ರೀಲ್ಸ್ ಜೋಡಿಯ ಕಿತ್ತಾಟ: ನಿನ್ನ ರೇಪ್ ಮಾಡಿ ಗರ್ಭಿಣಿ ಮಾಡ್ತೀನಿ ಎಂದು ವರ್ಷಾಗೆ ವರುಣ್ ಬೆದರಿಕೆ!

ಸೆಪ್ಟೆಂಬರ್ 19, 2024 - 20:02
 0  8
ರೀಲ್ಸ್ ಜೋಡಿಯ ಕಿತ್ತಾಟ: ನಿನ್ನ ರೇಪ್ ಮಾಡಿ ಗರ್ಭಿಣಿ ಮಾಡ್ತೀನಿ ಎಂದು ವರ್ಷಾಗೆ ವರುಣ್ ಬೆದರಿಕೆ!

ಕಳೆದ ಒಂದು ವಾರದಿಂದ ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿ ಜಗಳ ದೊಡ್ಡದಾಗಿದೆ. ಬ್ರೇಕ್ ಆಗಿ ಒಂದು ವರ್ಷ ಆದ್ಮೇಲೆ ವರುಣ್ ಆರಾಧ್ಯ ವಿರುದ್ಧ ವರ್ಷ ಕಾವೇರಿ ದೂರು ನೀಡುತ್ತಾರೆ. ಪೊಲೀಸರು ವರುಣ್‌ನನ್ನು ಕರೆಸಿ ಮೊಬೈಲ್‌ನಲ್ಲಿ ಇರುವ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಘಟನೆ ಬಗ್ಗೆ ಕ್ಲಾರಿಟಿ ಕೊಡಲು ವರ್ಷ ಕಿರಿಕ್ ಕೀರ್ತಿ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನ ನೀಡಿದ್ದರು. ಅಲ್ಲಿಗೆ ಸುಮ್ಮನಾಗದ ವರುಣ್ ಖಾಸಗಿ ಯೂಟ್ಯೂಬ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ವರುಣ್ ಹೇಳಿದ್ದ ಅರ್ಧಕ್ಕೆ ಅರ್ಧ ಸುಳ್ಳು ಎಂದು ವರ್ಷ ಆರೋಪ ಮಾಡಿದ್ದರು. ಇದಕ್ಕೆ ನೆಟ್ಟಿಗರು ಸಾಕ್ಷಿ ಕೇಳಿದ್ದಕ್ಕೆ ವಾಟ್ಸಪ್ ಚಾಟ್ ಲೀಕ್ ಆಗಿದೆ.

ವರುಣ್: ನೋಡ್ತಾ ಇರು ನಾನು ನಿನ್ನ ರೇ*ಪ್​ ಮಾಡ್ತೀನಿ..
ಮಾಜಿ ಪ್ರೇಯಸಿ: ?? ಏನ್​ ಮಾತಾಡ್ತಾ ಇದ್ಯಾ..?
ವರುಣ್: ಎಲ್‌ ಸ್ಟೋರಿ.. ಏನ್ ಮಾಡ್ಕೊತೀಯಾ ಮಾಡ್ಕೋ.. ನಾನು ವರುಣ್ ಆರಾಧ್ಯಾ
ವರುಣ್: ನಾನು ಬರ್ಲಾ.. ನೋಡ್ತೀಯಾ?
ವರುಣ್: ಯಾರನ್ ಕರೀತಿಯಾ ಕರೀ.. ನಾನು ಒಬ್ನೇ ಬರ್ತೀನಿ…ಪೊಲೀಸ್‌ಗೂ ಫೋನ್‌ ಮಾಡು, ನಾನು ಡೀಲ್ ಮಾಡ್ತೀನಿ.
ಮಾಜಿ ಪ್ರೇಯಸಿ: ನೀನ್ಯಾಕ್​ ಬರ್ತೀಯಾ? ಸುಮ್ನೆ?
ವರುಣ್: ನೀನ್​​ ಯಾರನ್ನ ಲವ್ ಮಾಡ್ತೀಯೋ, ಅವನು ಅವತ್ತೇ ಸತ್ತೋಗ್ತಾನೆ.
ವರುಣ್: ನೀನು ಎಲ್ಲಾ ಕಣ್ಣಾರೆ ನೋಡ್ತೀಯಾ..
ಮಾಜಿ ಪ್ರೇಯಸಿ: ಏನ್ ಮಾತಾಡ್ತಾ ಇದ್ಯಾ ನೀನು..?
ವರುಣ್: ನೀನ್​ ಲವ್ ಮಾಡಿದವನನ್ನ ಬೆಳಗ್ಗೆನೇ ಮರ್ಡರ್ ಮಾಡ್ತೀನಿ
ಮಾಜಿ ಪ್ರೇಯಸಿ: ಇದೆಲ್ಲಾ ನಮ್ರತಾ ಹತ್ರ ಇಟ್ಕೋ..ನನ್ನ ಹತ್ರ ಬೇಡ
ವರುಣ್: ನನ್ನ ಹತ್ರ ಪವರ್ ಇದೆ.. ಎಲ್ಲಾ ಇದೆ..
ವರುಣ್: ಪಕ್ಕ ಯಾರು ಇಲ್ಲ..ನೋಡ್ತಾ ಇರು ನಾನು ನಿನ್ನ ಗರ್ಭಿಣಿ ಮಾಡ್ತೀನಿ.. ಈಗಲೇ ನಾನು ಬರ್ತೀನಿ
ಮಾಜಿ ಪ್ರೇಯಸಿ: ಅರ್ಹತೆ ಇರೋ ವ್ಯಕ್ತಿಗೆ ಮಾತ್ರ ನಾನು ಸಿಗ್ತೀನಿ

ವರುಣ್​ ಆರಾಧ್ಯನದ್ದೇ ಎನ್ನಲಾದ ಈ ಚಾಟಿಂಗ್​​ ಪೋಸ್ಟ್ ಅನ್ನು ದೂರು ಕೊಟ್ಟಿದ್ದ ಮಾಜಿ ಪ್ರೇಯಸಿಯೇ ಶೇರ್​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಮಾತನಾಡುತ್ತಾ ಇದನ್ನ ಇಲ್ಲಿಗೆ ಬಿಟ್ಟು ಬಿಡಬೇಕು ಅಂದಿದ್ದ ಇಬ್ಬರು ಮತ್ತೆ ಕೆಣಕುತ್ತಿರೋದು ಯಾಕೆ ಅನ್ನೋದು ಅರ್ಥವಾಗಿಲ್ಲ. ಅತ್ತ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow