"ಡೆವಿಲ್" ಸಿನಿಮಾಗೆ ಖಂಡಿತಾ ಒಳ್ಳೆದಾಗಲಿ: ನಟ ದರ್ಶನ್ ಸಿನಿಮಾಗೆ ಕಿಚ್ಚನ ಹಾರೈಕೆ!

ಸೆಪ್ಟೆಂಬರ್ 1, 2025 - 16:10
 0  15
"ಡೆವಿಲ್" ಸಿನಿಮಾಗೆ ಖಂಡಿತಾ ಒಳ್ಳೆದಾಗಲಿ: ನಟ ದರ್ಶನ್ ಸಿನಿಮಾಗೆ ಕಿಚ್ಚನ ಹಾರೈಕೆ!

ದರ್ಶನ್ ಅಭಿನಯದ ಡೆವಿಲ್ ಸಿನಿಮಾಗೆ ಖಂಡಿತಾ ಒಳ್ಳೆದಾಗಲಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಸೆ.2ರಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಟ ದರ್ಶನ್‌ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಫ್ಯಾಮಿಲಿ, ಅವರ ಕುಟುಂಬಕ್ಕೆ ಅವರದ್ದೆ ಅದ ನೋವಿದೆ. 

ಸರ್ಕಾರ ಕಾನೂನು ಇದರ ಬಗ್ಗೆ ಮಾತನಾಡಬಾರದು ಎಂದಿದ್ದಾರೆ. ಇನ್ನೂ ದರ್ಶನ್ ಅಭಿನಯದ ಡೆವಿಲ್ ಸಿನಿಮಾಗೆ ಖಂಡಿತಾ ಒಳ್ಳೆದಾಗಲಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಸುದೀಪ್ ಅವರಲ್ಲಿ ಪೌರಾಣಿಕ ಸಿನಿಮಾಗಳನ್ನು ಮಾಡುತ್ತೀರಾ ಎಂದು ಕೇಳಿದಾಗ ಉತ್ತರಿಸಿದ ನಟ, ನಾನು ಪೌರಾಣಿಕ ಸಿನಿಮಾದಲ್ಲಿ ನಟಿಸೋದಿಲ್ಲ. ನಾನು ಪೌರಾಣಿಕ ಸಿನಿಮಾ ಮಾಡದೆ ಇರೋಕೆ‌ ಕಾರಣ ಕುದುರೆ ಎಂದಿದ್ದಾರೆ.

 ನಾನು ಕುದುರೆ ಹತ್ತೋಕೆ ಹೋಗಲ್ಲ. ನಾನು ಹಾರ್ಸ್ ರೈಡಿಂಗ್ ಪ್ರಾಕ್ಟೀಸ್ ಮಾಡಿದ್ದೆ. ಕುದುರೆ ಒಂದು ಸಲ ಓಡಿ ಹೋಗಿತ್ತು. ಅಲ್ಲದೆ ನಾನು ಒಂದು ಸಲ ದರ್ಶನ್ ತೋಟಕ್ಕೆ ಹೋಗಿದ್ದೆ. ದರ್ಶನ್ ಅವನ ಕುದುರೆ ರೈಡ್ ಮಾಡು ಅಂತ ಹೇಳಿದ್ದ. ನಾನು‌ ನೀನು ಬೇಡ ನಿನ್ನ ಕುದುರೆನು ಬೇಡ ಎಂದು ಹೇಳಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow