ಹಾಸನದಲ್ಲಿ ಒಂದೇ ದಿನ ಮೂವರು ಹೃದಯಾಘಾತಕ್ಕೆ ಬಲಿ..! ಜನರಿಗೆ ಹೆಚ್ಚಿದ ಆತಂಕ

ಹಾಸನ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಮೂರೂ ಜನರು ಹೃದಯಾಘಾತದಿಂದ ಮೃತಪಟ್ಟ ಘಟನೆ ಆತಂಕ ಮೂಡಿಸಿದೆ. ವಿವಿಧ ವಯೋಮಾನದವರಾಗಿರುವ ಈ ದುರ್ಘಟನೆಗಳು ಸ್ಥಳೀಯರಲ್ಲೂ ಆತಂಕ ಹುಟ್ಟಿಸುತ್ತಿವೆ.
ತೀವ್ರ ಒತ್ತಡ,Changing lifestyle ಮತ್ತು ಆರೋಗ್ಯ ವಿಚಾರಗಳ ಕಡೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಡಿಮೆ ವಯಸ್ಸಿನಲ್ಲೇ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿರುವುದು ತೀವ್ರ ಚಿಂತೆಯ ವಿಷಯವಾಗಿದೆ. ತಜ್ಞರು ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಲು ಜನತೆಗೆ ಕರೆ ನೀಡುತ್ತಿದ್ದಾರೆ.
ಹೌದು ಒಂದೇ ದಿನ ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ, ಕಳೆದ 40 ದಿನಗಳಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಲೋಹಿತ್ (38) ಹೃದಯಾಘಾತದಿಂದ ಅಸುನೀಗಿದ್ದಾರೆ. ಬೇಲೂರಿನ ಜೆಪಿ. ಲೇಪಾಕ್ಷಿ (50) ಹಾಗೂ ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಮುತ್ತಯ್ಯ (58) ಕೂಡ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಲೋಹಿತ್ ಕಳೆದ 18 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಜೆಯಲ್ಲಿ ಊರಿಗೆ ಬಂದಿದ್ದ ಅವರು, ಜುಲೈ 3ರಂದು ರಜೆ ಮುಗಿಸಿ ಕರ್ತವ್ಯಕ್ಕೆ ಮರಳುವವರಿದ್ದರು. ದುರದೃಷ್ಟವಶಾತ್, ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






