ಅಯ್ಯೋ ಇದೆಂಥಾ ದುರ್ವಿಧಿ: 3 ತಿಂಗಳು ಮರೆಯಾದ ಅಕ್ಕನನ್ನೇ ಮರೆತ ತಮ್ಮ, ಬಿಕ್ಕಿ-ಬಿಕ್ಕಿ ಅತ್ತ ಮೋಕ್ಷಿತಾ!

ಜನವರಿ 1, 2025 - 14:00
 0  20
ಅಯ್ಯೋ ಇದೆಂಥಾ ದುರ್ವಿಧಿ: 3 ತಿಂಗಳು ಮರೆಯಾದ ಅಕ್ಕನನ್ನೇ ಮರೆತ ತಮ್ಮ, ಬಿಕ್ಕಿ-ಬಿಕ್ಕಿ ಅತ್ತ ಮೋಕ್ಷಿತಾ!

ಇದೆಂಥಾ ದುರ್ವಿಧಿ ಮರ್ರೆ. ಜಸ್ಟ್ ಮೂರು ತಿಂಗಳು ಮರೆ ಆಗಿದ್ದಕ್ಕೆ ಸಾಕಿ ಸಲುಹಿದ್ದ ಅಕ್ಕನನ್ನೇ ತಮ್ಮ ಮರೆತು ಹೋಗಿದ್ದಾನೆ. ಎಸ್ ನಾವ್ ಹೇಳುತ್ತಾ ಇರೋದು ಬಿಗ್ ಬಾಸ್ ಕಂಟಸ್ಟಂಟ್ ಬಗ್ಗೆ. 

ಫಿನಾಲೆ ಹತ್ತಿರ ಬರುತ್ತಿದ್ದಂತೆ ಬಿಗ್‌ ಬಾಸ್  ಮನೆ ಮಂದಿಗೆ ಸರ್ಪ್ರೈಸ್‌ ಸಿಕ್ಕಿದೆ. ಮೂರು ತಿಂಗಳ ಬಳಿಕ ಮನೆಯವರನ್ನು ನೋಡಿ ಸ್ಪರ್ಧಿಗಳು ಖುಷ್‌ ಆಗಿದ್ದಾರೆ.ಬಿಗ್‌ ಬಾಸ್‌ ಆಟ 92 ದಿನಗಳನ್ನು ಪೂರ್ತಿಗೊಳಿಸಿದೆ. ಸ್ಪರ್ಧಿಗಳು ಮನೆಮಂದಿಯಿಂದ ದೂರವಾಗಿ ಮೂರು ತಿಂಗಳು ಕಳೆದಿದೆ. ಈ ಹಿಂದೆ ಕಲ ಸ್ಪರ್ಧಿಗಳಿಗೆ ಫೋನ್‌ನಲ್ಲಿ ಮನೆಮಂದಿ ಜತೆ ಮಾತನಾಡುವ ಅವಕಾಶ ಸಿಕ್ಕಿತ್ತು.
ಇದೀಗ ಬಿಗ್‌ ಬಾಸ್‌ ಸ್ಪರ್ಧಿಗಳ ಪೋಷಕರನ್ನು ದೊಡ್ಮನೆಗೆ ಕರೆಸಿಕೊಂಡು ಸರ್ಪ್ರೈಸ್‌ ನೀಡಿದ್ದಾರೆ. ಆದರೆ ತಮ್ಮನನ್ನು ನೋಡಿ ಅಕ್ಕ ಮೋಕ್ಷಿತಾ ಕಣ್ಣೀರು ಹಾಕಿರುವುದು ಎಲ್ಲರ ಕರುಳು ಚುರುಕ್ ಅನ್ನುತ್ತೆ.

ಹೊಸ ವರ್ಷ ಬಿಗ್​ಬಾಸ್​ ಮನೆಯಲ್ಲೂ ಅದ್ಧೂರಿಯಾಗಿ ಸೆಲೆಬ್ರೆಷನ್ ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ಸಖತ್ ಆಗಿಯೇ ಕುಣಿದು ಕುಪ್ಪಳಿಸುತ್ತಿದ್ದರು. ಮೋಕ್ಷಿತಾ ಕೂಡ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಬಿಗ್​ಬಾಸ್​ಗೆ ಬಂದ ಮೇಲೆ ಪ್ರೀತಿಯ ಸಹೋದರನ್ನು ಮರೆತು ಡ್ಯಾನ್ಸ್​ ಮಾಡುತ್ತಿದ್ದರು. ಆದರೆ ಈ ವೇಳೆ ನೋಡಿ ಫುಲ್ ಶಾಕ್ ಆಗಿರೋದು. ಬಿಗ್​ಬಾಸ್​ ಮನೆಗೆ ಕುಟುಂಬ ಬರುತ್ತಿದ್ದಂತೆ ತಮ್ಮನನ್ನು ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಇಷ್ಟು ದಿನ ಬಿಟ್ಟು ಇದ್ದಿದ್ದೆ. ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೆ. ಪುಟಾಣಿ ಎಂದು ಕರೆದರೂ ವೀಲ್ ಚೇರ್ ಮೇಲಿದ್ದ ಸಹೋದರ, ಮೋಕ್ಷಿತಾರನ್ನ ಯಾರೆಂದು ಗುರುತಿಸಲಿಲ್ಲ. ಅದಕ್ಕೆ ನನ್ನನ್ನು ಮರೆತು ಹೋಗಿದ್ದಾನೆ. ಇಷ್ಟು ದಿನ ಮನೆಯಲ್ಲಿ ಇರದಿದ್ದಕ್ಕೆ ನನ್ನನ್ನು ಮರೆತು ಹೋಗಿ ಬಿಟ್ಟಿದ್ದಾನೆ ಎಂದು ಮೋಕ್ಷಿತಾ, ತಮ್ಮನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಮೋಕ್ಷಿತಾ ತಂದೆ, ತಾಯಿ ಕೂಡ ಕಣ್ಣೀರು ಹಾಕಿರುವುದು ಎಲ್ಲರನ್ನೂ ಮೂಕವಿಸ್ಮಿತರಾಗಿ ಮಾಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow