ರಜತ್ ಮಾಜಿ ಗೆಳತಿಯ ಫೋಟೋ ವೈರಲ್: ಠಾಣೆ ಮೆಟ್ಟಿಲೇರಿದ ಪತ್ನಿ ಅಕ್ಷಿತಾ!

ಜನವರಿ 20, 2025 - 10:17
 0  34
ರಜತ್ ಮಾಜಿ ಗೆಳತಿಯ ಫೋಟೋ ವೈರಲ್: ಠಾಣೆ ಮೆಟ್ಟಿಲೇರಿದ ಪತ್ನಿ ಅಕ್ಷಿತಾ!

ಬೆಂಗಳೂರು:- ಬಿಗ್ ಬಾಸ್ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿ ಕೊಟ್ಟಿರುವ ರಜತ್ ಅವರು ಉಳಿದ ಸ್ಪರ್ಧಿಗಳಿಗೆ ಟಫ್ ಕಂಟಸ್ಟಂಟ್ ಆಗಿದ್ದಾರೆ. ಅಲ್ಲದೇ ತಮ್ಮ ಅಮೋಘ ಆಟದಿಂದಲೇ ವೀಕ್ಷಕರ ಮನ ಗೆದ್ದಿದ್ದಾರೆ. 

ಮತ್ತೊಂದೆಡೆ ಬಿಗ್‌ಬಾಸ್ ಸ್ಪರ್ಧಿ ರಜತ್ ಕುಟುಂಬಕ್ಕೆ ಟ್ರೋಲ್ ಪೇಜ್‌ಗಳ ಕಾಟ ಹೆಚ್ಚಾಗಿದ್ದು ರಜತ್ ಮಾಜಿ ಗೆಳತಿ ಜೊತೆಗಿನ ಫೋಟೋ ವೈರಲ್ ಆಗಿದೆ. ಟ್ರೋಲ್ ಪೇಜ್‌ಗಳು ಇಬ್ಬರು ಜೊತೆಗಿರುವ ಫೋಟೋವನ್ನು ಅಪ್ಲೋಡ್ ಮಾಡಿವೆ. ಬಳಿಕ ಫೋಟೋ ಡಿಲೀಟ್ ಮಾಡಲು ರಜತ್ ಪತ್ನಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಅಪರಿಚಿತರು ನೀಡಿದ ಯುಪಿಐ ಐಡಿಗೆ ರಜತ್ ತಾಯಿ 6,500 ರೂ. ಹಣವನ್ನು ಹಾಕಿದ್ದಾರೆ. ಹಣ ಹಾಕುತ್ತಿದ್ದಂತೆ ಬೇರೆ ಟ್ರೋಲ್ ಪೇಜ್‌ಗಳಲ್ಲಿ ಫೋಟೋ ಅಪ್ಲೋಡ್ ಆಗಿದೆ. ಮತ್ತೆ ಫೋಟೋ ಡಿಲೀಟ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಟ್ರೋಲ್‌ ಪೇಜ್‌ಗಳ ಹಾವಳಿಗೆ ಬೇಸತ್ತು ರಜತ್ ಪತ್ನಿ ಅಕ್ಷಿತಾ ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ. ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಟ್ರೋಲ್‌ ಪೇಜ್‌ಗಳಲ್ಲಿ ಅಪ್ಲೋಡ್‌ ಆಗಿದ್ದ ಫೋಟೋಗಳು ಡಿಲೀಟ್‌ ಆಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow