ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ: ರಕ್ತವಾಂತಿ ಮಾಡಿಕೊಂಡು ಸಾವನಪ್ಪಿದ 5 ಬೀದಿನಾಯಿಗಳು!

ಬೆಂಗಳೂರು: ರಾಜ್ಯದಲ್ಲೇ ಅಮಾನವೀಯ ಕೃತ್ಯ ಎನ್ನುವಂತೆ ಭಟ್ಟರಹಳ್ಳಿಯ ಬೀದಿಯೊಂದರಲ್ಲಿ ರಾತ್ರಿಯ ವೇಳೆ ಆರು ಬೀದಿನಾಯಿಗಳು ರಕ್ತವಾಂತಿ ಮಾಡಿಕೊಂಡು ಒದ್ದಾಡುತ್ತಿರುವ ದೃಶ್ಯ ಕಂಡು ಬಂದಿದೆ. ಹೌದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದ ಕೊಪ್ಪ ವಲಯ ಒಂದರಲ್ಲೇ 5 ಹುಲಿಗಳ ಕಳೆಬರ ಪತ್ತೆಯಾಗಿದ್ದವು.
ಈ ಪ್ರಕರಣವು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಗುರುವಾರ ಆರು ಬೀದಿನಾಯಿಗಳು ರಕ್ತವಾಂತಿ ಮಾಡಿಕೊಂಡಿದ್ದವು. ಈ ಆರು ನಾಯಿಗಳ ಪೈಕಿ ಐದು ನಾಯಿಗಳು ಮೃತಪಟ್ಟಿವೆ. ಐದು ಬೀದಿ ನಾಯಿಗಳು ಒದ್ದಾಡಿ ಪ್ರಾಣಬಿಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಬೀದಿ ನಾಯಿಗಳ ಸಾವಿಗೆ ಕಾರಣ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ನಾಯಿಗಳ ರಕ್ತದ ಮಾದರಿ ರವಾನೆ ಮಾಡಲಾಗಿದೆ. ಈ ಬೀದಿನಾಯಿಗಳಿಗೆ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆಯನ್ನು ಪೊಲೀಸರು ವ್ಯಕ್ತವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






