ಶತಕದ ಸಿಡಿಸಿದ ರೋಹಿತ್ ಶರ್ಮಾ: 2027ರ ವಿಶ್ವಕಪ್ ಕುರಿತ ಅನುಮಾನಕ್ಕೆ ಬ್ಯಾಟ್'ನಿಂದಲೇ ಉತ್ತರ
2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವೇಳೆಗೆ ರೋಹಿತ್ ಶರ್ಮಾ ವಯಸ್ಸು 40 ದಾಟುವುದರಿಂದ ಅವರು ತಂಡದಲ್ಲಿ ಇರಲಾರರು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಹಿಟ್‌ಮ್ಯಾನ್ ರೋಹಿತ್ ತಮ್ಮ ಬ್ಯಾಟ್‌ನಿಂದಲೇ ಆ ಮಾತುಗಳಿಗೆ ಸಮರ್ಪಕ ಉತ್ತರ ನೀಡಿದ್ದಾರೆ.
ಅಮೋಘ ಶತಕದಿಂದ ರೋಹಿತ್ ಮಿಂಚು
7 ತಿಂಗಳ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೇವಲ 105 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಶತಕ ಪೂರೈಸಿದರು.
33ನೇ ಏಕದಿನ ಶತಕ – ವರ್ಷದಲ್ಲೇ ಎರಡನೇ ಶತಕ
ಇದು ರೋಹಿತ್ ಶರ್ಮಾ ಅವರ ಏಕದಿನ ವೃತ್ತಿಜೀವನದ 33ನೇ ಶತಕವಾಗಿದ್ದು, ಈ ವರ್ಷದಲ್ಲಿ ಅವರ ಎರಡನೇ ಶತಕವಾಗಿದೆ. ಇದರ ಮೊದಲು ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದರು.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕಗಳ ಸಾಧನೆ
ಈ ಶತಕದೊಂದಿಗೆ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕ ಪೂರೈಸಿದ್ದಾರೆ — ಅಂದರೆ ಒಟ್ಟು 50 ಶತಕಗಳು!
2027 ವಿಶ್ವಕಪ್‌ಗೆ ಬಲವಾದ ಸಂದೇಶ
ಈ ಪ್ರದರ್ಶನದ ಮೂಲಕ ರೋಹಿತ್ ಶರ್ಮಾ ತಮ್ಮ ಫಾರ್ಮ್ ಮತ್ತು ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, 2027 ವಿಶ್ವಕಪ್ ತಂಡದ ಆಯ್ಕೆಗೆ ತಮ್ಮ ಹೆಸರನ್ನು ಗಂಭೀರ ಸ್ಪರ್ಧೆಯಲ್ಲಿಟ್ಟಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?