ವಿಶ್ವದಾದ್ಯಂತ 560 ಕೋಟಿ ಗಳಿಕೆ ಮಾಡಿದ ‘ಸ್ತ್ರೀ 2’ ಸಿನಿಮಾ.!

ಆಗಸ್ಟ್ 27, 2024 - 09:56
 0  12
ವಿಶ್ವದಾದ್ಯಂತ 560 ಕೋಟಿ ಗಳಿಕೆ ಮಾಡಿದ ‘ಸ್ತ್ರೀ 2’ ಸಿನಿಮಾ.!
FOCUS KARNATAKA Shraddha Kapoor

ವಿಶ್ವದಾದ್ಯಂತ 560 ಕೋಟಿ ಗಳಿಕೆ ಮಾಡಿದ ‘ಸ್ತ್ರೀ 2’ ಸಿನಿಮಾ.!

ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ರಿಲೀಸ್ ಆದ 11 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 560 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ‘ಸ್ತ್ರೀ 2’ ಸಿನಿಮಾ ದಾಖಲೆ ಬರೆದಿದೆ.

ಚಿತ್ರಮಂದಿರಲ್ಲಿ ದೆವ್ವದ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ. ಶ್ರದ್ಧಾ ನಟನೆಯ ಈ ಚಿತ್ರದಿಂದ ಬಾಲಿವುಡ್‌ಗೆ ಮರುಜೀವ ಸಿಕ್ಕಂತೆ ಆಗಿದೆ. ‘ಸ್ತ್ರೀ 2’ ಚಿತ್ರವು 11 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 560 ಕೋಟಿ ರೂ. ಮತ್ತು ಭಾರತದಲ್ಲಿ 402 ಕೋಟಿ ರೂ. ಕಲೆಕ್ಷನ್ ಮಾಡಿರುವ ಬಗ್ಗೆ ಖುದ್ದು ‘ಸ್ತ್ರೀ 2’ ಸಿನಿಮಾದ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಫಿಲ್ಮ್ಂಸ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಈ ಸಿನಿಮಾದ ಗೆಲುವಿನಿಂದ ಶ್ರದ್ಧಾಗೂ ಬೇಡಿಕೆ ಹೆಚ್ಚಾಗಿದೆ. ಶ್ರದ್ಧಾ ಮತ್ತು ರಾಜ್‌ಕುಮಾರ್ ರಾವ್ ನಟನೆಯ ಜೊತೆ ತಮನ್ನಾ ಐಟಂ ಡ್ಯಾನ್ಸ್‌ಗೆ ಫ್ಯಾನ್ಸ್ ಕಡೆಯಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ. ಅಭಿಮಾನಿಗಳು ಮುಗಿಬಿದ್ದು ಥಿಯೇಟರ್‌ನಲ್ಲಿ ಸಿನಿಮಾ ನೋಡ್ತಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow