ಅಭಿಮಾನಿ ಕೊಟ್ಟ ಗಿಫ್ಟ್ ನೋಡಿ ಡಾಲಿ ಭಾವುಕ: ಇದೇ ಬೆಸ್ಟ್ ಅಂದ್ರೂ ನಟ! ಅಂತದ್ದೇನಿತ್ತು?

ಇತ್ತೀಚೆಗೆ ನಟ ರಾಕ್ಷಸ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ಅವರ ಮಾಡುವ ಮೈಸೂರಿನಲ್ಲಿ ಅದ್ದೂರಿಯಾಗಿ ಜರುಗಿದೆ.
ಡಾಲಿ ಮದುವೆಗೆ ಸಾವಿರಾರು ಮಂದಿ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು. ಅಲ್ಲದೇ ಡಾಲಿ ಧನಂಜಯ್ ಮದುವೆಗೆ ಹಲವು ಸ್ಯಾಂಡಲ್‌ವುಡ್ ಕಲಾವಿದರು ಆಗಮಿಸಿ ನವಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಇನ್ನೂ, ಡಾಲಿ ಮದುವೆಗೆಂದು ಅಭಿಮಾನಿಯೊಬ್ಬರು ಉಡುಗೊರೆ ತೆಗೆದುಕೊಂಡು ನೇರವಾಗಿ ಮನೆಗೆ ಹೋಗಿದ್ದಾರೆ. ಅಭಿಮಾನಿಯೊಬ್ಬರು ಕೊಟ್ಟ ಗಿಫ್ಟ್ ಅನ್ನು ನೋಡಿ ನಟ ಡಾಲಿ ಧನಂಜಯ ಭಾವುಕರಾಗಿದ್ದಾರೆ. ಹೌದು, ನಟ ಡಾಲಿ ಅವರಿಗೆ ತಮ್ಮ ಅಜ್ಜಿ ಎಂದರೆ ಬಲು ಇಷ್ಟ. ಆದರೆ ಜುಲೈ 23ರಂದು ನಟನ ಅಜ್ಜಿ ಅಜ್ಜಿ ಮಲ್ಲಮ್ಮ (95) ವಯಸ್ಸಹಜ ಕಾಯಿಲೆಯಿಂದ ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಅಸುನೀಗಿದ್ದರು. ಮಲ್ಲಮ್ಮ ಅವರಿಗೆ ಒಟ್ಟು 5 ಜನ ಮಕ್ಕಳು. ಆ ಪೈಕಿ ಎರಡನೇ ಮಗ ಅಡವಿಸ್ವಾಮಿಯ ಮಗ ಧನಂಜಯ್. ಹೀಗಾಗಿ ಡಾಲಿ ಎಂದರೆ ಮಲ್ಲಮ್ಮ ಅವರಿಗೂ ಇಷ್ಟ ಇತ್ತು.
ಹೀಗೆ ಅಭಿಮಾನಿಯೊಬ್ಬರು ಡಾಲಿ ಧನಂಜಯ ಅವರಿಗೆ ಫೋಟೋ ಫ್ರೇಮ್ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಅಭಿಮಾನಿ ಕೊಟ್ಟ ಫ್ರೇಮ್ನಲ್ಲಿ ಡಾಲಿ, ಧನ್ಯತಾ ಹಾಗೂ ಅವರ ಅಜ್ಜಿ ಮಲ್ಲಮ್ಮ ಭಾವಚಿತ್ರ ಇದೆ. ಇದನ್ನೇ ನೋಡಿದ ಡಾಲಿ ಭಾವುಕರಾಗಿದ್ದಾರೆ
ನಿಮ್ಮ ಪ್ರತಿಕ್ರಿಯೆ ಏನು?






