ಶೆಡ್​ನಲ್ಲಿ ರೇಣುಕಾಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ವೈರಲ್; ಕರುಳು ಚುರಕ್ ಎನ್ನುತ್ತೆ

ಸೆಪ್ಟೆಂಬರ್ 5, 2024 - 10:42
 0  14
ಶೆಡ್​ನಲ್ಲಿ ರೇಣುಕಾಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ವೈರಲ್; ಕರುಳು ಚುರಕ್ ಎನ್ನುತ್ತೆ
FOCUS KARNATAKA Darshan Thugodeepa

ಶೆಡ್​ನಲ್ಲಿ ರೇಣುಕಾಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ವೈರಲ್; ಕರುಳು ಚುರಕ್ ಎನ್ನುತ್ತೆ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಸೇರಿ ಅನೇಕರ ವಿರುದ್ಧ ಪ್ರಬಲ ಸಾಕ್ಷಿಗಳು ಸಿಕ್ಕಿದ್ದು, ದೋಷಾರೋಪ ಪಟ್ಟಿಯಲ್ಲಿ ವಿವರಣೆ ನೀಡಲಾಗಿದೆ. ಈ ಮಧ್ಯೆ ರೇಣುಕಾ ಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಈ ಫೋಟೋ ನೋಡಿದವರ ಕರುಳು ಚುರಕ್ ಎಂದಿದೆ. ಪಟ್ಟಣಗೆರೆ ಶೆಡ್​ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.

ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆಯಲ್ಲಿರುವ ಶೆಡ್​ಗೆ ಕರೆದುಕೊಂಡು ಹೋಗಲಾಗಿತ್ತು. ಇದೆಲ್ಲ ಪ್ಲ್ಯಾನ್ ಮಾಡಿದ್ದು ದರ್ಶನ್ ಎನ್ನುವ ಆರೋಪ ಇದೆ. ದರ್ಶನ್ ಹಾಗೂ ಗ್ಯಾಂಗ್ ಮೇಲೆ ಈಗ ಕೊಲೆ ಆರೋಪ ಬಂದಿದೆ. ರೇಣುಕಾ ಸ್ವಾಮಿಗೆ ಸಾಕಷ್ಟು ಟಾರ್ಚರ್ ನೀಡಲಾಗಿತ್ತು. ಈ ಟಾರ್ಚರ್​ನಿಂದಲೇ ಅವರು ಮೃತಪಟ್ಟಿದ್ದರು. ಈಗ ಅವರು ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ನೋಡಿ ಅನೇಕರಿಗೆ ದುಃಖ ಆಗಿದೆ.

ರೇಣುಕಾ ಸ್ವಾಮಿ ಅವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಈ ಕಾರಣಕ್ಕೆ ದರ್ಶನ್ ಸಿಟ್ಟಾಗಿದ್ದರು. ಉಗುರಲ್ಲಿ ಹೋಗೋದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ, ದರ್ಶನ್ ಅವರು ಈ ವಿಚಾರವನ್ನು ಕಾನೂನಾತ್ಮಕವಾಗಿಯೂ ಬಗೆಹರಿಸಬಹುದಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ. ಇದರಿಂದ ಅವರಿಗೆ ಸಂಕಷ್ಟ ಆಗಿದೆ.

ರೇಣುಕಾ ಸ್ವಾಮಿ ಅಂಗಲಾಚುತ್ತಿರುವ ಫೋಟೋ ಮಾತ್ರವಲ್ಲದೆ ಅವರು ಶವವಾಗಿ ಬಿದ್ದ ಫೋಟೋಗಳು ಸಿಕ್ಕಿವೆ. ಆರೋಪಿಗಳ ಮೊಬೈಲ್​ನಲ್ಲಿ ಇದನ್ನು ಸೆರೆಹಿಡಿದುಕೊಳ್ಳಲಾಗಿತ್ತು. ಆ ಬಳಿಕ ಇದನ್ನು ಡಿಲೀಟ್ ಮಾಡಿದ್ದರು. ಈಗ ಈ ಫೋಟೋಗಳನ್ನು ರಿಟ್ರೀವ್ ಮಾಡಲಾಗಿದೆ. ಚಾರ್ಜ್​ಶೀಟ್​​ನಲ್ಲಿ ಈ ಫೋಟೋಗಳನ್ನು ಲಗತ್ತಿಸಲಾಗಿದೆ. ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಆಗುವ ಸಾಧ್ಯತೆ ಇದೆ.

ರೇಣುಕಾ ಸ್ವಾಮಿ ಕೊಲೆ ಕೇಸ್ ವಿಚಾರಣೆಯನ್ನು ವಿಶೇಷ ಕೋರ್ಟ್​ಗೆ ನೀಡುವಂತೆ ಮನವಿ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸರ್ಕಾರದ ಮುಂದೆ ಈ ಬೇಡಿಕೆಯನ್ನು ಇಡಲಾಗುತ್ತಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow