ಯಾವುದೇ ಕಾರಣಕ್ಕೂ ಜೇಬಿನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ: ಸಮಸ್ಯೆಗಳು ಹುಡುಕಿ ಬರುತ್ತೆ!

ಫೆಬ್ರವರಿ 24, 2025 - 07:05
 0  11
ಯಾವುದೇ ಕಾರಣಕ್ಕೂ ಜೇಬಿನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ: ಸಮಸ್ಯೆಗಳು ಹುಡುಕಿ ಬರುತ್ತೆ!

ವಾಸ್ತು ಶಾಸ್ತ್ರದಲ್ಲಿ, ಸಂಪತ್ತನ್ನು ಹೆಚ್ಚಿಸಲು ಅನೇಕ ವಾಸ್ತು ಪರಿಹಾರಗಳಿವೆ. ಅಂತೆಯೇ, ವಾಸ್ತು ಶಾಸ್ತ್ರವು ವ್ಯಕ್ತಿಯ ಅಭ್ಯಾಸಗಳ ಬಗ್ಗೆ ಕೆಲವು ನಿಯಮಗಳನ್ನು ಸಹ ನೀಡಿದೆ. ನಿಯಮಗಳನ್ನು ಪಾಲಿಸದಿದ್ದರೆ, ಹಣದ ನಷ್ಟವನ್ನು ಎದುರಿಸಬೇಕಾಗುತ್ತದೆಕೆಲವು ವಸ್ತುಗಳಿಂದಲೇ ಸಮಸ್ಯೆ ಬಗೆಹರಿಯುತ್ತೆ ಎನ್ನಲಾಗುತ್ತದೆಹಾಗಾದ್ರೆ ಯಾವೆಲ್ಲಾ ವಸ್ತುಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳಬಾರದು ಎಂಬುದು ಇಲ್ಲಿದೆ.

ಮಾತ್ರೆಗಳುನಾವು ನಮ್ಮ ಜಂಜಾಟದ ಓಡಾಟದ ಕಾರಣದಿಂದ ಆರೋಗ್ಯ ಸಮಸ್ಯೆ ಅನುಭವಿಸುತ್ತೇವೆ. ಅದಕ್ಕಾಗಿ ಔಷಧಿಗಳನ್ನು ಸಹ ತೆಗೆದುಕೊಳ್ಳುತ್ತೇವೆ. ಆದರೆ ಅದಕ್ಕೂ ಸಮಯವಿಲ್ಲದೇ ಅದನ್ನ ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತೇವೆ. ರೀತಿ ಜೇಬಿನಲ್ಲಿ ಇಟ್ಟುಕೊಂಡು ಓಡಾಡಿದರೆ ಇನ್ನಷ್ಟು ಆರೋಗ್ಯ ಸಮಸ್ಯೆ ಆಗುತ್ತದೆ.

ಬಿಲ್​: ನಾವು ಹೊರಗೆ ಹೋದಾಗ ಏನಾದರೂ ಖರೀದಿ ಮಾಡಿದರೆ ಅದರ ಬಿಲ್ಅನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತೇವೆ. ಇಲ್ಲದಿದ್ದರೆ ಬಸ್ಟಿಕೆಟ್ಗಳನ್ನು ಸಹ ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಆದರೆ ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಹಾಳಾಗುತ್ತದೆ.

ಹರಿದ ವ್ಯಾಲೆಟ್​: ಮುಖ್ಯವಾಗಿ ಗಂಡಸರು ಹಳೆಯ ವ್ಯಾಲೆಟ್ಗಳನ್ನು ಬಳಸುವ ಅಭ್ಯಾಸ ಹೊಂದಿದ್ದಾರೆ. ಅದು ಹರಿದು ಹೋಗಿದ್ದರೂ ಸಹ ಅದನ್ನೇ ಬಳಸುತ್ತಿರುತ್ತಾರೆ. ಇದರಿಂದ ಕೆಟ್ಟ ಶಕ್ತಿಗಳ ಕಾಟ ಹೆಚ್ಚಾಗುತ್ತದೆ. ನಿಮಗೆ ಒಂದೊಂದೇ ಸಮಸ್ಯೆಗಳು ಬರುತ್ತವೆ.

ಪೇಪರ್ನಿಮ್ಮ ಜೇಬಿನಲ್ಲಿ ಸುಮ್ಮನೇ ಚೀಟಿಗಳನ್ನು ಇಟ್ಟುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಡಿ. ಅದರಲ್ಲೂ ಏನೇನೋ ಬರೆದುಕೊಂಡಿರುವ ಪೇಪರ್ ಇಟ್ಟುಕೊಳ್ಳಬಾರದು. ಇದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಕೆಟ್ಟದ್ದಾಗುವ ಸಂಭವ ಇರುತ್ತದೆ.

ಆಹಾರ ಪದಾರ್ಥಗಳುಅಪ್ಪಿ-ತಪ್ಪಿ ಜೇಬಿನಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ನೀವು ಜೇಬಿನಲ್ಲಿ ಇಟ್ಟುಕೊಳ್ಳಬಾರದು. ಇದು ಸಹ ನೆಗೆಟಿವ್ ಎನರ್ಜಿ ಹೆಚ್ಚಿಸಲು ಒಂದು ಕಾರಣ ಎನ್ನಬಹುದು. ಹಾಗಾಗಿ ಆಹಾರ ಪದಾರ್ಥಗಳನ್ನು ತಿಂದು ಉಳಿದರೆ ಬೇರೆಯವರಿಗೆ ಕೊಡಿ, ಜೇಬಿನಲ್ಲಿ ಇಟ್ಟುಕೊಳ್ಳಬೇಡಿ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow