ಮೋಕ್ಷಿತಾ ಮೇಲೆ ತಿರುಗಿ ಬಿದ್ದ ಧನರಾಜ್: ಅಷ್ಟಕ್ಕೂ ಆಗಿದ್ದೇನು!?

ನವೆಂಬರ್ 15, 2024 - 21:53
 0  16
ಮೋಕ್ಷಿತಾ ಮೇಲೆ ತಿರುಗಿ ಬಿದ್ದ ಧನರಾಜ್: ಅಷ್ಟಕ್ಕೂ ಆಗಿದ್ದೇನು!?

ಬಿಗ್ ಬಾಸ್ ಸೀಸನ್ 11 ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಿದೆ. ವೀಕ್ಷಕರು ಕೂಡ ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. 

ಕಲರ್ಸ್​ ಕನ್ನಡ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಪ್ರೋಮೋವೊಂದನ್ನು ಶೇರ್ ಮಾಡಿಕೊಂಡಿದೆ

ಹೊಸ ಪ್ರೋಮೋದಲ್ಲಿ ಎಂದಿನಂತೆ ಈ ವಾರದ ಕಳಪೆ ಪ್ರದರ್ಶನ ಪ್ರಕ್ರಿಯೆ ನಡೆದಿದೆ. ಮನೆಯ ಸದಸ್ಯರು ಒಬ್ಬಬ್ಬರಾಗಿ ಬಂದು ಈ ವಾರದ ಕಳಪೆ ಪ್ರದರ್ಶನ ನೀಡಿದ್ದು ಯಾರು ಅಂತ ಹೇಳಿದ್ದಾರೆ. ಆದರೆ ಈ ವಾರದ ಜೋಡಿ ಟಾಸ್ಕ್​ನಲ್ಲಿ ತಮ್ಮ ಜೊತೆಯಾಗಿದ್ದ ಧನರಾಜ್​ ಅವರ ಹೆಸರನ್ನೇ ಮೋಕ್ಷಿತಾ ಹೇಳಿದ್ದಾರೆ

, ಈ ವಾರದ ಕಳಪೆ ಪಟ್ಟವನ್ನು ಧನರಾಜ್​ ಅವರಿಗೆ ಮನೆಮಂದಿ ನೀಡಿದ್ದಾರೆ. ಇದರ ಪೈಕಿ ಮೋಕ್ಷಿತಾ ಅವರು, ಟಾಸ್ಕ್​ ವಿಚಾರ ಅಂತ ಬಂದಾಗ ಸ್ಮಾಟ್​ ಆಗಿ ನೀವು ಯೋಚನೆ ಮಾಡ್ತಾ ಇರಲಿಲ್ಲ. ಪಾರ್ಟ್ನರ್ ಆಗಿ ನೀವು ಎಷ್ಟು ಸಪೋರ್ಟಿವ್ ಆಗಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಧನರಾಜ್​ ಅಹಂಕಾರ ಇದೆ ನಿಮಗೆ ಅಂತ ಹೇಳಿ ಆ ಕಳಪೆ ಪಟ್ಟವನ್ನು ಮೋಕ್ಷಿತಾ ಅವರಿಗೆ ಕಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow