ಗಂಡು ಹುಂಜಗಳು ಮುಂಜಾನೆ ಕೂಗೋದ್ಯಾಕೆ!? ಅಚ್ಚರಿ ಮಾಹಿತಿ ತಿಳಿಯಲೇಬೇಕು!?

ನವೆಂಬರ್ 14, 2024 - 07:12
 0  19
ಗಂಡು ಹುಂಜಗಳು ಮುಂಜಾನೆ ಕೂಗೋದ್ಯಾಕೆ!? ಅಚ್ಚರಿ ಮಾಹಿತಿ ತಿಳಿಯಲೇಬೇಕು!?

ಸಾಮಾನ್ಯವಾಗಿ ಬೆಳಗ್ಗೆ ಸಂದರ್ಭ ಅರ್ಥಾತ್ ಸೂರ್ಯದಯದ ವೇಳೆ ಕೋಳಿಗಳು ಕೂಗುತ್ತವೆ ಎಂದುಕೋಂಡಿದ್ದೆವೆ ಆದರೆ ನಿಜವಾಗಿಯು ಕೋಳಿಗಳೆ ಕೂಗುತ್ತವೆ ಇಲ್ಲ ಹುಂಜಗಳ? ಜೊತೆಗೆ ಅವುಗಳು ಬೆಳಗ್ಗೆಯ ಸಂದರ್ಭವೆ ಯಾಕೆ ಕೂಗುತ್ತವೆ ಗೋತ್ತಾ? ಅದಕ್ಕೆ ಇಲ್ಲಿದೆ ಉತ್ತರ. ಕೋಳಿಗಳು ಮತ್ತು ಹುಂಜಗಳು ನಿಜವಾಗಿಯೂ ಮುಂಜಾನೆ ಬೇಗನೆ ಎಚ್ಚರಗೊಳ್ಳುತ್ತವೆ. ಅದು ನಾವು ಅಂದರೆ ಮನುಷ್ಯರು ಬೇಗನೆ ಎದ್ದೇಳಲು ಬಯಸುವುದಕ್ಕಿಂತಲೂ ಮುಂಚೆಯೇ. 

ಕೋಳಿಗಳು ತಮ್ಮಲ್ಲಿ ಜೈವಿಕ ಗಡಿಯಾರವನ್ನು ಹೊಂದಿರುತ್ತವೆ. ಇದನ್ನು ʼಸಿರ್ಕಾಡಿಯನ್ ರಿದಮ್ʼ ಅಂತಾ ಕರೆಯಲಾಗುತ್ತದೆ. ಈ ಗಡಿಯಾರವು ಅದರ ದೇಹವನ್ನು 24 ಗಂಟೆಗಳ ಚಕ್ರದ ಆಧಾರದ ಮೇಲೆ ಕೆಲಸ ಮಾಡಲು ಹೇಳುತ್ತದೆ. ʼಸಿರ್ಕಾಡಿಯನ್​ ರಿದಮ್ʼ​ ಅಂದರೆ ದಿನದ 24 ಗಂಟೆಗಳ ಚಕ್ರದಲ್ಲಿ ಜೀವಿಯು ಅನುಭವಿಸುವ ದೈಹಿಕ, ಮಾನಸಿಕ ಮತ್ತು ನಡವಳಿಕೆಯ ಬದಲಾವಣೆಯಾಗಿದೆ

ಸೂರ್ಯೋದಯದ ವೇಳೆ ಬೆಳಕಿನ ಬದಲಾವಣೆಯಿಂದ ಜೈವಿಕ ಗಡಿಯಾರವು ಸಕ್ರಿಯವಾಗುತ್ತದೆ, ಇದು ಕೋಳಿಗೆ ಸಿಗ್ನಲ್​ ನೀಡುತ್ತದೆ. ಕೋಳಿಯ ಕಣ್ಣುಗಳು ಬೆಳಕಿಗೆ ಬಹಳ ಸೂಕ್ಷ್ಮವಾಗಿರುತ್ತವೆ. ಹೀಗಾಗಿ ಕೋಳಿಯ ಕಣ್ಣುಗಳು ಸೂರ್ಯೋದಯದ ವೇಳೆ ಬೆಳಕಿನ ಬದಲಾವಣೆಯನ್ನು ತಕ್ಷಣವೇ ಹಿಡಿದುಕೊಳ್ಳುತ್ತವೆ, ಮೆದುಳಿಗೆ ಸಂಕೇತವನ್ನು ಕಳುಹಿಸುತ್ತದೆ. ಇದರಿಂದ ಕೋಳಿಗಳು ಕೂಗುತ್ತವೆ ಮತ್ತು ಬೆಳಕಿಗೆ ಹೊಂದಿಕೊಳ್ಳುತ್ತವೆ.

ಇದಲ್ಲದೆ ಕೋಳಿಗಳ ಸಾಮಾಜಿಕ ನಡವಳಿಕೆ ಅಂದ್ರೆ ಕೂಗುವುದು ತಮ್ಮ ಗುಂಪಿನ ಇತರ ಸದಸ್ಯರಿಗೆ ದಿನ ಪ್ರಾರಂಭವಾಗಿದೆ ಮತ್ತು ಎಚ್ಚರಗೊಳ್ಳಬೇಕೆಂಬ ಸಂಕೇತವಾಗಿದೆ. ಕೋಳಿಗಳು ಕೂಗುವ ಮೂಲಕ ತಮ್ಮ ಪ್ರದೇಶದಲ್ಲಿ ಇತರ ಕೋಳಿಗಳನ್ನು ಎಚ್ಚರಿಸುತ್ತವೆ. ಇದಲ್ಲದೆ ಕೆಲವು ಸಂದರ್ಭಗಳಲ್ಲಿ ಕೋಳಿಗಳು ಹೆಣ್ಣನ್ನು ಆಕರ್ಷಿಸಲು ಸಹ ಕಿರುಚುತ್ತವಂತೆ.

ಶತಮಾನಗಳಿಂದಲೂ ಕೋಳಿಗಳ ಕೂಗನ್ನು ಸಮಯದ ಸಂಕೇತವೆಂದೇ ಪರಿಗಣಿಸಲಾಗಿದೆ. ರೈತರಿಗಂತೂ ಕೋಳಿ ಕೂಗುವುದು ದಿನವನ್ನ ಪ್ರಾರಂಭಿಸುವ ಸಂಕೇತವಾಗಿದೆ. ಇಂದಿಗೂ ಕೆಲವೆಡೆ ಇದು ನಡೆದುಕೊಂಡು ಬರುತ್ತಲೇ ಇದೆ. ಕೋಳಿ ಕೂಗಿದರೆ ಮಾತ್ರ ಬೆಳಗಾಗುವುದು ಅಂತಾ ಭಾವಿಸಿರುವ ಜನರು ಸಹ ಇದ್ದಾರೆ. ಕೋಳಿಗಳು ನೈಸರ್ಗಿಕ ಪ್ರಪಂಚದ ಜೀವನ ಚಕ್ರದ ವಿಶೇಷ ಭಾಗವಾಗಿದೆ. ಇದು ಹಗಲು-ರಾತ್ರಿಯ ಚಕ್ರವನ್ನು ಪ್ರತಿಬಿಂಬಿಸುತ್ತದೆ. ಇದು ಇತರ ಪ್ರಾಣಿಗಳ ನಡವಳಿಕೆಯ ಮೇಲೂ ಪರಿಣಾಮ ಬೀರುತ್ತದಂತೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow