ವಯಸ್ಸು 54 ಆದರೂ ರಜನಿ, ಕಮಲ್ ಜೊತೆ ನಟಿಸಿದ್ದ ಈ ನಟಿ ಮದುವೆಯನ್ನೇ ಆಗಿಲ್ಲವೇಕೆ ಗೊತ್ತಾ..?

ಎಪ್ರಿಲ್ 20, 2025 - 18:12
ಎಪ್ರಿಲ್ 19, 2025 - 12:44
 0  14
ವಯಸ್ಸು 54 ಆದರೂ ರಜನಿ, ಕಮಲ್ ಜೊತೆ ನಟಿಸಿದ್ದ ಈ ನಟಿ ಮದುವೆಯನ್ನೇ ಆಗಿಲ್ಲವೇಕೆ ಗೊತ್ತಾ..?

ಮದುವೆಯ ಬಗ್ಗೆ ಪ್ರತಿಯೊಬ್ಬರಿಗೂ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗ ತಮ್ಮ 20 ರ ಹರೆಯದಲ್ಲಿ ಮದುವೆಯಾಗುತ್ತಾರೆ. ಇನ್ನು ಕೆಲವರು 50 ದಾಟಿದರೂ ಸಿಂಗಲ್. ನಾಯಕರಲ್ಲಿ ಸಲ್ಮಾನ್ ಖಾನ್. ಹೀರೋಯಿನ್ ಗಳಲ್ಲಿ ಟಬು ಅವರಂತಹವರು 50 ದಾಟಿದರೂ ಮದುವೆಯಿಂದ ದೂರ ಉಳಿದ ನಟಿಯರಿದ್ದಾರೆ.
ಇವರ ಸಾಲಿನಲ್ಲಿ ಹಿರಿಯ ನಟಿ ಶೋಭನಾ ಕೂಡ 50 ದಾಟಿದರೂ ಮದುವೆಯಾಗಿರಲಿಲ್ಲ.. ಹೌದು ಶೋಭನಾ ಚಂದ್ರಕುಮಾರನ್ ಪಿಳ್ಳೆ ಎಂಬುದು ಇವರ ಪೂರ್ಣ ಹೆಸರು. 1970ರ ಮಾರ್ಚ್ 21ರಂದು ಕೇರಳದ ತಿರುವನಂತಪುರದಲ್ಲಿ ಜನಿಸಿದರು. ಪ್ರಸಿದ್ಧ ನಟರು ಮತ್ತು ನೃತ್ಯಗಾರರಾದ ಲಲಿತಾ, ಪದ್ಮಿನಿ ಮತ್ತು ರಾಗಿಣಿ ಅವರ ಸಂಬಂಧಿ. ತಮ್ಮ 10ನೇ ವಯಸ್ಸಿನಲ್ಲಿ ಅಂದರೆ 1980ರಲ್ಲಿ ಕೆ.ಆರ್.ವಿಜಯ ಅಭಿನಯದ ತಮಿಳು ಚಿತ್ರ ಮಂಗಳ ನಾಯಕನ್ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆ ನಂತರ ಮನ್ಮಧ ರಾಗಂಗಳ್ ಚಿತ್ರದಲ್ಲೂ ಕಾಣಿಸಿಕೊಂಡರು.

ಭಕ್ತ ಧ್ರುವ ಮಾರ್ಕಂಡೇಯ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. 1984ರಲ್ಲಿ ಬಿಡುಗಡೆಯಾದ 'ಏಪ್ರಿಲ್ 18' ಶೀರ್ಷಿಕೆಯ ಚಿತ್ರದ ಮೂಲಕ ತಮ್ಮ 14ನೇ ವಯಸ್ಸಿನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದರು. ಬಾಲಚಂದ್ರ ಮೆನನ್ ನಿರ್ದೇಶಿಸಿ ನಟಿಸಿದ್ದ ಈ ಚಿತ್ರದಲ್ಲಿ ಅಡೂರ್ ಭಾಸಿ ಮತ್ತು ಭರತ್ ಗೋಪಿ ಪ್ರಮುಖ ಪಾತ್ರ ಮಾಡಿದ್ದರು. ಶೋಭನಾ ಅಭಿನಯ ವಿಮರ್ಶಕರಿಂದ ಪ್ರಶಂಸೆ ಗಿಟ್ಟಿಸಿಕೊಂಡಿತ್ತು.
ನಂತರ ಬಾಲ ಕಲಾವಿದೆಯಾಗಿ ಕಮಲ್ ಹಾಸನ್ ಅವರ 'ಎನಕ್ಕುಲ್ ಒರುವನ್'ನಲ್ಲಿ ನಟಿಸಿದ್ದರು. ಈ ಚಿತ್ರ ಯಶಸ್ವಿಯಾಗದಿದ್ದರೂ, ಶೋಭಾನಾ ಅವರಿಗೆ ಅನೇಕ ತಮಿಳು ಚಿತ್ರಗಳಲ್ಲಿ ಅವಕಾಶಗಳನ್ನು ತಂದುಕೊಟ್ಟಿತು. ನಂತರ ಸತ್ಯರಾಜ್, ವಿಜಯ್ ಕಾಂತ್ ಮತ್ತು ಭಾಗ್ಯರಾಜ್ ಅವರಂತ ನಟರ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡರು.

ಮಲಯಾಳಂ ಚಿತ್ರರಂಗದಲ್ಲಿ ಶೋಭನಾ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನಮರಾಯತು, ಇತ್ತಿರಿ ಪೂವೆ, ಚೂವಣ್ಣ ಪೂವೆ, ನಾಡೋಡಿಕ್ಕಟ್ಟು, ವೆಳ್ಳನಕಾಳುದೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಸೂಪರ್‌ ಸ್ಟಾರ್‌ಗಳಾದ ಮೋಹನ್‌ಲಾಲ್ ಮತ್ತು ಮಮ್ಮುಟ್ಟಿ ಜೊತೆ ಶೋಭನಾ ತೆರೆಹಂಚಿಕೊಂಡರು. 1980ರ ದಶಕದಲ್ಲಿ ಟಾಪ್ ಹೀರೋಯಿನ್ಗಳಲ್ಲಿಒಬ್ಬರಾಗಿ ಜನಪ್ರಿಯರಾದರು.
ಇದೇ ವೇಳೆ, 'ವಿಕ್ರಮ್' ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯರಾದ ಇವರು ಟಾಲಿವುಡ್ ಟಾಪ್ ಹೀರೋಗಳಾದ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್ ಜೊತೆ ತೆರೆಹಂಚಿಕೊಂಡರು. ಅಜೆಯಡು, ರುದ್ರವೀಣ, ತ್ರಿಮೂರ್ತಿಲು, ಏಪ್ರಿಲ್ 1ರಲ್ಲಿ ಕಾಣಿಸಿಕೊಂಡರು. 1990ರ ದಶಕದಲ್ಲಿ, ರಜನಿಕಾಂತ್-ಮಣಿರತ್ನಂ ಅವರ 'ದಳಪತಿ', ಚಿರಂಜೀವಿ ಜೊತೆಗಿನ 'ರೌಡಿ ಅಲ್ಲುಡು' ಮತ್ತು ವಿಷ್ಣುವರ್ಧನ್ ಜೊತೆಗಿನ 'ಶಿವಶಂಕರ್' ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದರು. ಮೋಹನ್ ಲಾಲ್ ಜೊತೆ ತೆರೆಹಂಚಿಕೊಂಡ 'ಇತಿಹಾಸಂ ಮಣಿಚಿತ್ರತಾಜ' ಚಿತ್ರದಲ್ಲಿ ಶೋಭಾನಾ ಮೊದಲ ಬಾರಿಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದರು. ಕನ್ನಡದಲ್ಲಿ, ಅಂಬರೀಷ್ ನಟನೆಯ ‘ಗಿರಿ ಬಾಲೆ’ (1985) ಹಾಗೂ ವಿಷ್ಣುವರ್ಧನ್ ನಟನೆಯ ‘ಶಿವಂಶಕರ್’ (1990) ಚಿತ್ರದಲ್ಲಿ ಅಭಿನಯಿಸಿದರು.

ಆ ಬಳಿಕ ಶೋಭನಾ ಕನ್ನಡದಲ್ಲಿ ಅವರು ಅಷ್ಟಾಗಿ ಸಿನಿಮಾ ಮಾಡಿಲ್ಲ. ಅವರು ಈವರೆಗೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿ ಶೋಭಾನಾ ನಟಿಸಿದ್ದಾರೆ. ಕೊನೆಗೆ ತಮಿಳಿನ ‘ಕೊಚ್ಚಡೈಯಾನ್’ ಚಿತ್ರದಲ್ಲಿ ನಟಿಸಿದ್ದಾರೆ. ಅದಾದ ನಂತರ ಆಗಾಗ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಾ ಫುಲ್ ಟೈಮ್ ಡ್ಯಾನ್ಸ್ ನತ್ತ ಗಮನ ಹರಿಸಿದ್ದಾರೆ.ಶೋಭನಾ ಭರನಾಟ್ಯ ಕಲಾವಿದೆ. ಶೋಭನಾ ಪ್ರಸ್ತುತ ಚೆನ್ನೈನಲ್ಲಿ ಕಲಾರ್ಪಣ ಎಂಬ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. 2006 ರಲ್ಲಿ, ಅವರು ಕಲೆಗೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.

ಇತ್ತೀಚೆಗೆ ನಟಿ ಶೋಭನಾ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಅದಾದ ನಂತರ ಚಿತ್ರರಂಗದ ಅನೇಕರು ನಟಿ ಸೋಭಾನಾ ಅವರನ್ನು ಅಭಿನಂದಿಸಿದರು. ಅವರು ಮದುವೆ ಆಗದಿರಲು ಕಾರಣವೂ ಇದೆ. ‘ಮದುವೆಯ ಮೇಲೆ ನಂಬಿಕೆ ಇಲ್ಲದ ಕಾರಣ ಹಾಗೂ ಮದುವೆಯಾದರೆ ವೈಯುಕ್ತಿಕ ಸ್ವಾತಂತ್ರ್ಯ ಕಳೆದುಕೊಳ್ಳುವ ಕಾರಣಕ್ಕೆ ಮದುವೆಯಾಗಿಲ್ಲ’ ಎಂದು ಬಹಿರಂಗವಾಗಿಯೇ ಮಾತನಾಡಿದ್ದಾರೆ. ಇತ್ತೀಚೆಗೆ 'ಕಲ್ಕಿ 2928 ಎಡಿ' ಮೂಲಕ ಟಾಲಿವುಡ್ಗೆ ಮರು ಪ್ರವೇಶಿಸಿದರು. ನಾಗ್ ಅಶ್ವಿನ್ ನಿರ್ದೇಶಿಸಿದ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಸದ್ಯ ಮೋಹನ್ ಲಾಲ್ ಮತ್ತು ರಜನಿಕಾಂತ್ ಅವರ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow