ಸದ್ದಿಲ್ಲದೆ ಮದುವೆಗೆ ರೆಡಿಯಾದ ಕಾಮಿಡಿ ಸ್ಟಾರ್ ಚಿಕ್ಕಣ್ಣ! ಹುಡುಗಿ ಇವರೇ ನೋಡಿ..

ಸೆಪ್ಟೆಂಬರ್ 1, 2025 - 20:18
 0  13
ಸದ್ದಿಲ್ಲದೆ ಮದುವೆಗೆ ರೆಡಿಯಾದ ಕಾಮಿಡಿ ಸ್ಟಾರ್ ಚಿಕ್ಕಣ್ಣ! ಹುಡುಗಿ ಇವರೇ ನೋಡಿ..

ಹಲವಾರು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಮಿಂಚಿದ್ದ ಚಿಕ್ಕಣ್ಣ ಇದೀಗ ಕೊನೆಗೂ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮಂಡ್ಯದ ಹುಡುಗಿ ಜೊತೆ ನಟ ಚಿಕ್ಕಣ್ಣ ಸೈಲೆಂಟಾಗಿ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ. ಹೌದು ಚಿಕ್ಕಣ್ಣ ಅವರು ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯನ್ನು ವಿವಾಹವಾಗುತ್ತಿದ್ದಾರೆ.

ಮನೆಯವರು ನೋಡಿರುವ ಸಂಬಂಧ ಇದು ಎನ್ನಲಾಗಿದೆ. ಚಿಕ್ಕಣ್ಣ ಅವರ ಮದುವೆ ನಿಶ್ಚಯವನ್ನು ಸದ್ದಿಲ್ಲದೆ ಮುಗಿಸಿಕೊಂಡಿದ್ದಾರೆ. ಹೂ ಮುಡಿಸುವ ಶಾಸ್ತ್ರವನ್ನು ಮಾಡಿ ಆಗಿದೆ.

ಮದುವೆಯ ದಿನಾಂಕವೂ ನಿಗದಿ ಆಗಿದೆಯಂತೆ. ಚಿಕ್ಕಣ್ಣ ಮದುವೆ ಆಗುತ್ತಿರುವ ಯುವತಿಯ ಹೆಸರು ಪಾವನಾ. ಮಹದೇವಪುರ ಗ್ರಾಮದ ಯುವತಿ ಈಕೆ. ಇತ್ತೀಚೆಗಷ್ಟೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಚಿಕ್ಕಣ್ಣ ಟಾಕ್ ಶೋಗಳಲ್ಲಿ ಮದುವೆ ವಿಷಯ ಮಾಡಿದಾಗೆಲ್ಲ ತಮಾಷೆ ಮಾಡುತ್ತಾ ಹಾರಿಕೆ ಉತ್ತರ ನೀಡುತ್ತಿದ್ದರು. ಈಗ ಕೊನೆಗೆ ಗೃಹಸ್ಥರಾಗಲು ಸಜ್ಜಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow