ಸಾಕ್ಷ್ಯ ನಾಶಕ್ಕೆ ಮುಂದಾದ್ರಾ Bigg Boss ಮಾಜಿ ಸ್ಪರ್ಧಿಗಳು..!? ರಜತ್, ವಿನಯ್ ಕರೆದೊಯ್ದು ಪೊಲೀಸರಿಂದ ಸ್ಥಳ ಮಹಜರು!

ಮಾರ್ಚ್ 25, 2025 - 17:59
 0  26
ಸಾಕ್ಷ್ಯ ನಾಶಕ್ಕೆ ಮುಂದಾದ್ರಾ Bigg Boss ಮಾಜಿ ಸ್ಪರ್ಧಿಗಳು..!? ರಜತ್, ವಿನಯ್ ಕರೆದೊಯ್ದು ಪೊಲೀಸರಿಂದ ಸ್ಥಳ ಮಹಜರು!

ಬೆಂಗಳೂರು: ಕನ್ನಡ ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ರಜತ್  ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಪೊಲೀಸರ ವಶಕ್ಕೆ ಪಡೆಯಲಾಗಿದ್ದು, ರಜತ್ ಹಾಗೂ ವಿನಯ್ ಬಸವೇಶ್ವರ ನಗರ ಪೊಲೀಸರ ವಶದಲ್ಲಿದ್ದಾರೆ.

ಕೆಲವು ಅನುಮಾನಗಳ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಪೊಲೀಸರ ಸೂಚನೆಯ ಮೇರೆಗೆ ರಜತ್ ಹಾಗೂ ವಿನಯ್ ಇಬ್ಬರು ಒಂದೇ ಕಾರಿನಲ್ಲಿ ಬಸವೇಶ್ವರನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.

ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆದಿದ್ದು, ಸೀಜ್ ಮಾಡಿರೋ ವೆಪನ್‌ ಬಗ್ಗೆ ಪೊಲೀಸರು ರಜತ್ ಹಾಗೂ ವಿನಯ್‌ಗೆ ಫುಲ್‌ ಡ್ರಿಲ್ ಮಾಡಿದ್ದಾರೆ. ನಿನ್ನೆ ನಡೆದ ವಿಚಾರಣೆ ವೇಳೆ ರೀಲ್ಸ್‌ ಮಾಡಿದ ವಿಡಿಯೋದಲ್ಲಿ ಫೈಬರ್ ಲಾಂಗ್ ಬಳಸಿದ್ದಾಗಿ ಹೇಳಿಕೆ ನೀಡಿದ್ದರು.

ಜಪ್ತಿ ಮಾಡಿರೋ ಲಾಂಗ್‌ಗೂ ರೀಲ್ಸ್‌ನಲ್ಲಿರೋ ಲಾಂಗ್‌ಗೂ ವ್ಯತ್ಯಾಸ ಕಂಡು ಬಂದಿದೆ. ಪೊಲೀಸ್‌ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ ಅನುಮಾನದ ಮೇಲೆ ಇದೀಗ ತನಿಖೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ವಿನಯ್ ಹಾಗೂ ರಜತ್‌ಗೆ ಪೊಲೀಸರು ಆಯುಧದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿಚಾರಣೆ ವೇಳೆ ರಜತ್ ಅವರು ಅದು ಖಾಸಗಿ ವಾಹಿನಿಯ ಶೋನಲ್ಲಿ ಬಳಸುವ ಸೆಟ್ ಪ್ರಾಪರ್ಟಿ ಎಂದು ಹೇಳಿದ್ದಾರೆ.

ಬಸವೇಶ್ವರ ನಗರದ ಪೊಲೀಸರು ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಅಕ್ಷಯ ಸ್ಟುಡಿಯೋದಲ್ಲಿ ಸ್ಥಳ ಮಹಜರು ನಡೆಸುವಾಗ ಯಾವ ಜಾಗದಲ್ಲಿ ವಿಡಿಯೋ ಮಾಡಿದ್ದು? ನಿಮಗೆ ಮಚ್ಚು ಕೊಟ್ಟೋರು ಯಾರು? ಅನ್ನೋದನ್ನು ವಿನಯ್ ಮತ್ತು ರಜತ್‌ರಿಂದ ಕೇಳಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ, ಮಹಜರಿನ ದೃಶ್ಯವನ್ನು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಮಹಜರಿನ ಬಳಿಕ ರೀಲ್ಸ್‌ಗೆ ಬಳಸಿದ್ದ ಲಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಬಳಿಕ ಕೋರ್ಟ್‌ಗೆ ಇಬ್ಬರನ್ನೂ ಹಾಜರು ಪಡಿಸಲಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow