ಹರಾಜಿನಲ್ಲಿ RCB ಮಾಡಿದ್ದು ಸರೀನಾ!? ಕೊಹ್ಲಿ ಶಿಶ್ಯನ ಖರೀದಿಗೆ ಮುಂದಾಗದಿರಲು ಕಾರಣ ಏನು!?

IPL ಮೆಗಾ ಹರಾಜಿನಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಬಿಮಾನಿಗಳ ಲೆಕ್ಕಾಚಾರ ತಲೆ ಕೆಡುವಂತೆ ಮಾಡಿದೆ. ಇಂತವರನ್ನೇ ಖರೀದಿಸುತ್ತಾರೆ ಎಂದು ಲೆಕ್ಕಾಚಾರ ಹಾಕಿದ್ದ ಫ್ಯಾನ್ಸ್ ಗೆ ಬಿಗ್ ಶಾಕ್ ಎದುರಾಗಿದೆ.
ಮುಂದಿನ ಸೀಸನ್ನಲ್ಲಿ ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್ಸಿಬಿ ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ.
ಇದಕ್ಕೂ ಮುನ್ನ ಆರ್ಸಿಬಿ ರಜತ್ ಪಟಿದಾರ್, ವಿರಾಟ್ ಕೊಹ್ಲಿ, ಯಶ್ ದಯಾಳ್ ಅವರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ ಒಟ್ಟು 19 ಆಟಗಾರ ಖರೀದಿ ಮಾಡಿದ್ದು, ಈಗ ಆರ್ಸಿಬಿ 22 ಸದಸ್ಯರ ಬಲಿಷ್ಠ ತಂಡವಾಗಿದೆ. ಆದರೆ, ಆರ್ಸಿಬಿ ತಂಡದಿಂದ ಯುವ ಆಟಗಾರನಿಗೆ ಕೊಕ್ ನೀಡಲಾಗಿದೆ.
ಆ ಪ್ಲೇಯರ್ ಮತ್ಯಾರು ಅಲ್ಲ, ಸುಯಾಶ್ ಪ್ರಭುದೇಸಾಯಿ. ಇವರನ್ನು ಹರಾಜಿನಲ್ಲೂ ಆರ್ಸಿಬಿ ಬಿಡ್ ಮಾಡಲಿಲ್ಲ.
ಆರ್ಸಿಬಿ ತಂಡದ ಯುವ ಬ್ಯಾಟರ್ ಸುಯಾಶ್ ಪ್ರಭುದೇಸಾಯಿ. ಎರಡು ಸೀಸನ್ಗಳ ಹಿಂದೆ 2023ರ ಐಪಿಎಲ್ನಲ್ಲಿ ಆರಂಭದಲ್ಲಿ ಆರ್ಸಿಬಿ ಪರ ಕಮಾಲ್ ಮಾಡಿದ್ದ ಈತ ನಂತರ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಲಿಲ್ಲ. 2023ರ ಐಪಿಎಲ್ನಲ್ಲಿ ಆರ್ಸಿಬಿ ಪರ 5 ಪಂದ್ಯ ಆಡಿದ್ದ ಸುಯಾಶ್ ಪ್ರಭುದೇಸಾಯಿ ಗಳಿಸಿದ್ದು ಕೇವಲ 35 ರನ್. ಅದರಲ್ಲೂ ಕೇವಲ 2 ಸಿಕ್ಸರ್ ಮತ್ತು 1 ಫೋರ್ ಬಾರಿಸಿದ್ದ. ಇದರ ಪರಿಣಾಮ 2024ರ ಐಪಿಎಲ್ನಲ್ಲಿ ಹೆಚ್ಚು ಪಂದ್ಯಗಳಲ್ಲಿ ಅವಕಾಶ ಸಿಗಲಿಲ್ಲ. ಆಡಿದ ಒಂದು ಪಂದ್ಯದಲ್ಲಿ ಕೇವಲ 24 ರನ್ ಗಳಿಸಿದ್ದ. ಅದು ಅಷ್ಟು ಇಂಪ್ಯಾಕ್ಟ್ ಇನ್ನಿಂಗ್ಸ್ ಆಗಿರಲಿಲ್ಲ
ಒಟ್ಟಾರೆ RCB ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಆಟಗಾರರನ್ನೇ ಕೈ ಬಿಟ್ಟಿದೆ.
ನಿಮ್ಮ ಪ್ರತಿಕ್ರಿಯೆ ಏನು?






