ಯಡಿಯೂರಪ್ಪ, ಶ್ರೀರಾಮುಲು ಭ್ರಷ್ಟಾಚಾರ ಲೂಟಿ ಮಾಡೋದು ಬಿಟ್ರೆ ಏನೂ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

ನವೆಂಬರ್ 9, 2024 - 18:08
 0  10
ಯಡಿಯೂರಪ್ಪ, ಶ್ರೀರಾಮುಲು ಭ್ರಷ್ಟಾಚಾರ ಲೂಟಿ ಮಾಡೋದು ಬಿಟ್ರೆ ಏನೂ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

ಬಳ್ಳಾರಿ: ಯಡಿಯೂರಪ್ಪ, ಶ್ರೀರಾಮುಲು ಭ್ರಷ್ಟಾಚಾರ ಲೂಟಿ ಮಾಡೋದು ಬಿಟ್ರೆ ಏನೂ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ. ಎಷ್ಟು ಲೂಟಿ ಹೊಡೆದಿದ್ದಾರೆ ಅಂದ್ರೆ, ಹೆಣ ಹೂಳುವುದರಲ್ಲೂ ಹಣ ಲೂಟಿ ಹೊಡೆದಿದ್ದಾರೆ. ಶ್ರೀರಾಮುಲು ಆಗ ಮಂತ್ರಿ ಇದ್ದರು, ಯಡಿಯೂರಪ್ಪ ಸಿಎಂ ಆಗಿದ್ದರು.

ಚೀನಾಕ್ಕೆ ಹೋಗಿ ಪಿಪಿಇ ಕಿಟ್ ತಂದ್ರು. ದೇಶದಲ್ಲಿ ವಸ್ತು ಸಿಗುತ್ತಿದ್ದರೂ ಚೀನಾದಿಂದ ತಂದು ಭ್ರಷ್ಟಾಚಾರ ಮಾಡಿದ್ರು. ಅದರಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ. ಭ್ರಷ್ಟಾಚಾರ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಇವರ ಮೇಲೆ ಕ್ರಮಕ್ಕೆ ಶಿಪಾರಸ್ಸು ಮಾಡಿದ್ದಾರೆ. ಯಡಿಯೂರಪ್ಪ, ಶ್ರೀರಾಮುಲು ಭ್ರಷ್ಟಾಚಾರ ಲೂಟಿ ಮಾಡೋದು ಬಿಟ್ರೆ ಏನೂ ಮಾಡಿಲ್ಲ. ಜನಾರ್ದನ ರೆಡ್ಡಿ ಚುನಾವಣೆ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಲೂಟಿ ಹೊಡೆದವರಿಗೆ ಮನ್ನಣೆ ನೀಡಬೇಡಿ ಎಂದು ಕರೆ ಕೊಟ್ಟರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow