ಕುಡಿತದ ಚಟಕ್ಕೊಳಗಾದ ಮಾಜಿ ಕ್ರಿಕೆಟಿಗ: ವಿನೋದ್ ಕಾಂಬ್ಳಿ ಈ ಸ್ಥಿತಿಗೆ ಕಾರಣ ಏನು ಗೊತ್ತಾ? ಪತ್ನಿ ಹೇಳಿದಿಷ್ಟು!

ಜನವರಿ 10, 2025 - 09:19
 0  13
ಕುಡಿತದ ಚಟಕ್ಕೊಳಗಾದ ಮಾಜಿ ಕ್ರಿಕೆಟಿಗ: ವಿನೋದ್ ಕಾಂಬ್ಳಿ ಈ ಸ್ಥಿತಿಗೆ ಕಾರಣ ಏನು ಗೊತ್ತಾ? ಪತ್ನಿ ಹೇಳಿದಿಷ್ಟು!

ಎಕ್ಸ್‌ಕ್ಲೂಸಿವ್ಕೈಕೊಟ್ಟ ಅದೃಷ್ಟ. ಕ್ರಿಕೆಟ್ ಲೋಕದಲ್ಲಿ ವಿನೋದ್ ಕಾಂಬ್ಳಿ ಮಿಂಚಲೇ ಇಲ್ಲ. ಪ್ರತಿಭಾನ್ವಿತ ಆಟಗಾರ ಎಡವಿದ್ದು ಮಾತ್ರ ಬೇಸರ. ಟೀಮ್ ಇಂಡಿಯಾ ಆಧಾರ ಸ್ತಂಭ ಆಗಬೇಕಾದವರು ಆಸ್ಪತ್ರೆ ಸೇರಿರುವುದು ದುರಂತ. 

ಎಸ್,ಗುಡಿಸಲ ಬಾಲ್ಯ, ಶಾಲಾ ದಿನಗಳಲ್ಲೇ ವಿಶ್ವದಾಖಲೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಲು ಸಾಲು ಶತಕಗಳು, ವರ್ಣರಂಜಿತ ಜೀವನಶೈಲಿ, ಮೈದಾನದಲ್ಲಿ ಕಣ್ಣೀರು, ತಂಡದಿಂದ ಗೇಟ್ ಪಾಸ್, ರಾಜಕೀಯ, ಸಿನಿಮಾ, ಸಚಿನ್ ಎಂಬ ಜೀವದ ಗೆಳೆಯ, ಒಂದಷ್ಟು ವಿವಾದಗಳು. ಇದು ವಿನೋದ್ ಕಾಂಬ್ಳಿ ಎಂಬ ಅಪ್ಪಟ ಪ್ರತಿಭಾನ್ವಿತ ಆಟಗಾರನ ಜೀವನದ ಒನ್ ಲೈನ್ ಸ್ಟೋರಿ.

 ಹೌದು, ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕಳೆದೊಂದು ತಿಂಗಳಿಂದ ಸುದ್ದಿಯಲ್ಲಿದ್ದಾರೆ.

ಕಾಂಬ್ಳಿ ಅವರ ಕುರಿತಾಗಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಪತ್ನಿ ಆಂಡ್ರಿಯಾ ಹೆವಿಟ್ ತೆರೆ ಎಳೆಯಲು ಆಂಡ್ರಿಯಾ ನಿರ್ಧರಿಸಿದ್ದಾರೆ. ಅಲ್ಲದೆ ತಮ್ಮ ವೈಯಕ್ತಿಕ ಹಾಗೂ ಖಾಸಗಿ ಬದುಕಿನ ಬಗ್ಗೆ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಆಂಡ್ರಿಯಾ ಅವರು ತನ್ನ ಮದುವೆ, ಆರ್ಥಿಕ ಸಮಸ್ಯೆಗಳು ಮತ್ತು ಕಾಂಬ್ಳಿಯ ಮದ್ಯಪಾನ ತನ್ನ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ.

ವಿನೋದ್ ಕಾಂಬ್ಳಿ ಕ್ರಿಕೆಟರ್ ಆಗಿದ್ದ ವೇಳೆ ಆಂಡ್ರಿಯಾ ಹೆವಿಟ್ ಮಾಡೆಲ್​ ಆಗಿ ಗುರುತಿಸಿಕೊಂಡಿದ್ದರು. ಅವರು ಮೊದಲ ಬಾರಿಗೆ ವಿನೋದ್ ಕಾಂಬ್ಳಿ ಅವರನ್ನು 2004 ರಲ್ಲಿ ಭೇಟಿಯಾಗಿದ್ದರು. ಆ ವೇಳೆ ಕಾಂಬ್ಳಿ ಅವರ ತಾಯಿ ನಿಧನರಾಗಿದ್ದರು.

ತಾಯಿಯ ನಿಧನದಿಂದಾಗಿ ಮಾನಸಿಕವಾಗಿ ನೊಂದಿದ್ದ ವಿನೋದ್ ಕಾಂಬ್ಳಿ ಕುಡಿತದ ಚಟಕ್ಕೆ ಬಿದ್ದರು. ಭಾವನಾತ್ಮಕವಾಗಿ ಕುಸಿದು ಹೋಗಿದ್ದ ಅವರು ಮದ್ಯಪಾನವನ್ನು ದೈನಂದಿನ ಪ್ರಕ್ರಿಯೆಯಾಗಿಸಿದರು. ಈ ಮೂಲಕ ಅಮ್ಮನ ಅಗಲಿಕೆಯ ನೋವನ್ನು ಮರೆಯುವ ಪ್ರಯತ್ನಿಸಿದ್ದರು. ಆದರೆ ಅದುವೇ ಮುಂದೆ ಚಟವಾಗಿ ಬೆಳೆಯಿತು ಎಂದು ಆಂಡ್ರಿಯಾ ಹೆವಿಟ್ ಹೇಳಿದ್ದಾರೆ.

ಇದರ ನಡುವೆ ಅವರು ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದರು. ವಿವಾಹವಾಗಬೇಕಿದ್ದರೆ ನೀವು ಮದ್ಯಪಾನವನ್ನು ತ್ಯಜಿಸಬೇಕು ಎಂದು ಸ್ಪಷ್ಟವಾಗಿ ಹೇಳಿದ್ದೆ. ಅದಕ್ಕೆ ಅವರು ಸಹ ಒಪ್ಪಿಕೊಂಡರು. 2006 ರಲ್ಲಿ ನಾವಿಬ್ಬರು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟೆವು.

ಅಷ್ಟರಲ್ಲಾಗಲೇ ವಿನೋದ್ ಕಾಂಬ್ಳಿಯ ಅವರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಕಾಂಬ್ಳಿ ಅವರು ಮದುವೆಗೂ ಮುನ್ನ ಕೆಲ ಮಹಿಳೆಯೊಂದಿಗೆ ಸುತ್ತಾಡುತ್ತಿದ್ದರು. ಇದರ ಜೊತೆ ಆಲ್ಕೋಹಾಲ್ ಚಟ ಕೂಡ ಇತ್ತಲ್ಲವೇ. ಹೀಗಾಗಿ ಅವರಿಗೆ ಜೀವನದ ಬಗ್ಗೆ ಯಾವುದೇ ಯೋಜನೆಗಳಿರಲಿಲ್ಲ.

ಆದರೆ ಮದುವೆಯ ಬಳಿಕ ನಾನು ಎಲ್ಲವೂ ಸರಿ ಹೋಗುತ್ತದೆ ಎಂದು ಭಾವಿಸಿದ್ದೆ. 2010 ರಲ್ಲಿ ಮೊದಲ ಮಗು ಜನಿಸಿದಾಗ, ಕಾಂಬ್ಳಿ ಆರ್ಥಿಕ ಸಮಸ್ಯೆಗಳಿಂದ ತುಂಬಾ ಆತಂಕಕ್ಕೊಳಗಾದರು. ಹೀಗಾಗಿ ನಾನು ಕುಟುಂಬದ ಜವಾಬ್ದಾರಿವಹಿಸಿಕೊಳ್ಳಲು ಸಿದ್ಧಳಾದೆ ಎಂದು ಆಂಡ್ರಿಯಾ ಹೇಳಿದ್ದಾರೆ.

ನಾನು ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದೆ. ಆ ಬಳಿಕ ಕಾಂಬ್ಳಿ ಸ್ಥಿತಿ ಸುಧಾರಿಸತೊಡಗಿತು. ಅಲ್ಲದೆ ಮದ್ಯವನ್ನು ತ್ಯಜಿಸಲು ನಾನು ಅವರನ್ನು ಪ್ರೋತ್ಸಾಹಿಸಿದೆ. ಇದಾದ 6 ವರ್ಷಗಳ ವಿನೋದ್ ಕಾಂಬ್ಳಿ ಮದ್ಯಪಾನ ಮಾಡಿರಲಿಲ್ಲ. ಆದರೆ ಸಿಗರೇಟ್ ಸೇದುತ್ತಿದ್ದರು. ಕುಡಿತವನ್ನು ಬಿಟ್ಟಿದ್ದರಿಂದ ಆರೋಗ್ಯದಲ್ಲೂ ಸುಧಾರಣೆ ಕಂಡು ಬಂತು. ಆದರೆ ಕಾಲಾನಂತರದಲ್ಲಿ ಮತ್ತೆ ಮದ್ಯದ ಚಟಕ್ಕೆ ಮರುಳಾದರು.

2014 ರಲ್ಲಿ ತಮ್ಮ ಮಗಳು ಹುಟ್ಟಿದ ನಂತರ, ವಿನೋದ್ ಕಾಂಬ್ಳಿ ಅವರನ್ನು ಮದ್ಯ ಚಟ ಬಿಡಿಸುವ ಪುನರ್ವಸತಿಗೆ ಕಳುಹಿಸಲಾಯಿತು. ಇಲ್ಲಿಯವರೆಗೆ ಅವರು 6-7 ಬಾರಿ ಅವರು ರಿಹ್ಯಾಬ್​ಗೆ ಒಳಗಾಗಿದ್ದಾರೆ. ಆದರೆ ಕೋವಿಡ್-19 ಸಮಯದಲ್ಲಿ ಎಲ್ಲವೂ ಮುಚ್ಚಿದ್ದರಿಂದ ನಮ್ಮ ಯೋಜನೆಗಳೆಲ್ಲವೂ ಹದಗೆಟ್ಟಿತು. ಅಲ್ಲದೆ ವಿನೋದ್ ಕಾಂಬ್ಳಿ ಅವರ ಆರೋಗ್ಯದಲ್ಲೂ ಸಮಸ್ಯೆಗಳು ಕಂಡು ಬರಲಾರಂಭಿಸಿತು ಆ್ಯಂಡ್ರಿಯಾ ತಿಳಿಸಿದರು.

2023 ರಲ್ಲಿ, ವಿನೋದ್ ಕಾಂಬ್ಳಿ ಅವರು ಮಾನಸಿಕ ಸಮಸ್ಯೆಗೆ ಒಳಗಾದರು. ಹೀಗಾಗಿ ಮನೋವೈದ್ಯರಿಂದ ಚಿಕಿತ್ಸೆ ಪಡೆಯಲಾಯಿತು. ಆದರೆ ಇದಾಗ್ಯೂ ಅವರು ಕುಡಿತವನ್ನು ಬಿಡುವ ಸ್ಥಿತಿಯಲ್ಲಿರಲಿಲ್ಲ. ಇದು ಅವರ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ಎಂದು ಆಂಡ್ರಿಯಾ ಹೇಳಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow