ಶಿಶುವಿನ ಬಾಯಿಗೆ ಗಮ್ ಹಾಕಿ, ಕಲ್ಲು ತುಂಬಿ ಕಾಡಿನಲ್ಲಿ ಎಸೆದು ಹೋದ ಪಾಪಿಗಳು!

ಸೆಪ್ಟೆಂಬರ್ 29, 2025 - 21:59
 0  10
ಶಿಶುವಿನ ಬಾಯಿಗೆ ಗಮ್ ಹಾಕಿ, ಕಲ್ಲು ತುಂಬಿ ಕಾಡಿನಲ್ಲಿ ಎಸೆದು ಹೋದ ಪಾಪಿಗಳು!

ರಾಜಸ್ಥಾನ: ಹೃದಯವಿದ್ರಾವಕ ಘಟನೆ ರಾಜಸ್ಥಾನದ ಭಿಲ್ವಾರದಲ್ಲಿ ವರದಿಯಾಗಿದೆ. ಕೇವಲ 15 ದಿನಗಳ ಶಿಶುವಿನ ತುಟಿಗಳಿಗೆ ಗಮ್ ಅಂಟಿಸಿ, ಅಳಲು ಆಗದಂತೆ ಬಾಯಿಗೆ ಕಲ್ಲುಗಳನ್ನು ತುಂಬಿ, ಅಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ದನ ಕಾಯುವವರೊಬ್ಬರು ಕಾಡಿನಲ್ಲಿ ಮಗುವನ್ನು ಕಂಡು, ಅದರ ಬಾಯಿಯಿಂದ ಕಲ್ಲುಗಳನ್ನು ಎಳೆದಿದ್ದಾರೆ. ಮಗು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದೆ. ಘಟನೆ ಮಂಡಲಗಢ ವಿಧಾನಸಭಾ ಕ್ಷೇತ್ರದ ಬಿಜೋಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ,

ಸೀತಾ ಕುಂಡ್ ದೇವಾಲಯದ ಮುಂಭಾಗದ ರಸ್ತೆಯ ಪಕ್ಕದ ಕಾಡಿನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಗುವಿನ ಪೋಷಕರ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ. ಹತ್ತಿರದ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ನಡೆದ ಹೆರಿಗೆಗಳ ವಿವರವನ್ನು ಪರಿಶೀಲಿಸುತ್ತಿದ್ದು, ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ವಿಚಾರಣೆ ಮುಂದುವರಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow