ಲಕ್ಷ್ಮೀ ನಿವಾಸದ ಚಲುವಿಗೆ ಹೆಚ್ಚಿದ ಡಿಮ್ಯಾಂಡ್: 2 ಧಾರವಾಹಿಗಳಲ್ಲೂ ಬೇಡಿಕೆ!

ಲಕ್ಷ್ಮೀ ನಿವಾಸದ ಚೆಲುವಿ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಅಶ್ವಿನಿ ಮೂರ್ತಿ ತಮಿಳು ಕಿರುತೆರೆಗೆ ಗ್ರ್ಯಾಂಡ್ ಆಗಿ ಎಂಟ್ರಿ ನೀಡಿದ್ದಾರೆ. ತಮಿಳಿನ ಗಟ್ಟಿಮೇಳಂ ಧಾರಾವಾಹಿಯಲ್ಲಿ ಅಶ್ವಿನಿ ಮೂರ್ತಿ ನಟಿಸುತ್ತಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವೆಂಕಿ-ಚೆಲ್ವಿ ಜೋಡಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಇನ್ನೂ, ಚೆಲ್ವಿ ಪಾತ್ರ ಮಾಡ್ತಿರೋದು ಅಶ್ವಿನ್ ಆರ್ ಮೂರ್ತಿ ಅವರಿಗೆ ಆಫರ್ವೊಂದು ಬಂದಿದೆ. ಇಷ್ಟು ದಿನ ಲಕ್ಷ್ಮೀ ನಿವಾಸ ಧಾರಾವಾಹಿ ಮೂಲಕ ಮಿಂಚುತ್ತಿದ್ದ ಅಶ್ವಿನ್ ಆರ್ ಮೂರ್ತಿ ತಮಿಳು ಭಾಷೆಯಲ್ಲಿ ರಿಮೇಕ್ ಆಗಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇದೇ ಚೆಲುವಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಗಟ್ಟಿಮೇಳಂ ಹೆಸರಿನಲ್ಲಿ ಧಾರಾವಾಹಿಯಲ್ಲೂ ಸೇಮ್ ಪಾತ್ರದಲ್ಲಿ ನಟಿ ಅಭಿನಯಿಸುತ್ತಿದ್ದಾರೆ.
ಇನ್ನೂ, ಗಟ್ಟಿಮೇಳಂ ಧಾರಾವಾಹಿಯಲ್ಲಿ ಕನ್ನಡದ ಬಹುತೇಕ ಕಲಾವಿದರು ಅಭಿನಯಿಸುತ್ತಿದ್ದಾರೆ. ಪ್ರಮುಖವಾದ ಪಾತ್ರ ಅಂದ್ರೆ ಕನ್ನಡದಲ್ಲಿ ಭಾವನಾ ನಟಿಸುತ್ತಿದ್ದರೆ, ತಮಿಳಿನಲ್ಲಿ ಛಾಯಾ ಸಿಂಗ್ ಅಭಿನಯಿಸುತ್ತಿದ್ದಾರೆ. ಇನ್ನೂ ವೆಂಕಿ ಪಾತ್ರದಲ್ಲಿ ಅಮೃತಧಾರೆಯ ಆನಂದ್ ನಟಿಸುತ್ತಿದ್ದಾರೆ. ಇನ್ನು ವಿಶ್ವನ ತಾಯಿಯಾಗಿರುವ ಹಿರಿಯ ಕಲಾವಿದೆ ಕೂಡ ಗಟ್ಟಿಮೇಳಂನಲ್ಲಿ ಅದೇ ಪಾತ್ರದಲ್ಲಿ ನಟಿಸುತ್ತಿದ್ದಾರೆ
ಇದೀಗ ತಮಿಳಿನ ಚೆಲುವಿಯಾಗಿ ಇದೇ ಅಶ್ವಿನಿ ಮೂರ್ತಿ ನಟಿಸುತ್ತಿದ್ದಾರೆ. ಈ ಮೂಲಕ ಒಂದೇ ಕಥೆಯುಳ್ಳ ಎರಡು ಭಾಷೆಯ ಧಾರಾವಾಹಿಯಲ್ಲಿ ಅಶ್ವಿನಿ ಮೂರ್ತಿ ನಟಿಸುತ್ತಿದ್ದಾರೆ. ತಮಿಳು ಧಾರಾವಾಹಿಯಲ್ಲಿ ಅಶ್ವಿನಿ ಮೂರ್ತಿ ನಟಿಸುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳು ವೈರಲ್ ಆಗುತ್ತಿವೆ.
ನಿಮ್ಮ ಪ್ರತಿಕ್ರಿಯೆ ಏನು?






