ರಾಮಫಲ ಸೇವಿಸೋದರಿಂದ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ಮೇ 14, 2025 - 07:00
 0  13
ರಾಮಫಲ ಸೇವಿಸೋದರಿಂದ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

 

ಕೆಲವು ಹಣ್ಣುಗಳು ಮತ್ತು ತರಕಾರಿಗಳನ್ನು ನಾವು ಸೇವಿಸುವುದಿಲ್ಲ. ಇದಕ್ಕೆ ಕಾರಣ ಅವುಗಳ ಬಗ್ಗೆ ನಮಗೆ ಹೆಚ್ಚಿನ ಸಂಗತಿ ತಿಳಿದಿರದೆ ಇರುವುದು. ಅಂತಹ ಅಪರೂಪದ ಹಣ್ಣುಗಳಲ್ಲಿ ರಾಮ ಫಲವೂ ಒಂದು. ಇದು ಸೀತಾ ಫಲ ಹಣ್ಣನ್ನು ಹೋಲುತ್ತದೆ. ರಾಮ ಫಲ ಹಣ್ಣು ವಿಶೇಷ ಬಗೆಯ ರಸ ಹಾಗೂ ಸಿಹಿಯ ಗುಣದಿಂದ ಕೂಡಿರುತ್ತದೆ. ಒಂದು ತುಲನೆಯ ಪ್ರಕಾರ 100 ಗ್ರಾಂ ರಾಮ ಫಲ ಹಣ್ಣಿನಲ್ಲಿ 15.7 ಗ್ರಾಂ. ಕಾರ್ಬೋಹೈಡ್ರೇಟ್ಸ್, 20 ಗ್ರಾಂ ಫೋಸ್ಪರಸ್, 2 ಎಮ್‍ಜಿ ವಿಟಮಿನ್ ಬಿ6, 30 ಎಮ್‍ಜಿ ಕ್ಯಾಲ್ಸಿಯಮ್, 19 ಎಮ್‍ಜಿ ವಿಟಮಿನ್ ಸಿ, 2.5 ಫೈಬರ್, 6 ಗ್ರಾಂ. ಕೊಬ್ಬನ್ನು ಹೊಂದಿರುತ್ತದೆ.

ಚರ್ಮ ಮತ್ತು ಕೂದಲಿಗೆ ಒಳ್ಳೆಯದುಇದು ವಿಟಮಿನ್ ಸಿ ಅಂಶವನ್ನು ಹೊಂದಿದ್ದು, ಅದು ನಿಮ್ಮ ಚರ್ಮ ಮತ್ತು ಕೂದಲಿಗೆ ಪ್ರಯೋಜನವನ್ನು ನೀಡುತ್ತದೆ. ಮೊಡವೆಗಳನ್ನು ಕಡಿಮೆ ಮಾಡಲು ರಾಮಫಲ ಒಳ್ಳೆಯದು. ಎಂದು ಅವ್ನಿ ಕೌಲ್ ಹೇಳುತ್ತಾರೆ. ಹಣ್ಣಿನಲ್ಲಿರುವ ವಿಟಮಿನ್ ಸಿ ಚರ್ಮದ ಸಮಸ್ಯೆಗಳಿಗೆ ಕಾರಣವಾಗುವ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನೀವು 30 ಹರೆಯದವರಾಗಿದ್ದರೆ ಮತ್ತು ಮೊಡವೆಗಳನ್ನು ಹೊಂದಿದ್ದರೆ ಹಣ್ಣು ನಿಮ್ಮ ಹೊಳಪನ್ನು ಮರಳಿ ತರಲು ಸಹಾಯ ಮಾಡುತ್ತದೆ.

ಮಧುಮೇಹಕ್ಕೆ ಒಳ್ಳೆಯದುಮದುಮೇಹಿಗಳಿಗೆ ವಿಶೇಷವಾಗಿ ಹಣ್ಣುಗಳ ವಿಚಾರಕ್ಕೆ ಬಂದಾಗ ಯಾವುದನ್ನು ತಿನ್ನಬೇಕು ಮತ್ತು ಯಾವುದನ್ನು ಇನ್ನಬಾರದು ಎಂಬುವುದನ್ನು ಆರಿಸಿಕೊಳ್ಳುವುದು ನಿರಂತರ ಹೋರಾಟವಾಗಿದೆ. ರಾಮಫಲವು ಒಂದು ಹೈಪರ್ ಲೋಕಲ್ ಹಣ್ಣು ಎಂದು ಅವ್ನಿ ಕೌಲ್ ಹೇಳುತ್ತಾರೆ, ಇದು ರಕ್ತದಲ್ಲಿನ ಗ್ಲೂಕೋಸ್ ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆಚಳಿಗಾಲದ ಹವಾಮಾನದ ಬದಲಾವಣೆಯಿಂದಾಗಿ ಅನಾರೋಗ್ಯಕ್ಕೆ ಒಳಗಾಗುವ ಮತ್ತು ಶೀತ, ಕೆಮ್ಮಿನಿಂದ ನಿರಂತರವಾಗಿ ಹೋರಾಡುತ್ತಿರುವ ಎಲ್ಲರಿಗೂ ರಾಮಫಲ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಸಿ, ಮತ್ತು ಬಿ ವಿಟಮಿನ್ಗಳ ಅಂಶವು ರೋಗ ನಿರೋಧಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗೂ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದು ಅವ್ನಿ ಕೌಲ್ ಹೆಳುತ್ತಾರೆ.

ದುರ್ಬಲ ಕೀಳುಗಳಿಗೆ ಸಹಾಯಕಾರಿಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುವುದು ಸಾಮಾನ್ಯವಾಗಿದೆ, ಅದರಲ್ಲೂ ವಿಶೇಷವಾಗಿ ವಯಸ್ಸಾದವರಲ್ಲಿ. ರಾಮಫಲವು ನೋವುಗಳ ಶಮನಕ್ಕೆ ಉಪಯೋಗಕಾರಿಯಾಗಿದೆ. ಇದು ಉರಿಯೂತ ನಿವಾರಕವಾಗಿರುವುದರಿಂದ ಇದು ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಕೀಲು ನೋವು ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಹೃದಯಕ್ಕೆ ಪ್ರಯೋಜನಕಾರಿರಾಮಫಲದಲ್ಲಿರುವ ವಿಟಮಿನ್ ಬಿ6 ಹೃದಯದ ಬಳಿ ಸಂಗ್ರಹವಾಗುವ ಕೊಬ್ಬನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ ಎಂದು ಅವ್ನಿ ಕೌಲ್ ಹೇಳುತ್ತಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow