ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ: ರಾಯಚೂರು ಯುವಕ ಅಂದರ್!

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದ್ದ ರಾಯಚೂರು ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 24 ವರ್ಷದ ಸೋಹೆಲ್ ಪಾಶಾ ಬಂಧಿತ ಆರೋಪಿ. ಮುಂಬೈನ ವರ್ಲಿ ಅಪರಾಧ ವಿಭಾಗದ ಪೊಲೀಸರು ಹಾಡಿನ ಮೂಲಕ ಜೀವ ಬೆದರಿಕೆ ಹಾಕಿದ್ದ ಯುವಕನಿಗಾಗಿ ರಾಯಚೂರಿನ ಮಾನ್ವಿಗೆ ಆಗಮಿಸಿದ್ದರು. ಈ ಸಂಬಂಧ ಹುಡುಕಾಟ ನಡೆಸಿ ಯುವಕನನ್ನು ಪಟ್ಟಣದಲ್ಲಿ ಬಂಧಿಸಿ, ಕರೆದೊಯ್ದಿದ್ದಾರೆ.
ಸೋಹೆಲ್ ಪಾಶಾ ಹವ್ಯಾಸಿ ಹಾಡುಗಾರನಾಗಿದ್ದು ತನ್ನ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲು ಈ ಕೃತ್ಯ ಎಸಗಿದ್ದನು ಎನ್ನಲಾಗಿದೆ. ತನ್ನ ಹೊಸ ಹಾಡು ಮೈ ಸಿಕಂದರ್ ಹೂಂ ಜನಪ್ರಿಯಗೊಳಿಸಲು ಹೀಗೆ ಮಾಡಿರುವುದಾಗಿ ಯುವಕ ಒಪ್ಪಿಕೊಂಡಿದ್ದಾನೆ.
ನಿಮ್ಮ ಪ್ರತಿಕ್ರಿಯೆ ಏನು?






