ರಾಜ್ಯದಲ್ಲಿ ಔರಂಗಜೇಬನ ಸರ್ಕಾರ ಇದೆ. ಸದ್ಯದಲ್ಲೇ ಪತನವಾಗಲಿದೆ: ಶಾಸಕ ಯತ್ನಾಳ್

ಸೆಪ್ಟೆಂಬರ್ 11, 2025 - 18:00
 0  15
ರಾಜ್ಯದಲ್ಲಿ ಔರಂಗಜೇಬನ ಸರ್ಕಾರ ಇದೆ. ಸದ್ಯದಲ್ಲೇ ಪತನವಾಗಲಿದೆ: ಶಾಸಕ ಯತ್ನಾಳ್

ಬೆಂಗಳೂರು: ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟದ ಘಟನೆ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿದವರು ಮುಸ್ಲಿಮರು. ತಪ್ಪು ಅವರದ್ದಾದರೂ, ಸರ್ಕಾರ ಹಿಂದೂಗಳ ವಿರುದ್ಧ ಕ್ರಮ ಜರುಗಿಸಿದೆಎಂದು ಟೀಕಿಸಿದರು ನಾನು ಮದ್ದೂರಿಗೆ ಹೋಗಬೇಕೆಂಬ ಉತ್ಸಾಹ ಹೆಚ್ಚಾಗಿದೆ.

ಇಂದು ಮದ್ದೂರಿಗೆ ತೆರಳುತ್ತೇನೆ. ರಾಜ್ಯದಲ್ಲಿ ಔರಂಗಜೇಬನ ಸರ್ಕಾರ ಇದೆ. ಸದ್ಯದಲ್ಲೇ ಪತನವಾಗಲಿದೆಎಂದು ಹೇಳಿದರು. ಅಲ್ಲದೇ, “ಒಂದು ಸಮುದಾಯವನ್ನು ಖುಷಿಪಡಿಸಲು ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದು ಎಷ್ಟು ದಿನ ನಡೆಯುತ್ತದೆ ಎಂಬುದನ್ನು ನೋಡೋಣಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow