿಸಿಐ ನೇರವಾಗಿ ತಿರಸ್ಕರಿಸಿದೆ.
ಸ್ಟಾರ್ ಆಟಗಾರನೋರ್ವ ಚಾಂಪಿಯನ್ಸ್ ಟ್ರೋಫಿಯಲ್ಲಿ ಪತ್ನಿಯನ್ನು ಕರೆತರಲು ಅವಕಾಶ ಕೋರಿದ್ದರು ಎನ್ನಲಾಗಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಅಹಮದಾಬಾದ್ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಬಿಸಿಸಿಐ ಅಧಿಕಾರಿಗಳು ಆಟಗಾರರಿಗೆ ಸ್ಟ್ರಿಕ್ಟ್ ಆಗಿ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ನಿಯಮಗಳ ವಿಚಾರದಲ್ಲಿ ಬಿಸಿಸಿಐ ಕೂಡ ತುಂಬಾನೇ ಗಂಭೀರವಾಗಿದೆ. ಇದರಿಂದ ಹಿಂದೆ ಹೋಗುವ ಮಾತಿಲ್ಲ ಎಂಬುದು ತಿಳಿದಿರಲಿ’ ಎಂದು ಆಟಗಾರರಿಗೆ ಸೂಚನೆ ನೀಡಲಾಗಿದೆ. ಪ್ರ್ಯಾಕ್ಟಿಸ್ ಸೆಷನ್ನಲ್ಲಿ ಒಟ್ಟಿಗೆ ಇರಬೇಕು, ಒಟ್ಟಾಗಿ ಬಸ್ನಲ್ಲೇ ಸಾಗಬೇಕಿದೆ.
ಟೀಂ ಇಂಡಿಯಾದ ಕಳಪೆ ಪ್ರದರ್ಶನದಿಂದ ಬೇಸತ್ತ ಬಿಸಿಸಿಐ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿತ್ತು. ಟೀಂ ಇಂಡಿಯಾ ಆಟಗಾರರು ತಮ್ಮ ಪತ್ನಿಯನ್ನು ಕರೆತರುವಂತಿಲ್ಲ ಎಂಬುದು ನಿಯಮಗಳಲ್ಲಿ ಒಂದಾಗಿತ್ತು. ಎಲ್ಲಾ ನಿಯಮಗಳಂತೆ ಇದನ್ನು ಕಠಿಣವಾಗಿ ಪಾಲಿಸಲೇಬೇಕು ಎಂದು ಬಿಸಿಸಿಐ ಆಟಗಾರರಿಗೆ ಹೇಳಿದೆ.
ನಿಮ್ಮ ಪ್ರತಿಕ್ರಿಯೆ ಏನು?






