'ಎಮರ್ಜೆನ್ಸಿ' ಪ್ರಚಾರ ವೇಳೆ ಕರಣ್ ಜೋಹರ್​ಗೆ ಬಿಗ್ ಆಫರ್ ಕೊಟ್ಟ ಕಂಗನಾ!

ಜನವರಿ 11, 2025 - 18:01
 0  9
'ಎಮರ್ಜೆನ್ಸಿ' ಪ್ರಚಾರ ವೇಳೆ ಕರಣ್ ಜೋಹರ್​ಗೆ ಬಿಗ್ ಆಫರ್ ಕೊಟ್ಟ ಕಂಗನಾ!

ತಾವೇ ನಟಿಸಿ ನಿರ್ದೇಶಿಸುತ್ತಿರುವ ಎಮರ್ಜೆನ್ಸಿ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಇನ್ನೂ ಸಿನಿಮಾ ಪ್ರಚಾರದಲ್ಲಿ ಬ್ಯೂಸಿ ಆಗಿರುವ ಕಂಗನಾ ಅವರು, ಕರಣ್ ಜೋಹರ್​ಗೆ ಬಿಗ್ ಆಫರ್ ಕೊಟ್ಟಿದ್ದಾರೆ. 

ಜನವರಿ 17ರಂದು ತೆರೆಗೆ ಬರುತ್ತಿರುವ ಈ ಚಿತ್ರದ ಪ್ರಚಾರದಲ್ಲಿ ಕಂಗನಾ ಭಾಗಿ ಆಗುತ್ತಿದ್ದಾರೆ. ಈ ವೇಳೆ ಅವರು ಕರಣ್ ಅವರ ಕಾಲನ್ನು ಎಳೆದಿದ್ದಾರೆ. ಅವರಿಗೆ ಸಿನಿಮಾ ಆಫರ್ ಕೂಡ ನೀಡಿದ್ದಾರೆ.

ಇದನ್ನು ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಆದರೆ, ಕರಣ್ ಜೋಹರ್ ಸರ್ ಜೊತೆ ಸಿನಿಮಾ ಮಾಡಬೇಕು. ಅವರಿಗೆ ನಾನು ಒಳ್ಳೆಯ ಪಾತ್ರವನ್ನೇ ನೀಡುತ್ತೇನೆ. ನಾನು ಒಳ್ಳೆಯ ಸಿನಿಮಾನೇ ಮಾಡುತ್ತೇನೆ. ಅದು ಅತ್ತೆ-ಸೊಸೆ ಜಗಳ ಅಲ್ಲ. ಇದು ಒಂದೊಳ್ಳೆಯ ಸಿನಿಮಾ. ಅವರಿಗೂ ಒಳ್ಳೆಯ ಪಾತ್ರ ಸಿಗುತ್ತದೆ’ ಎಂದು ಕಂಗನಾ ಹೇಳಿದ್ದಾರೆ. 

ಈ ಮೊದಲು ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಅತ್ತೆ ಹಾಗೂ ಸೊಸೆಯ ಮಧ್ಯೆ ಜಗಳ ಏರ್ಪಡುವ ದೃಶ್ಯಗಳಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕಂಗನಾ ಈ ರೀತಿ ಹೇಳಿರಬಹುದು ಎಂದು ಕೂಡ ಹೇಳಲಾಗುತ್ತಿದೆ. ಈ ರೀತಿಯ ಸಿನಿಮಾಗಳು ಕಂಗನಾಗೆ ಇಷ್ಟ ಆಗುವುದಿಲ್ಲ ಎಂದರು. 

ಕಂಗನಾ ರಣಾವತ್ ಹಾಗೂ ಕರಣ್ ಮಧ್ಯೆ ಕಿರಿಕ್ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಕಂಗನಾ ಅವರು ಕರಣ್ ಜೋಹರ್ ವಿರುದ್ಧ ಸಿಟ್ಟಾಗಿದ್ದರು. 2017ರಲ್ಲಿ ಕಂಗನಾ ಅವರು ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು. ಅವರು ಅಲ್ಲಿಯೇ ಕರಣ್ ವಿರುದ್ಧ ಹರಿಹಾಯ್ದಿದ್ದರು. ಅವರದ್ದೇ ಶೋನಲ್ಲಿ ಕರಣ್ ಮರ್ಯಾದೆಯನ್ನು ತೆಗೆದಿದ್ದರು. ಕಂಗನಾ ಅವಕಾಶ ಸಿಕ್ಕಾಗಲೆಲ್ಲ ಕರಣ್ ಅವರಿಗೆ ಅವಮಾನ ಮಾಡಲು ಕಾಯುತ್ತಾ ಇರುತ್ತಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow