ಅಕ್ಕನ ಜತೆ ಅನೈತಿಕ ಸಂಬಂಧ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು – ಮುಂದೇ ನಡೆದಿದ್ದೇ ಘೋರ ದುರಂತ!

ಹಾವೇರಿ: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ಅಕ್ಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ತಮ್ಮನೊಬ್ಬ ಕೊಲೆ ಮಾಡಿರುವ ಘಟನೆ ನಡೆದಿದೆ.ಮೃತನನ್ನು ದಿಲೀಪ್ ಹಿತ್ತಲಮನಿ (47) ಎಂದು ಗುರುತಿಸಲಾಗಿದೆ. ದಿಲೀಪ್ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು, ಅಕ್ಕ ಉಮಾ ಜೊತೆ ಬಹು ವರ್ಷಗಳಿಂದ ಪರಿಚಯವಿದ್ದ. ಈ ನಡುವೆಯೇ ಇಬ್ಬರ ನಡುವೆ ಅನೈತಿಕ ಸಂಬಂಧವಿದೆ ಎಂಬ ಶಂಕೆ ಕುಟುಂಬದಲ್ಲಿ ಕಾಡುತ್ತಿತ್ತು.
ಘಟನೆಯ ದಿನ, ದಿಲೀಪ್ ರೆಡ್ ಹ್ಯಾಂಡ್ ಆಗಿ ಅಕ್ಕನ ಜತೆ ಸಿಕ್ಕಿದ ಮೇಲೆ ಉಮಾಳ ತಮ್ಮ ರಾಜಯ್ಯ ಆಕ್ರೋಶದಿಂದ ತಲೆ ಮೇಲೆ ಕಲ್ಲು ಎತ್ತಿ ಹಾಕಿ ದಿಲೀಪ್ನ್ನು ಕೊಂದಿದ್ದಾನೆ. ಬಳಿಕ ನಾನೇ ಕೊಲೆ ಮಾಡಿದ್ದೇನೆ ಎಂದು ರಾಜಯ್ಯ ಪೊಲೀಸ್ ಠಾಣೆಗೆ ತೆರಳಿ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದರೆ ಘಟನೆಯ ಬಗ್ಗೆ ಕುಟುಂಬಸ್ಥರು ಹೇಳುವುದೇ ಬೇರೆ.ನಮ್ಮ ಅಣ್ಣನ ಜೊತೆಗೆ ರಾಜಯ್ಯ ಹಣಕಾಸಿನ ವ್ಯವಹಾರ ಮಾಡಿದ್ದ. ಹಣ ಕೊಡುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಕೊಲೆಯಾಗಿದೆ ಎಂದು ರಾಣೇಬೆನ್ನೂರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






