ರಾತ್ರಿ ಮಲಗೋ ಮುನ್ನ ಕೆಲಸ ಮಾಡಿದ್ರೆ, ಬೆಳಗಾಗುವಷ್ಟರಲ್ಲಿ ಸ್ಲಿಮ್ ಆಗ್ತೀರಾ!?

ನವೆಂಬರ್ 18, 2024 - 07:54
 0  9
ರಾತ್ರಿ ಮಲಗೋ ಮುನ್ನ ಕೆಲಸ ಮಾಡಿದ್ರೆ, ಬೆಳಗಾಗುವಷ್ಟರಲ್ಲಿ ಸ್ಲಿಮ್ ಆಗ್ತೀರಾ!?

ಸ್ಲಿಮ್ ಮತ್ತು ಫಿಟ್ ಆಗಿ ಕಾಣಲು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ತೂಕವನ್ನು ಹೆಚ್ಚಿಸಿಕೊಳ್ಳುವುದು ಬಹಳ ಸುಲಭ, ಆದರೆ ತೂಕವನ್ನು ಕಳೆದುಕೊಳ್ಳುವುದು ತುಂಬಾ ಕಷ್ಟ, ಆದರೆ ನಿಯಮಿತವಾಗಿ ಆಹಾರ ಕ್ರಮ ಮತ್ತು ವ್ಯಾಯಾಮ ಮಾಡುವುದರ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಆದರೆ ನೀವು ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ಎರಡು ವಿಷಯಗಳನ್ನು ಮಾತ್ರ ಫಾಲೋ ಮಾಡಿದರೆ ಸಾಲದು. ಕೆಲವು ಸುಲಭವಾದ ಕೆಲಸವನ್ನು ಮಾಡುವ ಮೂಲಕ ನೀವು ಖಂಡಿತವಾಗಿಯೂ ನಿಮ್ಮ ಈ ಕನಸನ್ನು ನನಸಾಗಿಸಿ ಕೊಳ್ಳಬಹುದು.

ಬೊಜ್ಜು ನಮ್ಮಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ. ಇದಕ್ಕಾಗಿ ನಾವಿಂದು ತಿಳಿಸುವ ಕೆಲವು ಪಾನೀಯಗಳನ್ನು ರಾತ್ರಿ ಹೊತ್ತು ಕುಡಿಯುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

ರಾತ್ರಿ ಮಲಗಲು ಎರಡು ಗಂಟೆಗಳಿಗೂ ಮುನ್ನ ಆಹಾರ ಸೇವಿಸಿ. ನಂತರ ಮಲಗುವ ಅರ್ಧ ಗಂಟೆ ಇರುವುದಕ್ಕೂ ಮುನ್ನ ಈ ಪಾನೀಯಗಳನ್ನು ಕುಡಿಯಿರಿ. ಇದು ನಿಮ್ಮ ತೂಕವನ್ನು ಇಳಿಸುವುದಷ್ಟೇ ಅಲ್ಲದೇ ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಗಳನ್ನು ಒದಗಿಸುತ್ತದೆ. ಹಾಗಾದ್ರೆ ಆ ಪಾನೀಯಗಳು ಯಾವುವು ಅಂತೀರಾ ಈ ಸ್ಟೋರಿ ಓದಿ

ಮೆಂತ್ಯ ನೀರು: ಮೆಂತ್ಯ ಬೀಜಗಳು ತೂಕ ನಷ್ಟಕ್ಕೆ ಸಹಾಯಕವಾಗಿದೆ. ಇದಕ್ಕಾಗಿ ಮೊದಲು ಮೆಂತ್ಯ ಬೀಜಗಳನ್ನು ನೀರಿನಲ್ಲಿ ನೆನೆಸಿ. ನಂತರ ಈ ನೀರಿಗೆ ಜೇನುತುಪ್ಪ ಸೇರಿಸಿ ಮಲಗುವ ಮುನ್ನ ಕುಡಿಯಿರಿ. ಹೀಗೆ ಪ್ರತಿದಿನ ಮಾಡುವುದರಿಂದ ತೂಕ ಇಳಿಸಿಕೆಗೆ ಸಹಾಯಕವಾಗಿದೆ. ಮೆಂತ್ಯ ಬೀಜಗಳು ಫೈಬರ್ನಲ್ಲಿ ಸಮೃದ್ಧವಾಗಿದ್ದು, ಇದು ಹಸಿವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯ ಬೊಜ್ಜನ್ನು ಕರಗಿಸುತ್ತದೆ.

ಅರಿಶಿನ ಹಾಲು: ಅರಿಶಿನ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಶೀತ, ಕೆಮ್ಮು, ಜ್ವರ ಅಥವಾ ಗಾಯವನ್ನು ತಕ್ಷಣವೇ ಗುಣಪಡಿಸುವುದರ ಜೊತೆಗೆ ಅರಿಶಿನವು ತೂಕ ಇಳಿಸುವಲ್ಲಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಅರಿಶಿನವು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದು ದೇಹದಿಂದ ವಿಷವನ್ನು ತೆಗೆದು ಹಾಕುತ್ತದೆ. ತಜ್ಞರ ಪ್ರಕಾರ, ಪ್ರತಿದಿನ ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯಿರಿ. ಇದರಿಂದ ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಬಹುದು.

ದಾಲ್ಚಿನ್ನಿ ಟೀ: ನೀವು ಬೇಗ ಸಣ್ಣ ಆಗಬೇಕೆಂದು ಬಯಸುತ್ತಿದ್ದರೆ ದಾಲ್ಚಿನ್ನಿ ಟೀ ಕುಡಿಯಲು ಆರಂಭಿಸಿ. ತೂಕ ಇಳಿಕೆಗೆ ದಾಲ್ಚಿನ್ನಿ ಚಹಾ ಉತ್ತಮ ನೈಸರ್ಗಿಕ ಪಾನೀಯವಾಗಿದೆ. ಇದು ಚಯಾಪಚಯವನ್ನು ಉತ್ತೇಜಿಸುವ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಆ್ಯಂಟಿಬಯೋಟಿಕ್ಗಳು ಇದನ್ನು ಡಿಟಾಕ್ಸ್ ಪಾನೀಯವನ್ನಾಗಿ ಮಾಡುತ್ತದೆ. ಇದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.

ನಿಂಬೆ ರಸ - ಕಪ್ಪು ಉಪ್ಪು: ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ಹಿಂಡಿ, ಅದಕ್ಕೆ ಬ್ಲ್ಯಾಕ್ ಸಾಲ್ಟ್ ಸೇರಿಸಿ ಕುಡಿಯುವುದರಿಂದ ತೂಕವನ್ನು ತ್ವರಿತವಾಗಿ ಇಳಿಸಿಕೊಳ್ಳಬಹುದು. ಅಲ್ಲದೇ ಇದು ದೇಹದಿಂದ ವಿಷವನ್ನು ಸುಲಭವಾಗಿ ತೆಗೆದು ಹಾಕಲಾಗುತ್ತದೆ. ಇದು ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಮತ್ತು ಕ್ಯಾಲೋರಿಗಳನ್ನು ಬರ್ನ್ ಮಾಡುವಲ್ಲಿ ಬಹಳಷ್ಟು ಸಹಕಾರಿ ಆಗಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow