ಅಬಕಾರಿ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗ: PUC ಪಾಸಾದವರು ಇಂದೇ ಅರ್ಜಿ ಸಲ್ಲಿಸಬಹುದು!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಬಕಾರಿ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶೀಘ್ರದಲ್ಲೇ ಸಾವಿರಕ್ಕೂ ಹೆಚ್ಚು ಉದ್ಯೋಗಗಳಿಗೆ ಅಬಕಾರಿ ಇಲಾಖೆ ಅರ್ಜಿಗಳನ್ನು ಆಹ್ವಾನ ಮಾಡಲಿದೆ.
ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವಂತ ಅಬಕಾರಿ ಉಪ ನಿರೀಕ್ಷಕರು ಹಾಗೂ ಅಬಕಾರಿ ಪೇದೆಗಳ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ.
ಅಬಕಾರಿ ಇಲಾಖೆಯ ಆಯುಕ್ತರಿಗೆ ಆರ್ಥಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಆದೇಶದ ಪ್ರತಿ ನೀಡುವ ಮೂಲಕ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಇನ್ನು ಎರಡ್ಮೂರು ತಿಂಗಳಲ್ಲಿ ಅಥವಾ ಇದೇ ತಿಂಗಳ ಕೊನೆಯಲ್ಲಿ ಈ ಉದ್ಯೋಗಳಿಗೆ ಅರ್ಜಿ ಕರೆಯಲಾಗುತ್ತದೆ. ಇದಕ್ಕಾಗಿ ಕಾದು ಕುಳಿತಿರುವ ಉದ್ಯೋಗಾಕಾಂಕ್ಷಿಗಳು ದಾಖಲೆ ಸೇರಿದಂತೆ ಹುದ್ದೆಗೆ ಬೇಕಾಗುವುದನ್ನು ಮೊದಲೇ ಸಿದ್ಧ ಪಡಿಸಿಕೊಳ್ಳಬೇಕು
ಅಬಕಾರಿ ಪೇದೆ ಹುದ್ದೆ 942, ಅಬಕಾರಿ ಉಪ ನಿರೀಕ್ಷಕರ 265 ಹುದ್ದೆಗಳನ್ನು ತುಂಬಲಾಗುತ್ತದೆ. ಒಟ್ಟು ಸೇರಿ 1,207 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆ ಆದವರಿಗೆ ಮಾಸಿಕವಾಗಿ ವೇತನ ಶ್ರೇಣಿ ಆರಂಭದಲ್ಲಿ ಅಬಕಾರಿ ಉಪ ನಿರೀಕ್ಷಕರಿಗೆ 30,350 ಹಾಗೂ ಪೇದೆ ಕೆಲಸಕ್ಕೆ 21,400 ರೂಪಾಯಿಗಳನ್ನು ನೀಡಲಾಗುತ್ತದೆ.
ಈ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ ಅಬಕಾರಿ ಉಪ ನಿರೀಕ್ಷಕ ಹುದ್ದೆಗೆ ಪದವಿ ಹಾಗೂ ಪೇದೆ ಕೆಲಸಕ್ಕೆ ದ್ವಿತಿಯ ಪಿಯುಸಿ ಅನ್ನು ನಿಗದಿ ಮಾಡಲಾಗಿದೆ. ಆಯ್ಕೆ ಪ್ರಕ್ರಿಯೆಗೆ ಬಂದರೆ ಪರೀಕ್ಷೆ, ದೈಹಿಕ ಸಾಮರ್ಥ್ಯ, ಮೆಡಿಕಲ್ ಪರೀಕ್ಷೆ ಇರುತ್ತದೆ. ಇನ್ನು ಈ ಉದ್ಯೋಗಗಳ ಹೆಚ್ಚಿನ ಮಾಹಿತಿ ಇಲಾಖೆ ಅಧಿಸೂಚನೆ ರಿಲೀಸ್ ಮಾಡಿದ ಬಳಿಕ ಎಲ್ಲವೂ ತಿಳಿದು ಬರಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






