ಹೊಸವರ್ಷದಂದು ಬ್ಯಾಂಕ್ ಹಾಗೂ ಷೇರು ಮಾರುಕಟ್ಟೆ ಒಪನ್ ಇರುತ್ತಾ!? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ!

2024 ಕಳೆದು 2025 ಕ್ಕೆ ಕಾಲಿಟ್ಟಿದ್ದು, ಜನರು ನೂತನ ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ.
ವರ್ಷದ ಮೊದಲ ದಿನವೇ ಕೆಲವರು ಷೇರು ಮಾರುಕಟ್ಟೆ ವ್ಯವಹಾರ ಹಾಗೂ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಮಾಡಬೇಕೆಂದುಕೊಂಡಿದ್ದಾರೆ. ಹೀಗಾಗಿ ಜನವರಿ 1 ಕ್ಕೆ ಷೇರು ಮಾರುಕಟ್ಟೆ ಹಾಗೂ ಬ್ಯಾಂಕ್ ಗಳಿಗೆ ರಜೆಯಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳುವುದು ಸೂಕ್ತ.
ಜನವರಿ 1 ರಂದು ಷೇರು ಮಾರುಕಟ್ಟೆ ತೆರೆದಿರುತ್ತದೆ. ಈಕ್ವಿಟಿ, ಈಕ್ವಿಟಿ ಡೆರಿವೇಟಿವ್ಸ್ ವಿಭಾಗ ಮತ್ತು ಸೆಕ್ಯುರಿಟೀಸ್ ಲೆಂಡಿಂಗ್ ಹಾಗೂ ಎರವಲು ವಿಭಾಗಗಳಲ್ಲಿ ವಹಿವಾಟು ಎಂದಿನಂತೆ ಇರಲಿದೆ. ಷೇರು ಮಾರುಕಟ್ಟೆಯು ಬೆಳಿಗ್ಗೆ 9:15 ಕ್ಕೆ ತೆರೆಯುತ್ತದೆ ಮತ್ತು ಮಧ್ಯಾಹ್ನ 3:30 ಕ್ಕೆ ಮುಚ್ಚುತ್ತದೆ. ಜನವರಿ 1, 2025 ರಂದು ಷೇರು ಮಾರುಕಟ್ಟೆ ಮುಚ್ಚಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ
ಭಾರತದಲ್ಲಿನ ಬ್ಯಾಂಕುಗಳು ಜನವರಿ 1 ರಂದು ಮುಚ್ಚಿರುತ್ತದೆಯೇ ಇಲ್ಲವೇ ಎನ್ನುವ ಗೊಂದಲ ಅನೇಕರಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 2025 ರ ಅಧಿಕೃತ ಬ್ಯಾಂಕ್ ರಜೆ ವೇಳಾಪಟ್ಟಿ ಪ್ರಕಾರ ಬ್ಯಾಂಕ್ ಗಳಿಗೆ 4 ಭಾನುವಾರ ಮತ್ತು 2 ಶನಿವಾರಗಳನ್ನು ಒಳಗೊಂಡಂತೆ ತಿಂಗಳಾದ್ಯಂತ 15 ರಜಾ ದಿನ ಇರಲಿದೆ.
ಆರ್ಬಿಐ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಮೊದಲ ದಿನ ಜನವರಿ 1 ಬ್ಯಾಂಕ್ ರಜೆ ಇರುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ರಜೆಯಿದ್ದು, ಸ್ಥಳೀಯ ಬ್ಯಾಂಕ್‌ಗಳು ಅವುಗಳ ಕೆಲಸ ಕಾರ್ಯಗಳಿಗೆ ತಕ್ಕಂತೆ ರಜೆ ನೀಡಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






