Kantara 2 ಸಿನಿಮಾದಿಂದ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ Rakesh Poojari..!

ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೇ 11ರ ಬೆಳಿಗ್ಗೆ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ರ ಶೂಟ್ನಲ್ಲಿ ಅವರು ಇದ್ದರು. ಮಧ್ಯರಾತ್ರಿ ಅವರಿಗೆ ಸಾವು ಸಂಭವಿಸಿದೆ.
ಕನ್ನಡದ ದೊಡ್ಡ ಬಜೆಟ್ನಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾವೊಂದರ ಶೂಟಿಂಗ್ ಅನ್ನು ರಾಕೇಶ್ ಪೂಜಾರಿ ಪೂರ್ಣಗೊಳಿಸಿದ್ದರು. ಹೀಗಾಗಿ ಸಿನಿಮಾದಿಂದಲೇ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದರು. ಈಗಾಗಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದರೂ ಈ ಹೊಸ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು.
ತಮಗೆ ಅನಾರೋಗ್ಯ ಕಾಡುತ್ತಿರುವ ಬಗ್ಗೆ ನಿರ್ಲಕ್ಷ್ಯ ಮಾಡಿದ್ದ ರಾಕೇಶ್ ನಿದ್ರೆ, ಊಟ ಸರಿಯಾಗಿ ಇಲ್ಲದಿದ್ದಕ್ಕೆ ಹೀಗಾಗುತ್ತಿದೆ ಎಂದುಕೊಂಡಿದ್ದರು. ನಿನ್ನೆ ಕಾರ್ಕಳದಲ್ಲಿ ಮದುವೆ ಸಮಾರಂಭವೊಂದರಲ್ಲಿ ಕುಸಿದು ಬಿದ್ದಿದ್ದರು. ಆಗ ತಕ್ಷಣ ಸ್ಥಳೀಯರು ಎಲ್ಲ ಸೇರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಹೃದಯಾಘಾತವಾಗಿದೆ ಎಂದು ದೃಢ ಪಡಿಸಲಾಗಿತ್ತು.
ಸಿನಿಮಾಗಳಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದ 33 ವರ್ಷದ ರಾಕೇಶ್ಗೆ ತಾಯಿ ಹಾಗೂ ಸಹೋದರಿಯ ಇದ್ದು ಮನೆಗೆ ಆಧಾರಸ್ತಂಭ ಆಗಿದ್ದರು. ಇಡೀ ಮನೆಯ ಜವಾಬ್ದಾರಿ ರಾಕೇಶ್ ಮೇಲಿತ್ತು. ಸದ್ಯ ರಾಕೇಶ್ ಸಾವಿನ ಸುದ್ದಿ ತಿಳಿದು ಕಾಮಿಡಿ ಕಲಾವಿದರ ತಂಡ ಕಂಬನಿ ಮಿಡಿಯುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






