ಹೃದಯ ತೆಗೆಯಬೇಕು ಅನುವಷ್ಟರಲ್ಲಿ ಎದ್ದು ಕುಳಿತ ಬ್ರೈನ್‌ಡೆಡ್ ವ್ಯಕ್ತಿ: ಅಚ್ಚರಿಗೊಂಡ ವೈದ್ಯರು!

ಅಮೆರಿಕ:- ಹೃದಯ ತೆಗೆಯಬೇಕು ಅನುವಷ್ಟರಲ್ಲಿ ಬ್ರೈನ್‌ಡೆಡ್ ಆಗಿರುವ ವ್ಯಕ್ತಿ ಎದ್ದು ಕುಳಿತಿದ್ದು, ಈ ಒಂದು ಘಟನೆ ಒಂದು ಕ್ಷಣ ವೈದ್ಯರನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆ 2021 ರಲ್ಲಿ ನಡೆದಿದ್ದರೂ, ಇದೀಗ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಅಮೇರಿಕಾದ ಕೆಂಟುಕಿಯ ಥಾಮಸ್ ಎಂಬ 36 ವರ್ಷದ ವ್ಯಕ್ತಿ, ಮಾದಕವಸ್ತುವಿನ ಮಿತಿಮೀರಿದ ಸೇವನೆಯಿಂದಾಗಿ ಆತನ ಬ್ರೈನ್‌ಡೆಡ್ ಆಗಿದೆ ಎಂದು ವೈದ್ಯೆರು ಘೋಷಿಸಿದ್ದರು. ಇನ್ನೇನು 36 ವರ್ಷ ಆಗಿದ್ದರಿಂದ ಆತನ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಅಂದರಂತೆ ವೈದ್ಯಕೀಯ ತಂಡ ಅಂಗಾಂಗ ದಾನದ ಕಾರ್ಯದಲ್ಲಿ ಮುಂದಾಗಿದೆ.
ವೈದ್ಯರ ತಂಡ ಇನ್ನೇನು ದೇಹದಿಂದ ಹೃದಯವನ್ನು ತೆಗೆಯಲು ಪ್ರಯತ್ನಿಸುತ್ತಿರುವ ವೇಳೆ ಇದ್ದಕ್ಕಿದ್ದಂತೆ ಆತ ಎದ್ದು ಕುಳಿತಿದ್ದಾನೆ. ಈ ಪ್ರಕರಣ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






