ಸ್ಪೋರ್ಟ್ಸ್​​ ಇಲಾಖೆಯಲ್ಲಿ ಭರ್ಜರಿ ಉದ್ಯೋಗ: ಆಯ್ಕೆಯಾದವರಿಗೆ ಸಿಗುವ ಸಂಬಳ ಎಷ್ಟು!?

ಜನವರಿ 15, 2025 - 08:59
 0  6
ಸ್ಪೋರ್ಟ್ಸ್​​ ಇಲಾಖೆಯಲ್ಲಿ ಭರ್ಜರಿ ಉದ್ಯೋಗ: ಆಯ್ಕೆಯಾದವರಿಗೆ ಸಿಗುವ ಸಂಬಳ ಎಷ್ಟು!?

ಕೆಲಸ ಇಲ್ಲದೆ ಖಾಲಿ ಇರುವ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಸ್ಪೋರ್ಟ್ಸ್​​ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೆಲಸಗಳಿಗೆ ನಿಮ್ಮ ಹೆಸರು ಅಂತಿಮವಾದರೆ, ಸಂಬಳ 1 ಲಕ್ಷ ರೂಪಾಯಿಗಿಂತ ಅಧಿಕವಿರುತ್ತದೆ. 

ಎಸ್​ಎಐ ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಹೆಚ್ಚಿನ ಕಾರ್ಯಕ್ಷಮತೆಯ ನಿರ್ದೇಶಕ  ಹಾಗೂ ಕಂಡೀಷನಿಂಗ್ ಎಕ್ಸ್‌ಪರ್ಟ್ ಹುದ್ದೆಗಳನ್ನು ಆಹ್ವಾನ ಮಾಡಲಾಗಿದೆ.

ಈ ಸಂಬಂಧ ಅರ್ಹ ಹಾಗೂ ಆಸಕ್ತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.  ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳ ಹೆಸರನ್ನು ಮೊದಲು ಶಾರ್ಟ್​ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಅಧಿಕೃತವಾಗಿ ನೋಟಿಫಿಕೆಶನ್ ಮೂಲಕ ಆಯ್ಕೆ ಆದ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಸಂದರ್ಶನದಲ್ಲಿ ನೀಡುವ ಪರ್ಫಾಮೆನ್ಸ್ ಆಧಾರದ ಮೇಲೆ ಈ ಹುದ್ದೆ ನೀಡಲಾಗುತ್ತದೆ. ಈ ಕೆಲಸಗಳು ಒಟ್ಟು ಎರಡು ಇದ್ದು ಉದ್ಯೋಗಕ್ಕೆ ಆಯ್ಕೆ ಆದವರನ್ನು ಬೆಂಗಳೂರು, ದೆಹಲಿ ಹಾಗೂ ಕೋಲ್ಕತ್ತದಲ್ಲಿ ನೇಮಕ ಮಾಡಲಾಗುತ್ತದೆ.

ಉದ್ಯೋಗಾಂಕ್ಷಿಗಳಿಗೆ ಕನಿಷ್ಠ 45 ರಿಂದ ಗರಿಷ್ಠ 65 ವರ್ಷಗಳ ಒಳಗೆ ಇರಬೇಕು. ಎಂಎಸ್​ಐ, ಪಿಹೆಚ್​ಡಿ ಹಾಗೂ ಎಂಬಿಎ ಮಾಡಿ 10 ವರ್ಷಗಳ ಅನುಭವವನ್ನು ಹೊಂದಿರಬೇಕು. ಸಂದರ್ಶನದಲ್ಲಿ ಉದ್ಯೋಗಕ್ಕೆ ಆಯ್ಕೆ ಆಗುವ ಅಭ್ಯರ್ಥಿಗೆ ತಿಂಗಳಿಗೆ 80,000 ದಿಂದ 15,0000 ರೂಪಾಯಿ ಸಂಬಳ ನೀಡಲಾಗುತ್ತದೆ.

ಉದ್ಯೋಗಾರ್ಥಿಗಳು ಈ ಕೆಲಸಗಳಿಗೆ ಸಂಬಂಧಿಸಿದ ಅರ್ಜಿಯನ್ನು ಇಲಾಖೆಯ ಅಧಿಕೃತ ವೆಬ್​​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬೇಕಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow