ಕದನ ವಿರಾಮಕ್ಕೆ ಬೆಲೆ ನೀಡದ ನೆರೆ ರಾಷ್ಟ್ರ: ಇಂದು ರಾತ್ರಿ 8ಕ್ಕೆ ದೇಶವನ್ನುದ್ದೇಶಿಸಿ ಮೋದಿ ಭಾಷಣ

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ವಿರಾಮ ಘೋಷಣೆಯಾಗಿದ್ದರೂ ಕೂಡ ಪಾಕಿಸ್ತಾನವು ಗಡಿಯಲ್ಲಿ ಗುಂಡಿನ ದಾಳಿಯನ್ನು ಮುಂದುವರೆಸಿದೆ. ಶನಿವಾರ ಸಂಜೆ ವಿದೇಶಾಂಗ ಸಚಿವಾಲಯವು ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ತಿಳಿಸಿತ್ತು. ಆದ್ರೆ ಪಾಕಿಸ್ತಾನವು ಗಡಿಯಲ್ಲಿ ಗುಂಡಿನ ದಾಳಿಯನ್ನು ಮುಂದುವರೆಸಿದೆ.
ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸೇನೆ ನಡೆಸಿದ ಆಪರೇಷನ್ ಸಿಂದೂರ್ ಬಗ್ಗೆ ಕೂಡ ಮಾತನಾಡಬಹುದು. ಹಾಗೂ ಭಾರತದ ಪಾಕ್ ವಿರುದ್ಧ ನಡೆಸಿದ ಸೇನಾ ಕಾರ್ಯಚರಣೆ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದು ಪ್ರಧಾನಿ ಮೋದಿ ಅವರು ಆಪರೇಷನ್ ಸಿಂದೂರ್ ನಂತರ ಮಾಡುತ್ತಿರುವ ಮೊದಲು ಭಾಷಣವಾಗಿದೆ.
ಬಿಹಾರದಲ್ಲಿ ಆಪರೇಷನ್ ಸಿಂದೂರಕ್ಕೂ ಮುನ್ನ, ಯಾವುದೇ ಕಾರಣಕ್ಕೂ ಉಗ್ರರನ್ನು ಬಿಡುವುದಿಲ್ಲ. ಅವರ ನಾಶ ಮಾಡುವುದು ಖಂಡಿತ. ಅದರಲ್ಲೂ ಮೋದಿ ಅವರು ಸಾಮಾನ್ಯವಾಗಿ ಹಿಂದಿಯಲ್ಲೇ ಭಾಷಣ ಮಾಡೋದು, ಆದರೆ ಅಂದು ಜಗತ್ತಿನ ಎಲ್ಲ ದೇಶಗಳಿಗೆ ಸ್ಪಷ್ಟವಾಗಿ ತಿಳಿಸುವ ಉದ್ದೇಶದಿಂದ ಬಿಹಾರದ ಕಾರ್ಯಕ್ರಮದಲ್ಲಿ ಇಂಗ್ಲಿಷ್ನಲ್ಲಿ ಮಾತನಾಡಿದ್ದಾರೆ.
ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ ಮತ್ತು ಶಿಕ್ಷಿಸುತ್ತದೆ. ಉಗ್ರರನ್ನು ಹುಡುಕಿ ಹುಡುಕಿ ಹಿಡಿಯುತ್ತೇವೆ ಎನ್ನುವ ಮೂಲಕ ಪಾಕ್ಗೆ ಜತೆಗೆ ವಿಶ್ವಕ್ಕೂ ಸ್ಪಷ್ಟ ಸಂದೇಶವನ್ನು ಅಂದು ನೀಡಿದರು. ಆಪರೇಷನ್ ಸಿಂದೂರದ ಬಳಿಕ ಸೇನೆಯ ಜತೆಗೆದ ಗಂಭೀರ ಚರ್ಚೆಗಳನ್ನು ನಡೆಸಿದ್ದಾರೆ.
ಮೂರು ಸೇನೆಗಳ ಮುಖ್ಯಸ್ಥರ ಜತೆಗೆ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಅನೇಕ ಅಧಿಕಾರಿಗಳೊಂದಿಗೆ ನಿರಂತರ ಸಮಾಲೋಚನೆಯನ್ನು ಮಾಡುತ್ತಿದ್ದರು. ನಂತರ ಪಾಕ್ ಮತ್ತು ಭಾರತ ನಡುವಿನ ಯುದ್ಧಕ್ಕೆ ಕದನ ವಿರಾಮ ಘೋಷಣೆಯನ್ನು ಮಾಡಿದ ನಂತರವು ಕೂಡ ಅವರು ಸಭೆಗಳನ್ನು ನಡೆಸಿ, ಮುಂದಿನ ನಿಲುವುಗಳೇನು ಎಂಬ ಬಗ್ಗೆಯೂ ಸ್ಪಷ್ಟವಾಗಿ ಹೇಳಿದರು. ಇದೀಗ ದೇಶದ ಜನರನ್ನು ಉದ್ದೇಶಿ ಮಾತನಾಡಲಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






