ಲವ್ ಮಾಕ್ಟೇಲ್ ಸುಶ್ಮಿತಾ ನಿವಾಸದಲ್ಲಿ ಮನೆ ಮಾಡಿದ ಸಂಭ್ರಮ..! ಬೇಬಿ ಬಂಪ್ ಲುಕ್ʼನಲ್ಲಿ ನಟಿ!

ಲವ್ ಮಾಕ್ಟೇಲ್ ಸಿನಿಮಾ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಸುಶ್ಮಿತಾ ಗೌಡ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಖುಷಿಯಲ್ಲಿದ್ದ ಸ್ಟಾರ್ ನಟಿ ಸುಶ್ಮಿತಾ ಅವರಿಗೆ ಇತ್ತೀಚೆಗೆ ಸೀಮಂತ ಶಾಸ್ತ್ರ ನಡೆದಿತ್ತು.
ಎಸ್, ಲವ್ ಮಾಕ್ಟೇಲ್ ಸಿನಿಮಾದಲ್ಲಿ ಖ್ಯಾತಿ ಪಡೆದಿದ್ದ ನಟಿ ಸುಶ್ಮಿತಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಿಯಾಗುತ್ತಿರುವ ಖುಷಿಯಲ್ಲಿದ್ದ ಸ್ಟಾರ್ ನಟಿ ಸುಶ್ಮಿತಾ ಅವರಿಗೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ.
ಮೊದಲ ಬೇಬಿ ಬಂಪ್ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಕಪ್ಪು ಬಣ್ಣದ ಲಾಂಗ್ ಗೌನ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಪತಿ ಅಶ್ವಿನ್ ಜೊತೆ ಯಕ್ಷಗಾನ ಕಾನ್ಸೆಪ್ಟ್ನೊಂದಿಗೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು ನಟಿ ಸುಶ್ಮಿತಾ. ಇದಾದ ಬಳಿಕ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ನಟಿ ಸಿಂಪಲ್ ಆಗಿ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?






