ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್.! 10th ಪಾಸಾಗಿದ್ರೆ ಸಾಕು
ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಶುಭ ಸುದ್ದಿ. ಬಿಹಾರ ಸಿಬ್ಬಂದಿ ಆಯ್ಕೆ ಆಯೋಗ (BSSC) ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಅಕ್ಟೋಬರ್ 16ರವರೆಗೆ ವಿಸ್ತರಿಸಿದೆ. ಈ ಹಿಂದೆ ಅಂತಿಮ ದಿನಾಂಕ ಸೆಪ್ಟೆಂಬರ್ 24 ಆಗಿತ್ತು.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 3,727 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ದಿನಾಂಕ ವಿಸ್ತರಣೆ ಕುರಿತ ಅಧಿಸೂಚನೆಯನ್ನು ಆಯೋಗವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಪರಿಶೀಲಿಸಬಹುದು.
ಅರ್ಹತೆ
-
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿರಬೇಕು.
-
ವಯೋಮಿತಿ: 18 ರಿಂದ 37 ವರ್ಷ (ಮೀಸಲು ವರ್ಗಗಳಿಗೆ ಸಡಿಲಿಕೆ ಇದೆ).
-
ಅರ್ಜಿ ಶುಲ್ಕ: ₹100.
ಅರ್ಜಿ ಸಲ್ಲಿಸುವ ವಿಧಾನ
-
BSSC ಅಧಿಕೃತ ವೆಬ್‌ಸೈಟ್ bssc.bihar.gov.in ಗೆ ಭೇಟಿ ನೀಡಿ.
-
“Office Attendant 2025 Notification” ಲಿಂಕ್ ಮೇಲೆ ಕ್ಲಿಕ್ ಮಾಡಿ.
-
Apply Now ಮೇಲೆ ಕ್ಲಿಕ್ ಮಾಡಿ, ನೋಂದಾಯಿಸಿ.
-
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
-
ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
-
ಅಧಿಸೂಚನೆ: ಆಗಸ್ಟ್ 4 ರಂದು ಬಿಡುಗಡೆ.
-
ಅರ್ಜಿ ಪ್ರಕ್ರಿಯೆ: ಆಗಸ್ಟ್ 25 ರಂದು ಆರಂಭ.
-
ವೇತನ: ತಿಂಗಳಿಗೆ ₹18,000 ರಿಂದ ₹56,900.
-
ಪ್ರವೇಶ ಪತ್ರ ಮತ್ತು ಪರೀಕ್ಷಾ ವೇಳಾಪಟ್ಟಿ ನಂತರ ಪ್ರಕಟಿಸಲಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?