ಅನನ್ಯ ಭಟ್ ನಾಪತ್ತೆ ಕೇಸ್ʼಗೆ ಬಿಗ್ ಟ್ವಿಸ್ಟ್: ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ್ರಾ ಸುಜಾತ ಭಟ್!?
ಮಂಗಳೂರು: ಧರ್ಮಸ್ಥಳದಲ್ಲಿ ಪುತ್ರಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಸುಜಾತಾ ಭಟ್ ಸಾಕ್ಷ್ಯಕ್ಕಾಗಿ ಬಿಡುಗಡೆ ಮಾಡಿದ ಫೋಟೋ ಸುಳ್ಳು ಎಂದು ಬೆಳಕಿಗೆ ಬಂದಿದೆ. ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನು ಬಿಡುಗಡೆ ಮಾಡಿರಲಿಲ್ಲವಾದ ಸುಜಾತಾ, ಒತ್ತಡ ಹೆಚ್ಚಾದ ಬಳಿಕ ಕೊನೆಗೆ ಒಂದು ಫೋಟೋ ಬಿಡುಗಡೆ ಮಾಡಿದ್ದರು. ಆದರೆ ಈಗ ಬಿಡುಗಡೆಯಾದ ಫೋಟೋ ಮೃತ ಮಹಿಳೆಯದ್ದೇ ಎಂದು ಸ್ಪಷ್ಟವಾಗಿದೆ.
ಶಿವಮೊಗ್ಗದ ರಿಪ್ಪನ್ಪೇಟೆಯಲ್ಲಿ ಪ್ರಭಾಕರ್ ಬಾಳಿಗ ಅವರ ಜೊತೆ ಇದ್ದ ಬಳಿಕ, ಸುಜಾತಾ ಭಟ್ ಬೆಂಗಳೂರಿಗೆ ಬಂದು ಬಿಇಎಲ್ ನಿವೃತ್ತ ಸಿಬ್ಬಂದಿ ರಂಗಪ್ರಸಾದ್ ಅವರೊಂದಿಗೆ ಲಿವ್–ಇನ್ ಸಂಬಂಧದಲ್ಲಿದ್ದರು. ರಂಗಪ್ರಸಾದ್ ಪತ್ನಿ ವಾಸಂತಿ 2007ರಲ್ಲಿ ಮೃತಪಟ್ಟಿದ್ದರು, ಪುತ್ರ ಶ್ರೀವತ್ಸ 2015ರಲ್ಲಿ ಮೃತಪಟ್ಟಿದ್ದರು. ರಂಗಪ್ರಸಾದ್ ಸ್ವತಃ ಈ ವರ್ಷದ ಜನವರಿಯಲ್ಲಿ ನಿಧನರಾದರು. ಈ ಅವಧಿಯಲ್ಲಿ ವಾಸಂತಿ ಅವರ ಫೋಟೋವನ್ನು ಸುಜಾತಾ ಸಂಗ್ರಹಿಸಿಕೊಂಡಿದ್ದರು. ಇದೀಗ ಅದೇ ಫೋಟೋವನ್ನು ತಮ್ಮ ಮಗಳು ಅನನ್ಯಾ ಭಟ್ ಎಂದು ತೋರಿಸಿರುವುದು ಬಹಿರಂಗವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?