ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಮುಂದಿನ 2 ವರ್ಷದಲ್ಲಿ ಸೆಮಿಕಂಡಕ್ಟರ್ ಸೆಕ್ಟರ್ನಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ!

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮುಂದಿನ 2 ವರ್ಷದಲ್ಲಿ ಸೆಮಿಕಂಡಕ್ಟರ್ ಸೆಕ್ಟರ್ನಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. ಚಿಪ್ ತಯಾರಿಕೆ, ಚಿಪ್ ಡಿಸೈನ್, ಅಸೆಂಬ್ಲಿಂಗ್, ಟೆಸ್ಟಿಂಗ್, ಮಾರ್ಕಿಂಗ್, ಪ್ಯಾಕೇಜಿಂಗ್, ಪೂರಕ ಸಾಫ್ಟ್ವೇರ್ ಅಭಿವೃದ್ಧಿ, ಸಪ್ಲೈ ಚೈನ್ ಇತ್ಯಾದಿ ವಿಭಾಗಗಳಲ್ಲಿ ಸಾಕಷ್ಟು ಉದ್ಯೋಗಾವಕಾಶ ನಿರ್ಮಾಣವಾಗಲಿದೆ ಎಂದು ಎನ್ಎಲ್ಬಿ ಸರ್ವಿಸಸ್ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಚಿಪ್ ಫ್ಯಾಬ್ರಿಕೇಶನ್ ಘಟಕಗಳಲ್ಲೇ ಇನ್ನೊಂದೆರಡು ವರ್ಷದಲ್ಲಿ ಮೂರು ಲಕ್ಷ ಉದ್ಯೋಗಾವಕಾಶ ಇರಲಿದೆ. ಎಟಿಎಂಪಿ ಸೆಕ್ಟರ್ನಲ್ಲಿ ಎರಡು ಲಕ್ಷ ಉದ್ಯೋಗಗಳು ಸೃಷ್ಟಿಯಾಗಬಹುದು ಎಂದು ಇದು ಅಂದಾಜು ಮಾಡಿದೆ.
ಎಂಜಿನಿಯರ್, ಆಪರೇಟರ್, ಟೆಕ್ನಿಶಿಯನ್ ಇತ್ಯಾದಿ ಕೌಶಲ್ಯವಂತ ಕೆಲಸಗಾರರಿಗೆ ಬೇಡಿಕೆ ಹೆಚ್ಚಲಿದೆ. ಕ್ವಾಲಿಟಿ ಕಂಟ್ರೋಲ್, ಪ್ರೊಕ್ಯೂರ್ಮೆಂಟ್, ಮೆಟೀರಿಯನ್ಸ್ ಎಂಜಿನಿಯರಿಂಗ್ನ ತಜ್ಞರಿಗೆ ಸೆಮಿಕಂಡಕ್ಟರ್ ಉದ್ಯಮ ಮಣೆಹಾಕಲಿದೆ ಎಂದು ಎನ್ಎಲ್ಬಿ ಸರ್ವಿಸಸ್ನ ಅಧ್ಯಯನ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಜಾಗತಿಕವಾಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಸೆಮಿಕಂಡಕ್ಟರ್ ಚಿಪ್ಗಳು ಬಹಳ ಅವಶ್ಯ. ಹೀಗಾಗಿ, ಚಿಪ್ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತವು ಸೆಮಿಕಂಡಕ್ಟರ್ ಉದ್ಯಮಕ್ಕೆ ಪುಷ್ಟಿ ಕೊಡುತ್ತಿದೆ. ಈ ಉದ್ಯಮದಲ್ಲಿ ಸರ್ಕಾರ ಪಿಎಲ್ಐ ಸ್ಕೀಮ್ ತಂದು ಉತ್ತೇಜನ ನೀಡುತ್ತಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ, ಅಸೆಂಬ್ಲಿಂಗ್ ಮತ್ತು ಟೆಸ್ಟಿಂಗ್ ಘಟಕಗಳನ್ನು ನಿರ್ಮಿಸಲು ಹಲವು ಖಾಸಗಿ ಕಂಪನಿಗಳು ಮುಂದೆ ಬಂದಿವೆ. ಒಂದೆರಡು ವರ್ಷದೊಳಗೆ ಹಲವು ಘಟಕಗಳು ಸ್ಥಾಪನೆಯಾಗಬಹುದು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉದ್ಯಮದಲ್ಲಿ ಉದ್ಯೋಗಾವಕಾಶ ಎಷ್ಟಿರಬಹುದು ಎನ್ನುವುದನ್ನು ಈ ವರದಿಯು ಅಂದಾಜು ಮಾಡುವ ಪ್ರಯತ್ನ ಮಾಡಿದೆ
ಪ್ರೋಸಸ್ ಇಂಟಿಗ್ರೇಶನ್ ಎಂಜಿನಿಯರ್, ಸೆಮಿಕಂಡಕ್ಟರ್ ವೇಫರ್ ಇನ್ಸ್ಪೆಕ್ಟರ್, ಟೆಕ್ನಿಕಲ್ ಸ್ಪೆಷಲಿಸ್ಟ್, ಪ್ರಿವೆಂಟಿವ್ ಮೈಂಟೆನೆನ್ಸ್ ಟೆಕ್ನಿಶಿಯನ್, ಡಿಸೈನ್ ಎಂಜಿನಿಯರ್, ಪ್ರೋಸಸ್ ಎಂಜಿನಿಯರ್, ಕ್ವಾಲಿಟಿ ಕಂಟ್ರೋಲ್ ಸ್ಪೆಷಲಿಸ್ಟ್ ಮೊದಲಾದವು ಸೆಮಿಕಂಡಕ್ಟರ್ ಉದ್ಯಮದಲ್ಲಿ ಇರುವ ಪ್ರಮುಖ ಹುದ್ದೆಗಳಾಗಿವೆ.
ನಿಮ್ಮ ಪ್ರತಿಕ್ರಿಯೆ ಏನು?






